ಕವನ : (www.vknews.com)
ನಗು ಮನಮುದ ಗೋಳೆ
ಗಲ್ಲದಿ ದೃಷ್ಟಿ ಬೊಟ್ಟಿನೊಳೆ
ವನ ಸುಮ ವದನನೆಯಳೆ
ಮೊಗದಲಿ ಚಂದ್ರಕಾಂತಿಯಳೆ
ಬದುಕಿನ ಬಾಳ ನೌಕೆಯೊಳೇ
ನಮ್ಮಯ ಬಾಳ ರಥ ಏರಿದವಳೇ
ಕಂತು ಪಿತನ ಕರುಣಿಯವಳೇ
ಇಂತು ಬಂದಳು ದೀಪಾ ಗೃಹದೊಳಗೆ
ಹರುಷವಾಂತೆನು ಹಿರಿ ಲಕುಮಿಯಾಗಿ
ವರುಷವಾಂತೆ ಹಿರಿಯರ ಸರಿ ಹೊಂದಿಸಿ
ಪುರುಷ ಪುಂಗವ ಜೇಷ್ಠನ ಸತಿಯಾಗಿ
ಸರಸ ತಂದಳು ಕರ್ಣೇಷು ಮಂತ್ರಿಯಾಗಿ
ಮಾತೆ ದುರ್ಗೆಯ ವಾಸ ಸಮೀಪ
ಖ್ಯಾತ ಪ್ರ”ದೀಪ” ಸಧನದಿಂ ಮನದೀಪ
ಪ್ರಖ್ಯಾತ ಶ್ರೀ ಹರಿಯ ಕರುಣಿಪ
ವಿಖ್ಯಾತಾಳಗುವೆ ನಭದವರೆಗೆ ಅನಿತಾನಿಪ
ವಿಕೆ ಪ್ರತಿನಿಧಿಯ ವೈವಾಹಿಕ ಜೀವನದ ಮೊದಲ ವರುಷ ಶುಭಾಶಯಗಳು ಕೋರುವ,
– ವಿಶ್ವ ಕನ್ನಡಿಗ ನ್ಯೂಸ್ ತಂಡ