ಕಾದಿರುವೆ ವಸಂತರಾಣಿ ಸಂಗಮಕ್ಕೆ.! : (ಕವನ)

ಕವನ : (www.vknews.com)

ಹುಣ್ಣಿಮೆಯ ವೃತ್ತ ಚಂದ್ರನ ಹೊನಲು ನಿನ್ನ ಚಲನ
ರೇಷದ ಮತ್ತಿಗೆ ಅಮಲೇರಿಸುವಂತ ನಿನ್ನ ವದನ
ಚೆಂಬಳಿಕಿನಲ್ಲಿ ಚೆಂಬೋದಿಗೆಯಂತೆ ನಿನ್ನ ಸಮಯ
ಶಶಿತೀರದಿ ಬಕಪಕ್ಷಿಯಂತೆ ನಿನ್ನ ಇನಿಯ

ಮನಗಂಟಿನ ಪ್ರೇಮದ ನುಡಿ ಬಿಚ್ಚಿಲ್ಲ
ಮೌನದೊಳಗೆ ಪ್ರೀತಿಯ ಸುಃಖ ವಿದೆಯಲ್ಲ
ಸಹಸ್ರ ಸಂದೇಶದ ಪಾರಿಜಾತ ಬಿಟ್ಟೆನಲ್ಲ
ವಸಂತ ರಾಣಿಯ ಉತ್ತರವೂ ದೊರೆತಿಲ್ಲ

ಕವಿಕಾರ ನಾನಲ್ಲ
ಚೆಂಬೋದಿಗೆಯ ಅಮಲು ನನ್ನದಲ್ಲ
ನೃತ್ಯ ರಾಣಿಗೆ ಸೇರುವ ಹಂಬಲವಿದೆಯಲ್ಲ.!!!
…..ಕಾದಿರುವೆ ವಸಂತರಾಣಿ ಸಂಗಮಕ್ಕೆ…?

– ದರೇಶ್ ಬಿರಾದಾರ್ ಬಿಜಾಪುರ.

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...