ಕಲಿವೀರದಲ್ಲಿ ಗ್ಲಾಮರ್ ಗೊಂಬೆ ಅನಿತಾ ಭಟ್

(www.vknews.com) : ದಿನದಿಂದ ದಿನಕ್ಕೆ ನಿರೀಕ್ಷೆ ಹೆಚ್ಚಿಸುತ್ತಿರುವ ಹೊಸಬ್ಬರ ಚಿತ್ರಗಳಲ್ಲಿ ಕಲಿವೀರ ಮುಂಚೂಣಿಯಲ್ಲಿದೆ. ಇದಕ್ಕೆ ಸಾಕ್ಷಿ , ಈ ಚಿತ್ರದ ವಿಭಿನ್ನ ಪೋಸ್ಟರ್ಗಳು ಮತ್ತು ಮೇಕಿಂಗ್ ವೀಡಿಯೋ. ಇತ್ತೀಚೆಗೆ ಈ ಚಿತ್ರದ ಮತ್ತೊಂದು ವಿಶೇಷತೆ ಬಹಿರಂಗವಾಗಿದೆ. ಅದೇನೆಂದರೆ ಮಾದಕ ನಟಿ ಅನಿತಾ ಭಟ್.

ಅನಿತಾ ಭಟ್ ನಟಿಸಿರುವ ಸಾಕಷ್ಟು ಸಿನಿಮಾಗಳಲ್ಲಿ ತಮ್ಮ ದೇಹ ಸೌಂದರ್ಯವನ್ನು ಪ್ರೇಕ್ಷಕರಿಗೆ ರಸದೌತಣವಾಗಿ ಬಡಿಸಲಾಗುತ್ತದೆ. ಸೂರಿ ನಿರ್ದೇಶನದ ಶಿವಣ್ಣ ನಟನೆಯ ಸೂಪರ್ ಹಿಟ್ ಟಗರು ಚಿತ್ರದಲ್ಲಿನ ಸೆಕ್ಸಿ ಪಾತ್ರದಲ್ಲಿ ಅನಿತಾ ಭಟ್ ನಟನೆಯು ಎಷ್ಟೊ ಪಡ್ಡೆ ಹುಡುಗರ ನಿದ್ದೆ ಕೆಡಿಸಿತ್ತು. ಹಿಂದೆ ಕನ್ನಡ ದೇಶದೊಳ್ ಎಂಬ ಹೊಸ ಕಲ್ಪನೆಯ ಚಿತ್ರವನ್ನ ಕನ್ನಡಿಗರ ಮುಂದಿಟ್ಟಿದ್ದ ಅವಿರಾಮ್ ಕಂಠೀರವ, ಇಂದು ಕಲಿವೀರನ ಸಾರಥಿ. ಅವಿರಾಮ್ ಈ ಚಿತ್ರಕ್ಕೆ “ಅವಿ” ಆಗಿದ್ದಾರೆ. ಅವಿ ನಿರ್ದೇಶನದ ಈ ಹೈ ವೋಲ್ಟೇಜ್ ಚಿತ್ರಕ್ಕೆ ಉತ್ತರ ಕರ್ನಾಟಕದ ಬಹುಮುಖ ಪ್ರತಿಭೆ “ಏಕಲವ್ಯ” ನಾಯಕ. ಏಕಲವ್ಯ ಸಾಕಷ್ಟು ತಯಾರಿಗಳೊಂದಿಗೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವುದು ಗಮನಾರ್ಹ. ರಾಣೆಬೆನ್ನೂರಿನ ಜ್ಯೋತಿ ಆರ್ಟ್ಸ್ ಸಂಸ್ಥೆ ನಿರ್ಮಾಣ ಮಾಡಿರುವ ಕಲಿವೀರ ಚಿತ್ರದಲ್ಲಿ ಅನಿತಾ ಭಟ್ ಎರಡು ರೀತಿಯ ಶೇಡ್ ಇರುವ ಚಾಲೆಂಜಿಂಗ್ ಪಾತ್ರ ಮಾಡಿದ್ದಾರಂತೆ. ಗ್ಲಾಮರ್ ಹಾಗೂ ಸಾಹಸ ದೃಶ್ಯ ಗಳಲ್ಲಿ ನಟಿಸಿರುವ ಇವರು, ಸಖತ್ ಹಾಟ್ ದೃಶ್ಯಗಳಲ್ಲಿ ಮೈ ಚಳಿ ಬಿಟ್ಟು ನಟಿಸಿರುವ ಹಸಿ ಬಿಸಿ ದೃಶ್ಯಗಳು ಕೂಡ ಸಿನಿಮಾದಲ್ಲಿ ಕಾಣಬಹುದಂತೆ.

ಗ್ಲಾಮರ್ ಗೊಂಬೆ ಅನಿತಾ ಭಟ್ ಈ ಕಲಿವೀರದಲ್ಲಿ ಬರಿ ಗ್ಲಾಮರ್ ಗಷ್ಟೆ ಸೀಮಿತವಾಗದೆ ನೆಗಟಿವ್ ಶೇಡ್ ಇರುವ ರಗಡ್ ಪಾತ್ರದಲ್ಲಿ ಕೈಯಲ್ಲಿ ಗನ್ ಹಿಡಿದುಕೊಂಡು ತುಂಡು ಬಟ್ಟೆಯನ್ನು ಧರಿಸಿ ಮಾದಕ ನೋಟದಲ್ಲಿ ಪ್ರೇಕ್ಷಕನ ಗುಂಡಿಗೆಯ ಬಡಿತ ಹೆಚ್ಚಿಸುವ ಅಮೋಘ ಪಾತ್ರ ಮಾಡಿರುವ ತೃಪ್ತಿ ಅನಿತಾ ಭಟ್ ರವರಿಗಿದೆ. ಅನಿತಾ ಭಟ್ ವೃತ್ತಿ ಜೀವನದಲ್ಲಿ ಕಲಿವೀರ ಚಿತ್ರದ “ವಿಧಿ” ಪಾತ್ರ ತುಂಬಾ ಮೆಚ್ಚುಗೆ ಪಡೆಯುತ್ತದೆ ಎಂಬುದು ನಿರ್ದೇಶಕ ಅವಿ ಅವರ ಅನಿಸಿಕೆ.

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...