ಚುಟುಕು

1) ಆಸೆ

” ನನ್ನ ವಲವಿನ ಹೂವೇ…..
ನಿನ್ನ ತನು ನನ್ನ ಮೈಮರೆಸಿದೆ
ನಿನ್ನ ಮಕರಂದ ಹೀರಲೆಂದೇ…..
ಅರಶಿಣದ ಕೊಂಬಿನ ಧಾರವ ತಂದೆ “

2) ಓಲೆ

” ನಿನಗಾಗಿ ಬರೆದ ಓಲೆ
ಅರ್ಥೈಸಿಕೋ ನನ್ನ ಪ್ರೀಯತಮ,
ಹರಿದು ಅಪಮಾನ ಮಾಡದಿರು ಪ್ರೀತಿನ
ಇದರಲ್ಲಿ ಅಡಗಿದೆ ನನ್ನ ಮನ “

3) ಜೀವನದ ಸತ್ಯ

” ಗುಣವಂತರಿಗಿರುವ ಬೆಲೆ
ಧನವಂತರಿಗೆ ಇರದು
ಸತ್ತಾಗ ಧನ ಜೊತೆ ಬರದು
ಗುಣಗಾನ ಬದುಕಿ ಉಳಿವದು “

✍️ ಸುನಿತಾ. ಎಸ್. ಪಾಟೀಲ

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...