ಪುತ್ತೂರು(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಕಾರ್ಯಧ್ಯಕ್ಷರುಗಳ ಪದಗ್ರಹಣ #ಪ್ರತಿಜ್ಞಾ_ದಿನ ಆನ್ಲೈನ್ ಆಫ್ ಜೂಮ್ ಮುಖಾಂತರ ಎಲ್ಲ ಕಾರ್ಯಕರ್ತರು ನಾಯಕರುಗಳು ಒಂದಾಗಿ ಪ್ರತಿಜ್ಞೆ ತೆಗೆದುಕೊಳ್ಳುವ ವಿನೂತನ ಕಾರ್ಯಕ್ರದ ಅಂಗವಾಗಿ ನೆಟ್ಟಣಿಗೆ ಮೂಡ್ನೂರು ಜಿಲ್ಲಾ ಪಂಚಾಯತ್ ಸದಸ್ಯೆ ಅನಿತಾ ಹೇಮನಾಥ್ ಶೆಟ್ಟಿ ಅವರ ನಿವಾಸ “ಕಾವು ಶೆಟ್ಟಿ ನಿಲಯ” ದಲ್ಲಿ ನಡೆಯಿತು.
ಜಿಲ್ಲಾ ಪಂಚಾಯತ್ ಸದಸ್ಯೆ ಅನಿತಾ ಹೇಮನಾಥ್ ಶೆಟ್ಟಿ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ದ ಉದ್ಘಾಟನೇ ಮಾಡಿದರು , ಪಂಚಾಯತ್ ಸದಸ್ಯರು, ಕಾರ್ಯಕರ್ತರು ಮತ್ತು ಕಾಂಗ್ರೆಸ್ ಪಕ್ಷದ ಅಭಿಮಾನಿಗಳಲ್ಲರು ಒಂದಾಗಿ ಸಂವಿಧಾನ ಮತ್ತು ಪಕ್ಷದ ಪೀಠಿಕೆ ಯನ್ನು ಓದುವ ಮೂಲಕ ಪ್ರಮಾಣವಚನ ಸ್ವೀಕರ ಕಾರ್ಯಕ್ರಮದಲ್ಲಿ ಸ್ವತಃ ತಾವೇ ಪ್ರತಿಜ್ಞೆ ತೆಗೆದುಕೊಳ್ಳುವ ಮೂಲಕ ಡಿಕೆಶಿ ಅವರ ಪದಗ್ರಹಣ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಅರಿಯಡ್ಕ ಪಂಚಾಯತ್ ಸದಸ್ಯರುಗಳಾದ ಕಾವು ಧಿವ್ಯನಾಥ್ ಶೆಟ್ಟಿ ,ವಿಮಲಾ ರೈ ,ನಳಿನಾಕ್ಷೀ, ಸಲ್ಮಾ ,ನವೀನಾ ,ಚಿತ್ರಾ, ನಿರ್ಮಲಾ , ಮಾಜಿ ಅಧ್ಯಕ್ಷ ರಾದ ಶಿವರಾಮ ಮಣಿಯಾಣಿ , ಉಪಾಧ್ಯಕ್ಷರಾದ ಇಕ್ಬಾಲ್ ಹುಸೇನ್ ,ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಶಂಕರ ,ಪುತ್ತೂರು ಪುರಸಭೆ ಉಪಾಧ್ಯಕ್ಷ ಲಾನ್ಸಿ ಮಸ್ಕರೇನ್ಸ್ , ನೇಮಾಕ್ಷ ಸುವರ್ಣ, ಪುತ್ತೂರು ಸಾಮಾಜಿಕ ಜಾಲತಾಣದ ಸಹಸಂಚಾಲಕರಾದ ರೆಹಮಾನ್ ಸಂಪ್ಯ , ನಾಗೇಶ್ ಅಚಾರ್ಯ, ಕೇಶವ ಪೂಜಾರಿ, ನಗರಸಭೆ ಮಾಜಿ ಸದಸ್ಯರಾದ ಮುಕೇಶ್ ಕೆಮ್ಮಿಂಜೆ , ಮಹಮ್ಮದ್ ಕುಂಞಿ , ಗೋಪಾಲ ಪಾಟಾಲಿ , ಸರೋಜಿನಿ ,ರವಿರಾಜ್ ನನ್ಯ , ನೂಜಿಬೈಲು ಜಯಪ್ರಕಾಶ್ ರೈ ,ಡೆಂಬಾಳೆ ಜಗನ್ನಾಥ ರೈ , ಅಬ್ದುಲ್ ರೆಹಮಾನ್ ಕಾವು , ರವೀಂದ್ರ , ಇಬ್ರಾಹಿಂ ಕಾವು , ತಾಹ ಅಮ್ಚಿನಡ್ಕ , ಕೊರಗಪ್ಪ ಗೌಡ , ಹಾಗೂ ಇನ್ನಿತರು ಭಾಗಿಯಾಗಿದ್ದರು.