ಮದೀನಾ(www.vknews.in): ಮದೀನಾದಲ್ಲಿ ಕರೋನವೈರಸ್ ಸೋಂಕಿತ ಮಹಿಳೆಯರಿಗೆ 25 ಕ್ಕೂ ಹೆಚ್ಚು ಶಿಶುಗಳು ಜನಿಸಿವೆ ಎಂದು ಮದೀನಾ ಪ್ರದೇಶದ ಆರೋಗ್ಯ ವ್ಯವಹಾರಗಳ ಸಾಮಾನ್ಯ ನಿರ್ದೇಶನಾಲಯ ತಿಳಿಸಿದೆ. 9 ತಿಂಗಳ ಗರ್ಭಧಾರಣೆಯನ್ನು ಪೂರ್ಣಗೊಳಿಸದ ಕೆಲವು ಅಕಾಲಿಕ ಜನನಗಳು ಇವುಗಳಲ್ಲಿ ಸೇರಿವೆ ಎಂದು ನಿರ್ದೇಶನಾಲಯ ಗುರುವಾರ ಪ್ರಕಟಣೆಯಲ್ಲಿ ತಿಳಿಸಿದೆ. ಈ 25 ಶಿಶುಗಳಲ್ಲಿ ಯಾವುದೇ ಮಗುವಿಗೂ ಕೂಡ ಕೊವಿಡ್ ಲಕ್ಷಣ ಕಂಡುಬಂದಿಲ್ಲ.
ಕರೋನಾ ಸಾಂಕ್ರಾಮಿಕ ಬಿಕ್ಕಟ್ಟಿನ ಸಮಯದಲ್ಲಿ ಉಹುದ್ ಆಸ್ಪತ್ರೆಯ ವೈದ್ಯಕೀಯ ತಂಡವು ಕಟ್ಟುನಿಟ್ಟಾದ ವೈದ್ಯಕೀಯ ವಿಧಾನಗಳು ಮತ್ತು ನಿಯಮಾವಳಿಗಳಿಗೆ ಅನುಸಾರವಾಗಿ ಹಲವಾರು ಸಿಸೇರಿಯನ್ ಹೆರಿಗೆಗಳನ್ನು ನಡೆಸಿತು. ಎಲ್ಲಾ ಮಕ್ಕಳನ್ನು ವೈದ್ಯಕೀಯ ಪರೀಕ್ಷೆಗಳಿಗಾಗಿ ನವಜಾತ ನರ್ಸರಿಗಳಲ್ಲಿ ಇರಿಸಲಾಯಿತು, ಮತ್ತು ಅವರಲ್ಲಿ ಯಾರೊಬ್ಬರೂ ಕೊರೊನಾವೈರಸ್ ಸೋಂಕಿಗೆ ಒಳಗಾಗಲಿಲ್ಲ ಎಂದು ದೃಢ ಪಟ್ಟಿದೆ ಹಾಗೂ ಎಲ್ಲಾ ಶಿಶುಗಳು ಉತ್ತಮ ಆರೋಗ್ಯ ಸ್ಥಿತಿಯಲ್ಲಿದ್ದಾರೆ ಎಂದು ಸೌದಿ ಆರೋಗ್ಯ ಇಲಾಖೆ ತಿಳಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.