ದಮ್ಮಾಮ್(www.vknews.in): ಸೋಷಿಯಲ್ ಫಾರಂ( ISF) ಕರ್ನಾಟಕ ,ಹಫರ್ ಅಲ್ ಬತೀನ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆಯ ಜಂಟಿ ಸಹಯೋಗದೊಂದಿಗೆ ಸೆಂಟ್ರಲ್ ಬ್ಲಡ್ ಬ್ಯಾಂಕ್ ಹಫರ್ ಅಲ್ ಬಾತಿನ್, ಸೌದಿ ಅರೇಬಿಯಾ ಇವರ ಸಹಭಾಗಿತ್ವದಲ್ಲಿ ವಿಶ್ವ ರಕ್ತದಾನಿಗಳ ದಿನದ ಪ್ರಯುಕ್ತ ಬ್ಲಡ್ ಡೋನರ್ಸ್ ಮಂಗಳೂರು(ರಿ) ಇದರ 242 ನೇ ಬೃಹತ್ ರಕ್ತದಾನ ಶಿಬಿರವು ದಿನಾಂಕ 20/06/2020 ನೇ ಶನಿವಾರದಂದು ಸೆಂಟ್ರಲ್ ಬ್ಲಡ್ ಬ್ಯಾಂಕ್ ಹಫರ್ ಅಲ್ ಬಾತಿನ್ ಸೌದಿ ಅರೇಬಿಯಾ ಇಲ್ಲಿ ಯಶಸ್ವಿಯಾಗಿ ನಡೆಯಿತು. ಉತ್ಸಾಹದಿಂದ ನಡೆದ ಅನಿವಾಸಿಗರ ರಕ್ತದಾನ:
ಬಹಳ ಹುಮ್ಮಸ್ಸಿನಿಂದ ಭಾಗವಹಿಸಿ ಅನಿವಾಸಿ ಕನ್ನಡಿಗರ ಸಹಿತ ವಿವಿಧ ರಾಜ್ಯಗಳ ಬರೋಬ್ಬರಿ 51 ರಕ್ತದಾನಿಗಳು ರಕ್ತದಾನ ಮಾಡಿ ಮಾನವೀಯತೆ ಮೆರೆದರು.ಕೋವಿಡ್ ವೇಳೆಯಲ್ಲೂ ಬಹಳ ಸುರಕ್ಷಿತವಾಗಿ ಹಮ್ಮಿಕೊಂಡ ಈ ರಕ್ತದಾನ ಶಿಬಿರವು ರಕ್ತನಿಧಿಗಳ ವೈದ್ಯಾಧಿಕಾರಿಗಳು ಹಾಗೂ ರಕ್ತದಾನಿಗಳ ಸಹಕಾರದಿಂದ ಬಹಳ ಯಶಸ್ವಿಯಾಗಿ ನೆರವೇರಿತು. ಶಿಬಿರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಇಂಡಿಯನ್ ಸೋಷಿಯಲ್ ಫಾರಂ ಜುಬೈಲ್ ಇದರ ಪ್ರಧಾನ ಕಾರ್ಯದರ್ಶಿಗಳಾದ ಮೊಹಮ್ಮದ್ ನಝೀರ್ ಅವರು ಸಕಲ ಸುರಕ್ಷಾ ಮಾರ್ಗಗಳನ್ನು ಅನುಸರಿಸಿಕೊಂಡು ಇಂತಹ ಸಂದಿಗ್ದ ಪರಿಸ್ಥಿತಿಯಲ್ಲೂ ಸಾಮಾಜಿಕ ಚಿಂತನೆಯಲ್ಲಿ ತೊಡಗಿಸಿಕೊಂಡಿರುವ ಐ.ಎಸ್ .ಎಫ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು(ರಿ) ಕಾರ್ಯ ವೈಖರಿಯನ್ನು ಶ್ಲಾಘಿಸಿದರು.ಈ ಸಂದರ್ಭದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು (ರಿ) ಕಾರ್ಯ ನಿರ್ವಾಹಕರಾದ ಇರ್ಷಾದ್ ಉಚ್ಚಿಲ ,ಸೆಂಟ್ರಲ್ ಬ್ಲಡ್ ಬ್ಯಾಂಕ್ ಹಫರ್ ಅಲ್ ಬತೀನ್ ಇದರ ವೈದ್ಯಾಧಿಕಾರಿ ಡಾ|ವಿಜಯ್ ಗಾಯಲ್ , ಇಂಡಿಯನ್ ಸೋಷಿಯಲ್ ಫೋರಂ ಇದರ ಸದಸ್ಯರಾದ ಅಶ್ರಫ್ ಕೂಳೂರು ಜುಬೈಲ್ ಹಾಗೂ ಶೇಖ್ ಅಡ್ಯಾರ್ ಜುಬೈಲ್ ಉಪಸ್ಥಿತರಿದ್ದರು. ಇಂಡಿಯನ್ ಸೋಷಿಯಲ್ ಫೋರಂ ಇದರ 15 ಕ್ಕೂ ಹೆಚ್ಚು ಕಾರ್ಯಕರ್ತರು ಸುಗಮ ರಕ್ತದಾನ ಶಿಬಿರಕ್ಕಾಗಿ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಿದರು. ಗೌರವ ಸ್ಮರಣಿಕೆ: ಬ್ಲಡ್ ಡೋನರ್ಸ್ ಮಂಗಳೂರು (ರಿ) ಇದರ ದೇಶ ವಿದೇಶದಲ್ಲಿನ ನಿಸ್ವಾರ್ಥ ಸೇವೆ ಹಾಗೂ ಶಿಬಿರದ ಯಶಸ್ವಿಯ ಫಲವಾಗಿ ಸೆಂಟ್ರಲ್ ಬ್ಲಡ್ ಬ್ಯಾಂಕ್ ಆಡಳಿತ ಮಂಡಳಿಯು ಬಿಡಿಎಂ ಸಂಸ್ಥೆಗೆ ಕಿರುಕಾಣಿಗೆ ಗೌರವಪೂರ್ವಕವಾಗಿ ಕಾರ್ಯನಿರ್ವಾಹಕರಾದ ಇರ್ಷಾದ್ ಉಚ್ಚಿಲ ಇವರಿಗೆ ಹಸ್ತಾಂತರಿಸಿದರು. ರೋಗಿಗಳ ಪಾಲಿನ ನೈಜ ಆಶಾಕಿರಣ www.bloodonorsmanagluru.in
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.