ಅವನು – ಇವಳು (ಕವನ)

(www.vknews.com) :

ಅವಳ ಮುಂಗುರುಳಿಗೆ ಗಾಳಿ ಸೋಕುವುದನ್ನೇ ಕಾಯುವ ಅವನು.
ಅವನ ಮೀಸೆಯಂಚಿನ ನಗುವಿಗೆ
ಸೋತು ನಾಚುವ ಇವಳು.

ಹುಚ್ಚು ಕನಸುಗಳ ಹುಡುಗಿಯ
ಗೆಜ್ಜೆನಾದದ ಹುಚ್ಚು ಅವನಿಗೆ.
ಅವನಿಗರಿಯದೆ ಅವನ ಹೆಜ್ಜೆ ಗುರುತುಗಳ
ಮೇಲೆ ನಡೆಯುವ ಹುಚ್ಚು ಇವಳಿಗೆ.

ಬಿಚ್ಚಿಟ್ಟ ತುಡಿತಗಳ ಹುಡುಗಿಯ
ನೋಟವೇ ಹಬ್ಬ ಇವನಕಂಗಳಿಗೆ.
ಬಯಸಿ ಬಂದ ಎದೆಬಡಿತಗಳ
ಆಲಿಸುವುದೇ ಹಬ್ಬ ಅವಳ ಕರ್ಣಗಳಿಗೆ.

ಇವರಿಬ್ಬರ ನಡುವಿನ ಕಡುಮೌನವೇ ಸಾಕ್ಷಿ
ಅವನ-ಇವಳ ಹೂ-ಪ್ರೀತಿಗೆ.

✍️ ವಿಸ್ಮಯ

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...