ಎರಡು ತಿಂಗಳಿನಿಂದ ಶವಾಗಾರದಲ್ಲಿದ್ದ ತಮಿಳುನಾಡಿನ ಹಿಂದೂ ಸಹೋದರನ ಮೃತದೇಹವನ್ನು ದಫನ ಮಾಡುವ ಮೂಲಕ ಮಾನವೀಯತೆ ಮೆರೆದ ಕತಾರ್ ಐಎಸ್ಎಫ್

ದೋಹಾ(www.vknews.in): ಹೊಟ್ಟೆಪಾಡಿಗಾಗಿ ಹಾಗೂ ಕುಟುಂಬಕ್ಕೆ ನೆರವಾಗಲು ಉದ್ಯೊಗ ಹುಡುಕಿಕೊಂಡು ಹೋಗಿ, ಕುಟುಂಬದ ಕಲ್ಯಾಣಕ್ಕಾಗಿ ದುಡಿಯುವ ಹಾಗೂ ಕೆಲಸದ ಒತ್ತಡದ ನಡುವೆಯೂ ಜಾತಿ ಭೇದ ಮರೆತು ಮಾನವೀಯ ಸೇವೆಗೆ ಸಾಕ್ಷಿಯಾದ ಕತಾರ್ ಇಂಡಿಯನ್ ಸೋಶಿಯಲ್ ಫೋರಮ್ ನ ಮಾನವೀಯ ಸೇವೆಯನ್ನು ಮೆಚ್ಚಲೇಬೇಕು.

ದಿನಾಂಕ 24-04-2020 ರಂದು ಕತಾರಿನ ಕೈಗಾರಿಕ ಪ್ರದೇಶದಲ್ಲಿ ಟೆಕ್ನಿನಿಶೀಯನ್ ವೃತಿಯಲ್ಲಿದ್ದ ತಮಿಳುನಾಡಿನ ಪಡುಕೊಟೈ ಜಿಲ್ಲೆಯ ಸುಬ್ರಹ್ಮಣ್ಯಂ ರವರ ಪುತ್ರ, 46 ವರ್ಷ ಪ್ರಾಯದ ಸೆಲ್ವಂ ಎಂಬುವರು ತನ್ನ ಉದ್ಯೋಗವನ್ನು ಕಳೆದುಕೊಂಡು ಮಾನಸಿಕ ಒತ್ತಡದಿಂದ ಕುಗ್ಗಿ, ತನ್ನ ವಾಸ ಸ್ಥಳದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಘಟನೆ ನಡೆದು ಎರಡು ತಿಂಗಳು ಕಳೆದರೂ ಶವಾಗಾರದಲ್ಲಿದ್ದ ಮೃತದೇಹವನ್ನು ಏನು ಮಾಡುವುದು? ಯಾರನ್ನು ಸಂಪರ್ಕಿಸುವುದು? ಎಂದು ತೋಚದೇ ಕಂಗಾಲಾಗಿದ್ದ ಮೃತ ಸೆಲ್ವಂ ರವರ ಕುಟುಂಬವು‌ ತಮಿಳುನಾಡಿನ SDPI ಕಛೇರಿಗೆ ವಿಷಯವನ್ನು ತಿಳಿಸಿದರು. SDPI ಪಕ್ಷದ ಕಾರ್ಯಕರ್ತರು QISF ನ ತಮಿಳುನಾಡು ಘಟಕದ ರಿಝ್ವಾನ್ ಎಂಬುವರಿಗೆ ವಿಷಯವನ್ನು ತಿಳಿಸಿದರು.

ತಕ್ಷಣ ಕಾರ್ಯಪ್ರವೃತರಾದ ಕತಾರ್ ಇಂಡಿಯನ್ ಸೋಶಿಯಲ್ ಫೋರಂ ನ ಮಾನವೀಯ (Humanitarian Team) ಸೇವೆಯ ಮುಖ್ಯಸ್ಥರಾದ ಅಬ್ದುಲ್ ಲತೀಫ್ ಮಡಿಕೇರಿ‌ ಮತ್ತು QISF ನ ಪ್ರಧಾನ ಕಾರ್ಯದರ್ಶಿ ಬಶೀರ್ ಅಹಮದ್ ತಮಿಳುನಾಡು ಹಾಗೂ ರಿಝ್ವಾನ್ ತಮಿಳುನಾಡು ಇವರನ್ನು ಒಳಗೊಂಡ ಒಂದು ತಂಡವನ್ನು ರಚಿಸಿ, ಕಳೆದೆರಡು ತಿಂಗಳಿನಿಂದ ಮೃತದೇಹವನ್ನು ದಫನ್ ಮಾಡಲು ಉಂಟಾದ ಅಡೆತಡೆಗಳನ್ನು‌ ಅವಲೋಕಿಸಿ, ಅದರ ಬಗ್ಗೆ ಚರ್ಚಿಸಿ ಕೂಡಲೇ ಕಾರ್ಯಪ್ರವುಕ್ತರಾದರು.

