ಹಳೆಯಂಗಡಿ (www.vknews.com) : ಹಳೆಯಂಗಡಿ ಪರಿಸರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಅಲ್ಲಲ್ಲಿ ಕಂಡುಬರುತ್ತಿದ್ದು ವೈರಾಣು ಇನ್ನಷ್ಟು ಹರಡದಂತೆ ತಡೆಯಲು ಅಲ್ಲಿನ ನಾಗರಿಕರ ಮನವಿಯ ಮೇರೆಗೆ ಮದ್ಯಾಹ್ನ 2 ಗಂಟೆಯ ನಂತರ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದು ಮಾಡುವ ಮೂಲಕ ಸಾರ್ವಜನಿಕರ ಮನವಿಗೆ ಬೆಂಬಲ ಸೂಚಿಸಿದರು.
ಕಾರು,ಟೆಂಪೋ, ರಿಕ್ಷಾ ನಿಲ್ದಾಣ ಸೇರಿದಂತೆ ದಿನಸಿ, ತರಕಾರಿ ಅಂಗಡಿಗಳು ಮಾಂಸದ ಅಂಗಡಿ, ಬೇಕರಿ, ಹೊಟೇಲ್, ಎಲೆಕ್ಟ್ರಾನಿಕ್, ಫ್ಯಾನ್ಸಿ, ಝೆರಾಕ್ಸ್ ಅಂಗಡಿಗಳು ಎಲ್ಲವೂ ಬಂದ್ ಆಗಿದ್ದರಿಂದ ಸದಾ ಜನರಿಂದ ತುಂಬಿರುತ್ತಿದ್ದ ಹಳೆಯಂಗಡಿ ಪೇಟೆ ಸ್ವಯಂ ಪ್ರೇರಿತ ಬಂದ್ ನಿಂದಾಗಿ ಜನರಿಲ್ಲದೆ ಸ್ಥಬ್ಧವಾಗಿತ್ತು.
ವರದಿ: ಅದ್ದಿ ಬೊಳ್ಳೂರು