ಸಮಾಜ ಸೇವೆಯ ಹಣ ಸಂಗ್ರಹ : ರಾಜ್ಯಕ್ಕೂ ತಾಲೂಕಿಗೂ ತುಲನೆ ಮಾಡಬೇಡಿ…

(www.vknews.com) : ಇತ್ತೀಚಿನ ದಿನಗಳಲ್ಲಿ ಹಲವಾರು ಮಂದಿ ಸೋಷಿಯಲ್ ಮೀಡಿಯಾಗಳಲ್ಲಿ ಕೇರಳದ ಫಿರೋಝ್ ಕುನ್ನಂಪರಂಬಿಲ್ ಪಾಲಕ್ಕಾಡ್ ಎಂಬ ಸಹೋದರನ ಪೋಸ್ಟ್‌ಗಳಿಗೆ ಸಂಗ್ರಹವಾಗುಷ್ಟು ಹಣ ಮಂಗಳೂರಿನ ಸಮಾಜ ಸೇವಕರ ಪೋಸ್ಟ್‌ಗಳ ಖಾತೆಯಲ್ಲಿ ಹಣ ಬೀಳುತ್ತಿಲ್ಲ ಎಂದಾಗಿದೆ.

ರಾತ್ರಿಯಿಂದ ಬೆಳಕಾಗುವ ಹೊತ್ತಿಗೆ ಧಾರಾಳವಾಗಿ ಉತ್ತಮ ಪ್ರತಿಕ್ರಿಯೆ ನೀಡುತ್ತಾರೆ.ಯಥೇಚ್ಛವಾಗಿ ಅಂದರೆ ಲಕ್ಷೋಪಲಕ್ಷವಾಗಿ ಹಣ ಸಂಗ್ರಹವಾಗುತ್ತದೆ. ಆದರೆ ಮಂಗಳೂರಿನಲ್ಲಿ ವಾರ ಕಳೆದರೂ ಕೇವಲ ಒಂದೆರಡು ಲಕ್ಷ ಆಗುವುದೂ ಬಹಳ ಕಷ್ಟದಲ್ಲಾಗಿರುತ್ತದೆ‌ ಎಂದು ಬಹಳ ಜನ ಆಡಿಕೊಳ್ಳುತ್ತಿದ್ದಾರೆ.

ಮೇಲ್ನೋಟಕ್ಕೆ ಸರಿ ಎನಿಸಿಕೊಂಡರೂ ನೀವು ಎಡವಿದ್ದೀರಿ ಎಂದು ಮನದಟ್ಟಾಗುತ್ತಿದೆ. ಯಾಕೆಂದರೆ ದ‌ಕ್ಷಿಣ ಕನ್ನಡ ಎಂಬುವುದು ಒಂದು ಕೇವಲ ಜಿಲ್ಲೆಯಾದ ಪುಟ್ಟ ಊರಾಗಿದೆ.

ಆದರೆ ಕೇರಳ ಒಂದು ಬಲಿಷ್ಠ ರಾಜ್ಯ ಹಾಗೂ ಅದರ ವ್ಯಾಪ್ತಿಯು ಬಹಳ ವಿಸ್ತಾರವಾಗಿದೆ. ಜಿಲ್ಲೆಗೂ ರಾಜ್ಯಕ್ಕೂ ತುಲನೆ ಮಾಡಲು ಸಾಧ್ಯವಿಲ್ಲ.
ಕಾರಣ ಇಲ್ಲಿ ಮಂಗಳೂರಿನವರು ಮಾತ್ರ ಸೀಮಿತವಾಗಿದ್ದಾರೆ. ನಮ್ಮ ರಾಜ್ಯದ ಬೇರೆ ಜಿಲ್ಲೆಗಳಿಗೆ ಅಷ್ಟೊಂದಾಗಿ ನಮ್ಮ ಕಾರ್ಯಚಟುವಟಿಕೆಗಳು ತಲುಪುತ್ತಿಲ್ಲ.
ಆದರೆ ಫಿರೋಝ್ ಎಂಬುವ ಸಹೋದರ ಒಂದು ಪೋಸ್ಟ್ ಹಾಕಿದರೆ ಇಡೀ ಕೇರಳ ರಾಜ್ಯ ಸಹಿತ ನಮ್ಮ ಕರ್ನಾಟಕದ ಜನತೆ ಕೂಡಾ ಸ್ಪಂದನೆ ನೀಡುತ್ತಿದ್ದಾರೆ.
ಅವರ ವೀಡಿಯೋಗಳು ಎಲ್ಲಾ ಮಲಯಾಳಿಗಳಿಗೆ ತಲುಪುತ್ತಿದೆ.

ಹಾಗೆಯೇ ಇಲ್ಲಿ ನಮ್ಮ ಪೋಸ್ಟ್‌ ಗಳನ್ನು ಕೇವಲ ಮಂಗಳೂರಿನವರೇ ನೋಡುತ್ತಾರೆ.
ಹಾಗೂ ಮಂಗಳೂರಿನ ಜನತೆ ಇಂತಹ ಪೋಸ್ಟ್‌ಗಳಿಗೆ ಸಹಾಯ ಮಾಡುವುದಿಲ್ಲ ಎಂದು ತುಂಬಾ ಮಂದಿ ಹೇಳುತ್ತಿರುತ್ತಾರೆ.

