ಉಳ್ಳಾಲ (www.vknews.com) : ದಿನಾಂಕ 06/07/2020, ಸೋಮವಾರ ಉಳ್ಳಾಲ ನಗರ ಸಭಾ ವ್ಯಾಪ್ತಿಯ ಕಲ್ಲಾಪು, ಪಟ್ಲ, ಬಬ್ಬುಕಟ್ಟೆ ಪರಿಸರದಲ್ಲಿ ಆರೋಗ್ಯ ರಕ್ಷಣೆಗೆ ಜನಜಾಗೃತಿ ಹಾಗೂ ಉಚಿತ ಮಾಸ್ಕ್ ವಿತರಣಾ ಕಾರ್ಯಕ್ರಮ ನಡೆಯಿತು.
ಜಾಗತಿಕ ಮಹಾಮಾರಿ ಕೊರೊನಾ ವ್ಯಾಪಕವಾಗಿ ಹೆಚ್ಚುತ್ತಿರುವ ಹಿನ್ನೆಲೆ ಹಾಗೂ ಮಳೆಗಾಲದಲ್ಲಿ ಹೆಚ್ಚಾಗಿ ಕಂಡು ಬರುವ ಡೆಂಗ್ಯೂ, ಮಲೇರಿಯಾ ಮತ್ತು ಚಿಕುನ್ಗುನ್ಯಾ ಮುಂತಾದ ಸಾಂಕ್ರಾಮಿಕ ಪಿಡುಗುಗಳು ಬಾಧಿಸದೇ ಇರಲು ಚಿಕಿತ್ಸೆಗಿಂತ ಮುನ್ನೆಚ್ಚರಿಕೆಯೇ ಉತ್ತಮ ಎಂಬ ನಿಟ್ಟಿನಲ್ಲಿ ಇಂದು ನಗರ ಸಭಾ ಸದಸ್ಯರು ಮತ್ತು ಸ್ಥಳೀಯ ಕೌನ್ಸಿಲರು ಆದ ಶ್ರೀ ಮುಷ್ತಾಕ್ ಪಟ್ಲ ಇವರ ನೇತೃತ್ವದಲ್ಲಿ ವಾರ್ಡ್ ವಾರಿಯರ್ಸ್ ಸ್ಥಳೀಯ ಉತ್ಸಾಹಿ ತರುಣರ ಸಹಕಾರದೊಂದಿಗೆ ಪರಿಸರದ ಮನೆಮನೆಗೆ ಭೇಟಿ ನೀಡಿದರು, ನಿವಾಸಿಗಳಿಗೆ ಮತ್ತು ಸಾರ್ವಜನಿಕರಿಗೆ ಉಚಿತ ಮಾಸ್ಕ್ ಕಿಟ್ಟನ್ನು ವಿತರಿಸಿದರು. ವಿಶೇಷವಾಗಿ ಹಿರಿಯರು ಮತ್ತು ಮಕ್ಕಳ ಆರೋಗ್ಯ ಕ್ಷೇಮ ವಿಚಾರಿಸಿದರು, ಇದರೊಂದಿಗೆ ಆರೋಗ್ಯ ಸುರಕ್ಷಿತತೆಗೆ ಉಪಯುಕ್ತವಾದ ಮಾಹಿತಿ, ಸಲಹೆಗಳೊಂದಿಗೆ ಜನಜಾಗೃತಿಯನ್ನು ಮೂಡಿಸಿದರು.
ಶರಣ್
July 7, 2020 at 5:50 amಮುಷ್ತಕ ಪಟ್ಲ ರವರ ಜನಪರ ಚಟುವಟಿಕೆಗಳನ್ನ ಸರ್ವ ಧರ್ಮ ಬಾಂಧವರೂ ಮೆಚ್ಚುತ್ತಾರೆ.