ಅಮೆಜಾನ್ ಫ್ರೈಮ್ ವಿಡಿಯೋದಲ್ಲಿ ಮೊದಲ ಬಾರಿಗೆ ಕನ್ನಡದ ‘ಲಾ’ ಸಿನಿಮಾ ಜುಲೈ 17ರಂದು ಬಿಡುಗಡೆ

(www.vknews.com) : ಕನ್ನಡದ ಬಹುನಿರೀಕ್ಷಿತ ‘ಲಾ’ ಸಿನಿಮಾವು ಜುಲೈ 17ರಂದು ಪ್ರದರ್ಶನಗೊಳ್ಳಲಿದೆ ಎಂದು ಅಮೆಜಾನ್ ಫ್ರೈಮ್ ವಿಡಿಯೋ ತಿಳಿಸಿದೆ. ಇದೊಂದು ಕ್ರೈ ಥಿಲ್ಲರ್ ಆಧರಿಸಿದ ಸಿನಿಮಾವಾಗಿದ್ದು ನಂದಿನಿ ಪಾತ್ರಧಾರಿಯಾಗಿ ರಾಗಿಣಿ ಚಂದ್ರನ್ ಅಭಿನಯಿಸಿದ್ದಾರೆ. ನ್ಯಾಯಕ್ಕಾಗಿ ಅಪರಾಧದ ವಿರುದ್ಧ ಹೋರಾಡುವ ಕತೆ ಇದಾಗಿದ್ದು, ಈ ಚಿತ್ರವು ಮಹಿಳೆಯರ ಮೇಲಿನ ಅನ್ಯಾಯ ಮತ್ತು ಅಪರಾಧದ ವಿರುದ್ಧ ಧ್ವನಿ ಎತ್ತುತ್ತದೆ. ಅಶ್ವಿನಿ ಪುನೀತ್ ರಾಜ್ ಕುಮಾರ್, ಎಂ ಗೋವಿಂದ ನಿರ್ಮಾಣದ ‘ಲಾ’ ಸಿನಿಮಾವನ್ನು ರಘು ಸಮರ್ಥ ಅವರು ನಿರ್ದೇಶಿಸಿದ್ದಾರೆ. ರಾಗಿಣಿ ಪ್ರಜ್ವಲ್ ಅವರು ಈ ಸಿನಿಮಾದ ಮೂಲಕ ಪ್ರಮುಖ ನಟಿಯಾಗಿ ಸ್ಯಾಂಡಲ್ ವುಡ್ ಪ್ರವೇಶಿಸಿದ್ದಾರೆ.

ಮುಖ್ಯಮಂತ್ರಿ ಚಂದ್ರು, ಅಚ್ಯುತ್ ಕುಮಾರ್, ಸುಧಾರಾಣಿ , ಸಿರಿ ಪ್ರಹ್ಲಾದ್ ಮತ್ತಿತರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ‘ಲಾ’ ಸಿನಿಮಾವು ಸ್ಯಾಂಡಲ್ ವುಡ್ ಇಂಡಸ್ಟ್ರಿಯಿಂದ ಬಿಡುಗಡೆಯಾಗಲಿರುವ ಮೊದಲ ಡಿಜಿಟಲ್ ಚಿತ್ರವಾಗಿದೆ. ಪುನೀತ್ ರಾಜ್ ಕುಮಾರ್ ಅವರ ಪಿಆರ್ ಕೆ ಪ್ರೊಡೆಕ್ಷನ್ ರಚಿಸಿದ ಈ ಚಿತ್ರವು ಜುಲೈ 17,2020ರಂದು ಅಮೆಜಾನ್ ಫ್ರೈಂ ವಿಡಿಯೋದಲ್ಲಿ ವಿಶ್ವದಾದ್ಯಂತ 200ಕ್ಕೂ ಹೆಚ್ಚು ದೇಶ ಹಾಗೂ ಪ್ರಾಂತ್ರ್ಯದಲ್ಲಿ ಬಿಡುಗಡೆಯಾಗಲಿದೆ.

 

ವಿಶ್ವ ಕನ್ನಡಿಗ ನ್ಯೂಸ್

    Leave Your Comment

    Your email address will not be published.*

    ಚಾಟ್ ಮಾಡಿ
    1
    VK News Official Chat
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...