ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಗುರುಪುರ ಕೈಕಂಬದ ಬಂಗ್ಲೆ ಗುಡ್ಡೆಯಲ್ಲಿ ಮಣ್ಣು ಕುಸಿತಕ್ಕೆ ಇಬ್ಬರು ವಿದ್ಯಾರ್ಥಿಗಳು ಬಲಿಯಾಗಿದ್ದು 7 ಕುಟುಂಬಗಳು ಮನೆ ಮಠ ಕಳೆದುಕೊಂಡ ಘಟನೆಗೆ ನ್ಯಾಷನಲ್ ವುಮೆನ್ಸ್ ಫ್ರಂಟ್ ದ. ಕ ಜಿಲ್ಲಾ ಸಮಿತಿ ಸಂತಾಪವನ್ನು ಸೂಚಿಸುತ್ತ ಘಟನೆಗೆ ಯಾರು ಹೊಣೆ ಎಂಬುದನ್ನು ಪ್ರಶ್ನಿಸಿದೆ.
ಕಳೆದ ಹಲವು ದಿನಗಳಿಂದ ತಡೆಗೋಡೆ ನಿರ್ಮಾಣಕ್ಕಾಗಿ ಸ್ಥಳೀಯ ಪಂಚಾಯತ್ ಗೆ, ಹಾಗೂ ತಹಸೀಲ್ದಾರ್ ರಿಗೆ ಮನವಿಗಳನ್ನು ಸಲ್ಲಿಸಿದ್ದರೂ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಅದೇ ರೀತಿ ತೀವ್ರವಾದ ಗಾಳಿಮಳೆಯ ಸಂದರ್ಭದಲ್ಲಿ ಜನರ ಸುರಕ್ಷತೆಗಾಗಿ ಮನೆ ತೆರವು ಗೊಳಿಸಲು ಯಾವುದೇ ಸೂಚನೆ ನೀಡದಿರುವುದು ಅಧಿಕಾರಿಗಳ ಬೇಜವಾಬ್ದಾರಿತನವಾಗಿದೆ.
ಸರ್ಕಾರವು ಸಂತ್ರಸ್ತರ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಒದಗಿಸಬೇಕು, ಮುಂದೆ ಇಂತಹ ಅನಾಹುತಗಳಾಗದಂತೆ ಕ್ರಮಗಳನ್ನು ಕೈಗೊಳ್ಳಬೇಕೆಂದು ನ್ಯಾಷನಲ್ ವುಮೆನ್ಸ್ ಫ್ರಂಟ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಆಗ್ರಹಿಸಿದೆ.