ಬೊಳ್ಳೂರು(ವಿಶ್ವಕನ್ನಡಿಗ ನ್ಯೂಸ್): ವಿಶ್ವ ಪ್ರಸಿದ್ಧ ಉಲಮಾ ಸಂಘಟನೆಯಾದ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ತನ್ನ ಆದರ್ಶ ಪರಿಶುದ್ಧತೆಯ 94 ವರ್ಷಗಳನ್ನು ಪೊರೈಸಿ ಇಂದು ತನ್ನ ಸಂಸ್ಥಾಪಕ ದಿನವನ್ನು ದೇಶದೆಲ್ಲೆಡೆ ಆಚರಿಸುತ್ತಿದ್ದು ಇದರ ಅಂಗವಾಗಿ ಎಸ್.ಕೆ.ಎಸ್.ಎಸ್.ಎಫ್ ಬೊಳ್ಳೂರು ಯೂನಿಟ್ ಇದರ ಆಶ್ರಯದಲ್ಲಿ ಶುಕ್ರವಾರ ಬೆಳಿಗ್ಗೆ ಸಂಸ್ಥಪನಾ ದಿನವನ್ನು ಬೊಳ್ಳೂರಿನ ಶಂಸುಲ್ ಉಲಮಾ ಮೆಮೋರಿಯಲ್ ಪೌಂಡೇಶನ್ ಮುಂಭಾಗದಲ್ಲಿ ಆಚರಿಸಲಾಯಿತು .
ಕಾರ್ಯಕ್ರಮದ ನೇತೃತ್ವವನ್ನು ಶೈಖುನಾ ಬೊಳ್ಳೂರು ಉಸ್ತಾದರು ವಹಿಸಿ ದುಆದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ದ್ವಜಾರೋಹಣ ನಡೆಸಿದರು.
ತ್ವಯ್ಯಿಬ್ ಪೈಝಿ ಬೊಳ್ಳೂರು ಮಾತನಾಡಿ ಸಮಸ್ತದ ಸುದೀರ್ಘ 94 ವರ್ಷಗಳ ಕಾರ್ಯ ಚಟುವಟಿಕೆ, ಸಾಧನೆಗಳ ವಿವರಿಸಿದರು, ಈ ಸಂದರ್ಭ ಎಸ್.ಕೆ.ಎಸ್.ಎಸ್.ಎಫ್ ಹಳೆಯಂಗಡಿ ಯೂನಿಟ್ ಅಧ್ಯಕ್ಷ ಯಯ್ಯ ಪರಂಗಿಬೊಟ್ಟು,ಕಾರ್ಯದರ್ಶಿ ಝೈನುದ್ದಿನ್ ರೈಲ್ವೆಗೇಟ್,ಬೊಳ್ಳೂರು ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷ ಅಲ್ಪಾಝ್ ಬೊಳ್ಳೂರು,ಕಾರ್ಯದರ್ಶಿ ಅಲ್ಪಾಝ್ ಇಂದಿರಾನಗರ ,ಮೆಮೋರಿಯಲ್ ಪೌಂಡೇಶನ್ ಅಧ್ಯಕ್ಷ ಬಿ.ಇ ಮಹಮ್ಮದ್,ಬೊಳ್ಳೂರು ಮಸೀದಿ ಅಧ್ಯಕ್ಷ ಬಿ.ಎಂ ಇಬ್ರಾಹಿಮ್,ಕಾರ್ಯದರ್ಶಿ ಹನೀಫ್ ಐ.ಎ.ಕೆ,ಲೆಕ್ಕಪರಿಶೋಧಕ ಸುಲೈಮಾನ್ ಇಂದಿರಾನಗರ,ಶರೀಫ್ ಇಂದಾದಿ,ರಿಯಾಝ್ ಪೈಝಿ ಮತ್ತಿತರರು ಸೇರಿ ಇತರ ಸದಸ್ಯರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.