ಮಂಜನಾಡಿ (www.vknews.com) : ಕೋವಿಡ್ 19 ರ ಲಾಕ್ ಡೌನ್ ಅವಧಿಯಲ್ಲಿ ಡಿವೈಎಫ್ಐ ಮೊಂಟೆಪದವು ಘಟಕದ ಜೊತೆ ಸೇರಿ ಸೇವೆ ಸಲ್ಲಿಸಿದ ಕೊರೊನಾ ವಾರಿಯರ್ಸ್ ಗಳನ್ನು ಇಂದು ಡಿವೈಎಫ್ಐ ಮೊಂಟೆಪದವು ಕಚೇರಿಯಲ್ಲಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
23 ದಿನಗಳ ಕಾಲ ಆಹಾರ ತಯಾರಿಸಿ ಅನಾಥರಿಗೆ ಹಾಗೂ ಬಡವರಿಗೆ ಕೊಡಲು ನೆರವಾದ ಕರೀಂ ಗುದುರು, ಔಷಧಿಗಳನ್ನು ಮನೆ ಮನೆಗೆ ತಲುಪಿಸುತ್ತಿದ್ದ ಇಕ್ಬಾಲ್ ಮೊಂಟೆಪದವು , 450 ಮಾಸ್ಕ್ ಗಳನ್ನು ಹೊಲಿದು ಕೊಟ್ಟ ಫಾತಿಮತ್ ಅಶ್ರೀನಾ , ಹಾಜಿರಾ , ಸಫ್ರೀನಾ ಇವರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಡಿವೈಎಫ್ಐ ಉಳ್ಳಾಲ ವಲಯ ಸಮಿತಿ ಅಧ್ಯಕ್ಷ ಅಶ್ರಫ್ ಕೆಸಿ ರೋಡ್ , ಪಂಚಾಯತ್ ಸದಸ್ಯ ಇಸ್ಮಾಯಿಲ್ , ಆಸಿಫ್, ಫಯಾಜ್ , ರಹಮಾನ್ , ಸಾಹಿತಿ ಮಹಮ್ಮದ್ ಉಳ್ಳಾಲ್, ಉದ್ಯಮಿ ಲತೀಫ್ ಕೈರಳಿ, ಡಿವೈಎಫ್ಐ ವಲಯ ಸಮಿತಿ ಉಪಾಧ್ಯಕ್ಷ ರಝಾಕ್ ಮೊಂಟೆಪದವು, ಘಟಕದ ಅಧ್ಯಕ್ಷ ಸಿರಾಜ್ ಬಿ.ಎಂ, ಮುಖಂಡ ಶರೀಫ್ ವಿದ್ಯಾನಗರ, ಹಿದಾಯತ್ ಮೊಂಟೆಪದವು, ಎಸ್.ಎಫ್.ಐ ನಾಯಕ ಸಿನಾನ್ ಉಪಸ್ಥಿತರಿದ್ದರು.