ಇದರ ಬಗ್ಗೆ ಒಂದು ಸಣ್ಣದಾದ ವಿವರಗಳು ಇಲ್ಲಿವೆ.

1.ಮಸೀದಿಯ ಪೋಸ್ಟ್ ಹಾಕಿದಾಗ 7ಲಕ್ಷದ ಕೆಲಸ ನಡೆದಿದೆ.
2.ಮದ್ರಸದ ಪೋಸ್ಟ್ ಬಗ್ಗೆ ಒಬ್ಬರೇ ದಾನಿಯು ಮಂದೆ ಬಂದು 5ಲಕ್ಷ ದಾನವಾಗಿ ನೀಡಿದ್ದಾರೆ.
(ದಾನಿಯು ಕರೆಮಾಡಿ ಎಷ್ಟು ಲಕ್ಷ ಬೇಕೆಂದು ಕೇಳಿದಾಗ, ವಕ್ಫ್‌ಬೋರ್ಡಿನಿಂದ ಹಣ ಬಂದಿದೆ. 5ಲಕ್ಷ ಇದ್ದರೆ ಮದ್ರಸ ಕೆಲಸ ಪೂರ್ಣವಾಗುತ್ತದೆ ಎಂದು ಹೇಳಿದಾಗ, ಯಾರ ಹತ್ತಿರಾನೂ ಕೇಳಬೇಡಿ ನಾನೇ ನೀಡುತ್ತೇನೆ ಎಂದು ಹೇಳಿ, ಮದ್ರಾಸ ಕಮಿಟಿಯೊಂದಿಗೆ ಚರ್ಚಿಸಿ ಒಂದೇ ಸಲ 5ಲಕ್ಷ ದಾನವಾಗಿ ನೀಡಿದ್ದಾರೆ.

3.ಪೊಯ್ಯತ್ತಬೈಲಿನ ಬ್ಲಡ್‌ ಕ್ಯಾನ್ಸರ್ ಮಗುವಿನ ಚಿಕಿತ್ಸೆಗೆ ಕೇವಲ ನಾಲ್ಕು ದಿನದೊಳಗಡೆ 7 ಲಕ್ಷ ಖಾತೆಗೆ ಜಮಾ ಆಗಿದೆ.

4. ಸಜೀಪನಡು ಪ್ರದೇಶದ ಗೋಳಿಪಡ್ಪುವಿನ ಭಾಗದಲ್ಲಿ ಇರುವ ರೋಗಿಗೂ 7ಲಕ್ಷ ಹಣ ಜಮಾ ಆಗಿದೆ.

5. ಇತ್ತೀಚಿಗೆ ಕಿನ್ಯಾದ ಉಸ್ತಾದರ ಮಗುವಿಗೆ 9.5 ಲಕ್ಷ ಹಣ ಅವರ ಅಕೌಂಟಿಗೆ ಜಮಾ ಆಗಿದೆ.

ಇಷ್ಟೆಲ್ಲಾ ಹಣವನ್ನು ಈ ಒಂದು ದ.ಕ. ಜಿಲ್ಲೆ, ಉಡುಪಿಯ ಅಲ್ಪ ಭಾಗ ಹಾಗೂ ಕಾಸರಗೋಡಿನ ಗಡಿನಾಡು ಪ್ರದೇಶದ ಮಂದಿ ಸ್ಪಂದಿಸಿದ ಹಣದ ಮೊತ್ತವಾಗಿದೆ. ಇಷ್ಟೊಂದು ಸಣ್ಣ ಪ್ರದೇಶದಲ್ಲಿ ಬ್ರಹತ್ ಮೊತ್ತದ ಹಣ ಸಂಗ್ರಹವಾಗಬೇಕಾದರೆ ಮಂಗಳೂರಿನ ಜನತೆಯ ಹೃದಯ ಎಷ್ಟೊಂದು ವಿಶಾಲತೆ ಇದೆ ಎಂದು ನೀವೇ ಊಹಿಸಿ ನೋಡಿ.

ಯಾವುದೇ ಕಾರಣಕ್ಕೆ ಮಂಗಳೂರಿನವರು ಸಹಾಯ ಮಾಡುವುದಿಲ್ಲ ಎಂದು ಹೇಳಬೇಡಿ. ಅವರು ಸಹಾಯ ಮಾಡುತ್ತಾ ಇರುತ್ತಾರೆ.

ಮುಂದೆ ಸಜಿಪನಡುವಿನ ಮಗುವಿನ(ಬ್ಲೈನ್ ಟ್ಯೂಮರ್) ಖಾತೆಯ ವಿವರಗಳನ್ನು ಮುಂದಿನ ದಿನಗಳಲ್ಲಿ ಹಾಕುತ್ತೇವೆ. ಅದನ್ನೂ ಒಮ್ಮೆ ಅವಲೋಕಿಸಿ ನೋಡಬೇಕು.