ಸೆಲ್ವಂ ಕುಟುಂಬ ಮತ್ತು QISF ನ ತೀರ್ಮಾನದ ಪ್ರಕಾರ, ಕತಾರ್ ನಲ್ಲೇ ದಫನ್ ಮಾಡಲು ಬೇಕಾದಂತಹ ಎಲ್ಲಾ ದಾಖಲೆಗಳನ್ನು ಊರಿನಿಂದ ತರಿಸಿ, ಸಂಸ್ಥೆಯ ಅಧಿಕಾರಿಗಳನ್ನು ಕಂಡು ಪೋಲಿಸ್ ಠಾಣೆ, ಆರೋಗ್ಯ ಇಲಾಖೆ, ಭಾರತೀಯ ರಾಯಭಾರಿ ಕಚೇರಿ ಹಾಗೂ ಹಮದ್ ಮೆಡಿಕಲ್ ಕಾರ್ಪೊರೇಷನಿಂದ ಬೇಕಾದಂತಹ ಎಲ್ಲಾ ದಾಖಲೆ ಪತ್ರಗಳನ್ನು ಸಂಗ್ರಹಿಸಿದರು.

ಊರಿನ ಕುಟುಂಬಸ್ಥರು ಮತ್ತು QISF ನ ಕಾರ್ಯಕರ್ತರು ವಾಟ್ಸ್ ಆಫ್ ಗ್ರೂಪ್ ರಚಿಸಿಕೊಂಡು, ಕೇವಲ ನಾಲ್ಕು ದಿನದಲ್ಲಿ ಎಲ್ಲಾ ಏರ್ಪಾಡುಗಳನ್ನು ಮಾಡಿ, ದಿನಾಂಕ 01-07-2020 ರ ಬುಧವಾರ ಬೆಳ್ಳಿಗ್ಗೆ 10 ಕ್ಕೆ ಕತಾರಿನ ದುಕಾನ್ ನಲ್ಲಿರುವ ಧಫನ ಭೂಮಿಯಲ್ಲಿ, QISF ಕಾರ್ಯಕರ್ತರಾದ ಅಬ್ದುಲ್ ಲತೀಫ್ ಮಡಿಕೇರಿ, ಖಾಲೀದ್ ಮೋಹಸೀನ್ ಮಂಗಳೂರು, ಬಾವಾ ಮೊಹಿಯುದ್ದೀನ್ ತಮಿಳುನಾಡು ಹಾಗೂ ಖಾಲೀದ್ ಕೇರಳ ರವರ ನೇತೃತ್ವದಲ್ಲಿ ಮೃತದೇಹವನ್ನು ದಫನ ಮಾಡಲಾಯಿತು. ಸಾಂಕ್ರಮಿಕ ರೋಗ ಕೊರೋನದ ನಡುವೆಯೂ, ಸಾಮಾಜಿಕ ಅಂತರ ಕಾಪಾಡುವ ಮೂಲಕ ಹಾಗೂ ಮುನ್ನೆಚ್ಚರಿಕೆಯೊಂದಿಗೆ, ಕೇವಲ ಬೆರಳೆಣಿಕೆಯ ಕತಾರ್ ಇಂಡಿಯನ್ ಸೋಶಿಯಲ್ ಫೋರಂ ನ ಕಾರ್ಯಕರ್ತರನ್ನೊಳಗೊಂಡ ತಂಡವು ತಮ್ಮ ಮಾನವೀಯ ಸೇವೆಯನ್ನು ಪೂರ್ತಿಗೊಳಿಸಿದರು. ಮರಣ ಹೊಂದಿದ ವ್ಯಕ್ತಿ ಕೆಲಸದಲ್ಲಿದ್ದ ಸಂಸ್ಥೆಯಿಂದ ಅವರಿಗೆ ಸೀಗಬೇಕಾಗಿದ್ದ ಸೇವಾ ಭತ್ಯೆಯ ಹಣ ಆದಷ್ಟು ಬೇಗ ಪಡೆಯಲು, ಕಂಪನಿಯ ಮುಖ್ಯಸ್ಥರೊಂದಿಗೆ ಮಾತನಾಡಿ ಕುಟುಂಬಕ್ಕೆ ತಲುಪಿಸುವುದಾಗಿ QISF ನ‌ ನಾಯಕರು ಭರವಸೆಯನ್ನು ನೀಡಿದರು.

ಜಾತಿ, ಭೇದ, ವರ್ಣವನ್ನು ಲೆಕ್ಕಿಸದೇ, ಅಚ್ಚುಕಟ್ಟಾಗಿ ಮಾನವೀಯ ಸೇವೆಯಲ್ಲಿ ಕೈಜೋಡಿಸಿದ QISF ನ ಎಲ್ಲಾ ನಾಯಕರಿಗೂ ಹಾಗೂ ಸದಸ್ಯರಿಗೂ ಸೆಲ್ವಂ ನ ಕುಟುಂಬಸ್ಥರು ಧನ್ಯವಾದವನ್ನು ಸಲ್ಲಿಸಿದರು.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...