ದುಬೈ(www.vknews.in): ಮದುವೆಗಾಗಿ ಲಕ್ಷಾಂತರ ದಿರ್ಹಂ ವೆಚ್ಚ ಮಾಡುತ್ತಿದ್ದ ದುಬೈ ಯುವ ಜನತೆ ಇದೀಗ ಸರಳ ವಿವಾಹದತ್ತ ಮುಖ ಮಾಡುತ್ತಿದ್ದಾರೆ. ಕಳೆದ ವಾರ ಹತ್ತಕ್ಕಿಂತಲೂ ಅಧಿಕ ಯುವಕರು ತಮ್ಮ ಕುಟುಂಬಸ್ಥರು, ಹತ್ತಿರದ ಸಂಬಂಧಿಕರು ಮತ್ತು ಕೆಲವೇ ಸ್ನೇಹಿತರನ್ನು ಆಮಂತ್ರಿಸಿ ಮದುವೆಯಾಗಿ ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಮೂಲಕ ಸರಳ ವಿವಾಹಕ್ಕೆ ಚಾಲನೆ ನೀಡಿದ್ದಾರೆ.
ಯುವಕರ ನಡುವೆ ಮೂಡಿಬಂದ ಈ ಮಹತ್ತರ ಬದಲಾವಣೆಗಾಗಿ ಯುಎಇ ಪ್ರಧಾನ ಮಂತ್ರಿ ಹಾಗೂ ದುಬೈ ಆಡಳಿತಗಾರ ಶೇಖ್ ಮುಹಮ್ಮದ್ ಬಿನ್ ರಾಷೀದ್ ಅಲ್ ಮಕ್ತೂಮ್ ಜನತೆಗೆ ಶುಭಾಶಯಗಳನ್ನು ಸಲ್ಲಿಸಿದ್ದಾರೆ. ಶುಕ್ರವಾರ ದುಬೈ ಪೋಸ್ಟ್ ನಲ್ಲಿ ನವ ವಿವಾಹಿತರಿಗೆ ಶುಭಾಶಯ ಸಲ್ಲಿಸಿದ ಶೇಖ್ ಮುಹಮ್ಮದ್ ‘ ಹೊಸ ಸಂಸ್ಕ್ರತಿಗೆ ನಾಂದಿ ಹಾಡಿರುವ ಯುವಕರ ನಡೆಗೆ ನಾನು ಅಭಾರಿಯಾಗಿದ್ದೇನೆ. ಸರಳ ವಿವಾಹಗಳ ಮೂಲಕ ವಿವಾಹದ ಪರಿಶುದ್ಧತೆ, ಮೌಲ್ಯ ಹಾಗೂ ಸುಸಂಬದ್ಧವಾದ ಕುಟುಂಬವನ್ನು ನಿರ್ಮಿಸುವ ಪಣತೊಟ್ಟಿರುವ ಯುವಕ ಯುವತಿಯರನ್ನು ನಾನು ಶ್ಲಾಘಿಸುತ್ತಿದ್ದೇನೆ’ ಎಂದಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.