ಗೂಗುಲ್ ಪೇ ಮೂಲಕವೋ ಖಾತೆ ಮೂಲಕವೋ ನೂರು ಇನ್ನೂರು, ನೂರಿನ್ನೂರು ಹೀಗೆ ಹಲವಾರು ಮಂದಿ ಸ್ಪಂದಿಸುತ್ತಾರೆ.
ಆದುದರಿಂದ ನೀವು ವಿವರ್ಷಿಸುವಾಗ ಕೇರಳದ ಫಿರೋಝ್ ಕುನ್ನಂಪರಂಬಿಲ್ ಪಾಲಕ್ಕಾಡ್ ಹಾಗೂ ಮಂಗಳೂರಿನ ಜನತೆಗೆ ತುಲನೆ ಮಾಡಿ ನೋಡಬೇಡಿ.
ಫಿರೋಝ್ ಕುನ್ನಂಪರಂಬಿಲ್ ಪಾಲಕ್ಕಾಡ್ ಗೆ ಕೇರಳ ರಾಜ್ಯದ ಸಂಪೂರ್ಣ ಸ್ಪಂದನೆ ಇದೆ.
ಅದರಲ್ಲೂ ಕರ್ನಾಟಕದ ದ.ಕ.,ಉಡುಪಿ, ಮಡಿಕೇರಿ,ಹಾಗೂ ಚಿಕ್ಕಮಗಳೂರಿನಿಂದಲೂ ಜನತೆ ಸ್ಪಂದಿಸುತ್ತಿದ್ದಾರೆ.

ನಮ್ಮ ಮಂಗಳೂರಿನ ಸಮಾಜ ಸೇವಕರ ಪೋಸ್ಟ್‌ಗಳಿಗೆ ದ.ಕ.ಜಿಲ್ಲೆ, ಉಡುಪಿ ಹಾಗೂ ಕಾಸರಗೋಡಿನಿಂದ ಈ ಭಾಗವಾಗಿ ನಮ್ಮ ಸಹಾಯದ ಖಾತೆಗಳಿಗೆ ಸ್ಪದಿಸುತ್ತಾರೆ.

ಇದನ್ನುನೀವು ಒಮ್ಮೆ ಅವಲೋಕಿಸಿ ನೋಡಿ. ನಾವು ಅದೆಷ್ಟು ಹಣ ಸಂಗ್ರಹ ಮಾಡಬಹುದು?

ಈವಾಗ ನಿಮ್ಮನ್ನು ನೀವೇ ವಿಮರ್ಷಿಸಿ ನೋಡಿ ಇಲ್ಲಿ ಯಾರು ಹೃದಯವಂತರು ಯಾರು ಉತ್ತಮರು ಎಂಬ ಪ್ರಶ್ನೆ ಬರುವುದಿಲ್ಲ. ಮಾನವೀಯತೆ ಇರುವವರೆಲ್ಲರೂ ಹೃದಯವಂತರೇ… ಈಗಿನ ಸಂದಿಗ್ಧ ಪರಿಸ್ಥಿತಿಯಲ್ಲೂ ಮಂಗಳೂರು ಜನತೆ ಇನ್ನೊಬ್ಬರ ಸಹಾಯಕ್ಕೆ ಕೈಜೋಡಿಸಿತ್ತಿರೋದು ನಮಗೆ ಹೆಮ್ಮೆಯ ವಿಷಯವೇ ಸರಿ. ಮಂಗಳೂರಿನ ಜನತೆ ಕೇಲವ ಅವರ ವೈಯುಕ್ತಿಕ ಮಾತ್ರ ನೋಡಿಕೊಳ್ಳುತ್ತಾರೆ ಇನ್ನೊಬ್ಬರ ನೋವಿಗೆ ಸ್ಪಂದಿಸುವುದಿಲ್ಲ
ಎಂಬ ಪ್ರಶ್ನೆಗಳಿಗೆ ನಿಮಗೆ ನೀವೇ ಉತ್ತರಿಸಿ.

ಆದ್ದರಿಂದ ನೀವು ದಯವಿಟ್ಟು ಮಂಗಳೂರಿನ ಜನತೆ ಸಹಾಯಹಸ್ತಗಳಿಗೆ ಸ್ಪಂದಿಸುವುದಿಲ್ಲ ಎಂದು ಯಾವತ್ತೂ ಯಾವಗಲೂ ಹೇಳಬೇಡಿ. ಪ್ರತಿ ವಿಷಯಗಳಲ್ಲಿ ದಾನಿಗಳು ಮುಂದೆ ಬರುತ್ತಾರೆ. ತಮ್ಮ ಕೈಯಿಂದ ಆಗುವ ಸಹಾಯ ಮಾಡುತ್ತಾರೆ. ಇನ್ನೂ ಹಲವು ಧಾನಿಗಳು ಬರುತ್ತಾರೆ ಎಂಬ ಭರವಸೆ ನಮಗೆ ಇದೆ. ಇನ್ಷಾ ಅಲ್ಲಾಹ್….

– ಇಲ್ಯಾಸ್ ಮಂಗಳೂರು

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...