ಸುಳ್ಯ (www.vknews.com) : ವಿಶ್ವ ಡ್ರಗ್ಸ್ ವಿರೋದಿ ದಿನದ ಪ್ರಯುಕ್ತ ಕ್ಯಾಂಪಸ್ ಫ್ರಂಟ್ ಸುಳ್ಯ ವತಿಯಿಂದ ಪ್ಲೇ ಕಾರ್ಡ್ ಪ್ರದರ್ಶಿಸಿ ಡ್ರಗ್ಸ್ ವಿರುದ್ದ ಜಾಗೃತಿ ಮೂಡಿಸಲಾಯಿತು.
ಜಾಗತಿಕವಾಗಿ ಯುವ ಪೀಳಿಗೆ ಗಾಂಜಾ, ಸಿಗ್ರೇಟ್, ಮದ್ಯಪಾನ , ಕೊಕೈನ್ ಮುಂತಾದ ಅಮಲು ಪದಾರ್ಥಗಳ ದಾಸರಾಗಿ ತಮ್ಮ ಅಮೂಲ್ಯ ಜೀವವನ್ನು ಬಲಿ ತೆಗೆದುಕೊಳ್ಳವುದು ಹೆಚ್ಚಾಗುತ್ತಿದೆ. ಹಾಗಾಗಿ ಯುವ ಜನತೆಯನ್ನು ಜಾಗೃತರನ್ನಾಗಿ ಮಾಡಿ ಡ್ರಗ್ಸ್ ಮುಕ್ತ ಸಮಾಜ ಕಟ್ಟುವ ಸಲುವಾಗಿ ಕ್ಯಾಂಪಸ್ ಫ್ರಂಟ್ ಸುಳ್ಯ ವತಿಯಿಂದ ಹಲವೆಡೆ ಪ್ಲೇಕಾರ್ಡ್ ಪ್ರದರ್ಶಿಸಿ ಡ್ರಗ್ಸ್ನಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಸುಳ್ಯ ವಲಯ ಅಧ್ಯಕ್ಷರಾದ ಅರ್ಫೀದ್ ಅಡ್ಕಾರ್, ಕಾರ್ಯದರ್ಶಿ ಸಾಜಿದ್ ಸುಳ್ಯ,ಸದಸ್ಯರಾದ ಶಾಹುಲ್ ಹಮೀದ್, ಶಮಾಲ್,ಮನ್ಸೂರ್, ಹುಲೈಫ್,ಅಜ್ನಾಸ್ ಹಾಗೂ ಗಾಂಧಿನಗರ ಯುನಿಟ್ ಕಾರ್ಯದರ್ಶಿ ಸುಹೈಲ್ ಉಪಸ್ಥಿತರಿದ್ದರು. ಊರಿನ ಗಣ್ಯರು ಸಹಿತ ಹಲವಾರು ಮಂದಿ ಕಾರ್ಯಕ್ರಮವನ್ನು ವೀಕ್ಷಿಸಿ ಶ್ಲಾಘಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.