ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ದ.ಕ ಜಿಲ್ಲಾ ನಾಯಕರಿಂದ ಮಂಗಳೂರು ನಗರದ ವೀರ ಹುತಾತ್ಮ ಸ್ಮಾರಕಕ್ಕೆ ಭೇಟಿ ಮತ್ತು ಮಡಿದ ಯೋಧರಿಗೆ ಶ್ರದ್ಧಾಂಜಲಿ

(www.vknews.com) : ದ. ಕ ಜಿಲ್ಲೆಯ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ದ.ಕ ಜಿಲ್ಲಾ ನಾಯಕರುಗಳು ಮಂಗಳೂರು ನಗರದಲ್ಲಿರುವ ವೀರ ಯೋಧರ ಸ್ಮಾರಕಕ್ಕೆ ಭೇಟಿ ನೀಡಿ ಹೂಗುಚ್ಚವನ್ನು ಇಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಈ ಸಮಯದಲ್ಲಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷರಾದ ಸುಲೈಮಾನ್ ಕಲ್ಲರ್ಪೆ ಕೇಂದ್ರ ಸರಕಾರವು ಯೋಧರಿಗೆ ಒಂದು ಕೋಟಿ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿದರು.

“ಜೈ ಜವಾನ್ ಜೈ ಕಿಸಾನ್” ಯೋಧರು ಮತ್ತು ರೈತರು ನಮ್ಮ ದೇಶದ ಹೆಮ್ಮೆಯ ಸಂಕೇತ ಎಂದು ಹೇಳಿದ ಲಾಲ್ ಬಹದ್ದೂರ್ ಶಾಸ್ತ್ರಿ ಅಂತಹ ಪ್ರಧಾನಿಯ ಅವಶ್ಯಕತೆ ಇದೆ ಹೊರತು ಚೀನಾ ನಮ್ಮ ದೇಶದ 60 ಚದರ ಕಿ.ಮೀ ಭೂ ಪ್ರದೇಶವನ್ನು ಆಕ್ರಮಿಸಿ ಬರುವಾಗಲು ರಾಜಸ್ಥಾನದಲ್ಲಿ ಶಾಸಕರನ್ನು ಖರೀದಿಸುವುದರಲ್ಲಿ ತಲ್ಲೀನರಾಗಿರುವ ಪ್ರಧಾನ ಮಂತ್ರಿಯ ಅಗತ್ಯವಿಲ್ಲ ಎಂದು ಕಿಡಿಕಾರಿದರು.ಅದೇ ರೀತಿ ಚೀನಾದೊಂದಿಗೆ ನಮ್ಮ ಎಲ್ಲಾ ವ್ಯವಹಾರವನ್ನು ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಫೆಡರೇಷನ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ದ.ಕ ಜಿಲ್ಲಾ ಕಾರ್ಯದರ್ಶಿ ದಿವಾಕರ್ ಬೊಳೂರ್ ರವರು ಮಾತನಾಡಿ ನಮ್ಮ ಸುತ್ತಲಿರುವ ಸಣ್ಣ ಪುಟ್ಟ ರಾಷ್ಟ್ರಗಳು ಬ್ರಹತ್ ರಾಷ್ಟವಾದ ಭಾರತಕ್ಕೆ ತೊಂದರೆ ನೀಡುತ್ತಿದ್ದು ಇದನ್ನು ಅಂತರಾಷ್ಟ್ರೀಯವಾಗಿ ಗಮನಕ್ಕೆ ತಂದು ಆ ದೇಶದ ವಿರುದ್ಧ ಕ್ರಮ ಕೈಕೊಳ್ಳುವಂತೆ ಮಾಡಬೇಕು ಹಾಗೂ ದೇಶದ ಕೈಗಾರಿಕಾ ಮತ್ತು ಉದ್ಯೋಗ ಸೃಷ್ಟಿ ಮಾಡುವ ವ್ಯವಸ್ಥೆ ಮಾಡಬೇಕು ಎಂದು ಕೇಂದ್ರ ಸರಕಾರಕ್ಕೆ ಕಿವಿಮಾತನ್ನು ಹೇಳಿದರು.

ಪಕ್ಷದ ಮಂಗಳೂರು ವಲಯಧ್ಯಕ್ಷರಾದ ಮುತ್ತಲಿಬ್ ಎಸ್.ಎಂ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸರ್ಫಾರಾಜ್ ಎಡ್ವಕೇಟ್, ಮಾಜಿ ಜಿಲ್ಲಾಧ್ಯಕ್ಷ ಝಹೀದ್ ಹುಸೈನ್ ಮತ್ತು ಫ್ರೆಟರ್ನಿಟಿ ಮೂವ್ ಮೆಂಟ್ ಕರ್ನಾಟಕದ ರಾಜ್ಯಾಧ್ಯಕ್ಷರಾದ ತಫ್ಲೀಲ್ ಯು. ಉಪಸ್ಥಿತರಿದ್ದರು.

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...