(www.vknews.com) : ಟಿಕ್ಟಾಕ್ ಸ್ಟಾರ್ ಎಂದು ಪ್ರಸಿದ್ಧ ಹೊಂದಿರುವ ಬಿಜೆಪಿ ನಾಯಕಿ ಸೋನಾಲಿ ಪೋಗತ್ ಸರ್ಕಾರಿ ಅಧಿಕಾರಿ ಗೆ ಸಾರ್ವಜನಿಕರ ಮುಂದೆ ಹೊಡೆದು ಸುದ್ದಿ ಯಾಗಿದ್ದಾರೆ
ಹರಿಯಾಣದ ಅದಮ್ಪುರ ಕ್ಷೇತ್ರದಿಂದ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಹಾಗೂ ಟಿಕ್ಟಾಕ್ ಸ್ಟಾರ್ ಸೋನಾಲಿ ಪೋಗತ್ ಸ್ಥಳೀಯ ಬಲ್ಸಾಮಾದ್ನ ಮಾರುಕಟ್ಟೆಯಲ್ಲಿ ದುರ್ವರ್ತನೆ ತೋರಿದ್ದಾರೆ.
ಮಂಡಿ ಕಾರ್ಯದರ್ಶಿ ಸುಲ್ತಾನ್ ಸಿಂಗ್ ಎಂಬುವವರನ್ನು ಚಪ್ಪಲಿಯಿಂದ ಹೊಡೆದು ಸುದ್ದಿಯಾಗಿದ್ದಾರೆ. ಸೋನಾಲಿ ಪೋಗತ್ ಚಪ್ಪಲಿಯಿಂದ ಅಧಿಕಾರಿಯನ್ನು ಹೊಡೆಯುವ ವಿಡಿಯೋ ಈಗ ಸೋಶಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದ್ದು ಜನರು ಸೋನಾಲಿ ಪೋಗತ್ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಂಡಿ ಕಾರ್ಯದರ್ಶಿ ಸೋನಾಲಿ ಪೋಗತ್ ಜೊತೆ ಅನುಚಿತ ವರ್ತನೆ ಮಾಡಿದ ಕಾರಣ ಕೋಪಗೊಂಡು ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ ಆದರೆ ವಿಡಿಯೋ ನೋಡಿದ ಜನರು ಅನುಚಿತವಾಗಿ ವರ್ತಿಸಿದ್ದರೆ ಪೊಲೀಸ್ ಕಂಪ್ಲೆಂಟ್ ಮಾಡಬಹುದಿತ್ತು, ಚಪ್ಪಲಿಯಿಂದ ಹೊಡೆಯಲು ನಿಮಗೆ ಯಾರು ಅಧಿಕಾರ ನೀಡಿದ್ದು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಸದ್ಯ ಇಬ್ಬರು ಕಡೆ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಾಗಿದ್ದು ತನಿಖೆ ಮುಂದುವರೆದಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.