ದುಬೈ(www/Vknews.in): ಕಳೆದ ಜನವರಿಯಲ್ಲಿ ಅಮೇರಿಕಾ ನಡೆಸಿದ ಡ್ರೋನ್ ದಾಳಿಗೆ ಬಲಿಯಾಗಿದ್ದ ಇರಾನ್ ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ ಕಾರ್ಪ್ಸ್ (ಐಆರ್ಜಿಸಿ) ಯ ಕಮಾಂಡರ್ ಆಗಿದ್ದ ಜನರಲ್ ಕಾಸೆಮ್ ಸುಲೈಮಾನಿ ಅವರ ಹತ್ಯೆಯ ಸಂಬಂಧಿಸಿ ಇರಾನ್ ಸೋಮವಾರ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಬಂಧನ ವಾರಂಟ್ ಹೊರಡಿಸಿದೆ. ಇರಾನ್ನ ಯುಎಸ್ ವಿಶೇಷ ರಾಯಭಾರಿ ಬ್ರಿಯಾನ್ ಹುಕ್ ಅವರ ಮೂಲಕ ಟ್ರಂಪ್ ಗೆ ವಾರಂಟ್ ನೀಡಲಾಗಿದೆ.
ಅಧ್ಯಕ್ಷ ಟ್ರಂಪ್ ಅವರಿಗೆ ವಾರಂಟ್ ನೀಡಿದ ಕುರಿತು ಪ್ರತಿಕ್ರಯಿಸಿದ ಬ್ರಿಯಾನ್ ಹುಕ್ ‘ಇರಾನ್ ಕ್ರಮವನ್ನು ಯಾರೂ ಗಂಭೀರವಾಗಿ ಪರಿಗಣಿಸಬೇಡಿ ಇದು ಇರಾನ್ ಜನತೆಯನ್ನು ಮೂರ್ಖರನ್ನಾಗಿ ಮಾಡುವ ಹಾಗೂ ಈ ಮೂಲಕ ಪ್ರಚಾರ ಗಿಟ್ಟಿಸುವ ಇರಾನ್ ನ ತಂತ್ರವಾಗಿದೆ’ ಎಂದಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.