ಗುರುಪುರ ಗುಡ್ಡ ಕುಸಿದು ಇಬ್ಬರ ಮರಣ: ಎಸ್.ವೈ.ಎಸ್.ತೀವ್ರ ಸಂತಾಪ

ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಗುರುಪುರ-ಕೈಕಂಬ ಬಂಗ್ಳ‌ಗುಡ್ಡೆ ಎಂಬಲ್ಲಿ ಗುಡ್ಡ ಜರಿದು ಉಂಟಾದ ಅಪಘಾತದಲ್ಲಿ ಇಬ್ಬರು ಮಕ್ಕಳು ಮಡಿದು ಹಲವರಿಗೆ ಗಾಯವಾಗಿ‌ ಅನೇಕ ಮಂದಿಗೆ ಲಕ್ಷಾಂತರ ರೂಪಾಯಿಗಳ ನಾಶ ನಷ್ಟ ಉಂಟಾದ ಘಟನೆಗೆ ಕರ್ನಾಟಕ ರಾಜ್ಯ ಸುನ್ನೀ ಯುವಜನ‌ ಸಂಘ (ಎಸ್.ವೈ.ಎಸ್.) ತೀವ್ರ ಸಂತಾಪ ಮತ್ತು ಆಘಾತ ವ್ಯಕ್ತಪಡಿಸಿದೆ.

ದುರಂತ ಸ್ಥಳದಲ್ಲಿ ಅಧಿಕಾರಿಗಳು‌, ಇಸಾಬಾ‌ ತಂಡದ ಸಮೇತ ಇತರ ಸ್ವಯಂಸೇವಕರು ಮತ್ತು ಸ್ಥಳೀಯರು ನಡೆಸಿದ ಸಕ್ರಿಯ ಕಾರ್ಯಾಚರಣೆಗಳನ್ನು ಸಂಘಟನೆ ಶ್ಲಾಘಿಸಿದೆ. ಮಾನ್ಯ ಮುಖ್ಯಮಂತ್ರಿಗಳು ಘೋಷಿಸಿದ ಪರಿಹಾರ ಮೊತ್ತವನ್ನು ಹೆಚ್ಚಿಸಬೇಕು, ಸಂತ್ರಸ್ತರ ಪುನರ್ವಸತಿಗೆ ಅಗತ್ಯವಾದ ತುರ್ತು ಕೆಲಸಗಳನ್ನು ಜನಪ್ರತಿನಿಧಿಗಳು ‌ಶೀಘ್ರವಾಗಿ ಕೈಗೊಳ್ಳ ಬೇಕೆಂದೂ ಸಂಘಟನೆ ಮನವಿ ಮಾಡಿದೆ.

ಮೃತರ ಪೋಷಕರ ಮನಃ ಶಾಂತಿಗಾಗಿ ಎಲ್ಲರೂ ವಿಶೇಷ ಪ್ರಾರ್ಥನೆ ಮಾಡಬೇಕು ಮತ್ತು ಸಂತ್ರಸ್ತರಿಗೆ ಅಗತ್ಯವಾದ ನೆರವು ನೀಡಲು ಎಲ್ಲರೂ ಮುಂದೆ ಬರಬೇಕೆಂದು ಎಸ್.ವೈ.ಎಸ್.ರಾಜ್ಯಾಧ್ಯಕ್ಷ ಉಸ್ಮಾನ್ ಸ’ಅದಿ ಪಟ್ಟೋರಿ, ಕಾರ್ಯದರ್ಶಿ ಎಮ್ಮೆಸ್ಸೆಂ ಝೈನೀ ಕಾಮಿಲ್ ಅಪೇಕ್ಷಿಸಿದ್ದಾರೆ.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...