ಶಾಸಕ ಯು.ಟಿ ಖಾದರ್ ನಿರ್ಲಕ್ಷ್ಯವೇ ಸಜೀಪ ನಡು ಬೈಲುಗುತ್ತು ಪರಿಸರ ಪ್ರತೀವರ್ಷ ಜಲಾವ್ರತಗೊಳ್ಳಲು ಕಾರಣ – ಎಸ್.ಡಿ.ಪಿ.ಐ

ವರ್ಷಕ್ಕೊಮ್ಮೆ ಚರಂಡಿ ಮುಂಭಾಗ ನಿಂತು ಫೋಟೋ ತೆಗೆದು ಫೋಸ್ ಕೊಡುವುದನ್ನು ಬಿಟ್ಟು ಈ ಬಾರಿಯಾದರು ಶಾಶ್ವತ ಪರಿಹಾರ ಕಲ್ಪಿಸಲು ಮುತುವರ್ಜಿ ವಹಿಸಲಿ:- ಎಸ್.ಡಿ.ಪಿ.ಐ ಸಜಿಪ ನಡು

ಬಂಟ್ವಾಳ (www.vknews.com) : ಸಜೀಪ ನಡು ಗ್ರಾಮ ಪಂಚಾಯತ್ ಗೆ ಒಳಪಟ್ಟ ಬೈಲುಗುತ್ತು ಪರಿಸರವು 30 ವರ್ಷಗಳಿಂದ ಮಳೆಯ ಕಾರಣದಿಂದ ಜಲಾವೃತಗೊಳ್ಳುತ್ತಿರುವುದರಿಂದ ಪ್ರತೀ ವರ್ಷದಂತೆ ಈ ಬಾರಿಯು ಈ ಕ್ಷೇತ್ರದ ಶಾಸಕರಾದ ಮಾನ್ಯ ಯು.ಟಿ.ಖಾದರ್ ರವರು ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿರುವುದು ಅಭಿನಂಧನಾರ್ಹವಾಗಿದೆ .ಆದರೆ ಈ ಭೇಟಿಯನ್ನು ಎಂದಿನ ಸಾಮಾನ್ಯ ಪಟ್ಟಿಗೆ ಸೇರ್ಪಡಿಸದೆ ಶಾಶ್ವತ ಪರಿಹಾರ ಕ್ರಮವನ್ನು ಕೈಗೊಳ್ಳಬೇಕು ಎಂದು SDPI ಸಜೀಪನಡು ಗ್ರಾಮ ಸಮಿತಿ ಅಧ್ಯಕ್ಷ ಮು.ನವಾಝ್ ಆಗ್ರಹಿಸಿದ್ದಾರೆ.

ಪ್ರಸ್ತುತ ಚರಂಡಿ ವ್ಯವಸ್ಥೆಗೆ ಶಾಶ್ವತ ಪರಿಹಾರ ನಡೆಸಲು ದೊಡ್ಡ ಪ್ರಮಾಣದ ಅನುದಾನದ ಅವಶ್ಯಕತೆ ಇದ್ದು, ಈ ಕಾರ್ಯ ಕೇವಲ ಗ್ರಾ.ಪಂ ಅಡಿಯಲ್ಲಿ ನಡೆಸಬೇಕಾದ ಕಾರ್ಯವಾಗಿರುವುದಿಲ್ಲ ಬದಲಿಗೆ ಇದು ಶಾಸಕರ ನಿಧಿಯಿಂದ ಮಾಡಬೇಕಾಗಿರುವ ಅಭಿವೃದ್ಧಿ ಕಾರ್ಯಕ್ರಮದಲ್ಲಿ ನಡೆಸಬೇಕಾಗಿರುವುದಾಗಿದೆ. 2016 ರಿಂದಲೂ ಈ ಬಗ್ಗೆ ಸ್ಥಳೀಯರು ಶಾಸಕರಲ್ಲಿ ಹಲವು ಬಾರಿ ಮಾಹಿತಿ ಮತ್ತು ಮನವಿಗಳನ್ನು ನೀಡಿದ್ದರೂ ಯಾವುದೇ ರೀತಿಯ ಪ್ರಯೋಜನವೂ ಆಗಿಲ್ಲ, ಶಾಸಕರು ಬಂದು ಪರಿಹಾರದ ಭರವಸೆ ನೀಡಿ ಫೋಟೋ ಕ್ಲಿಕ್ಕಿಸಿಕೊಂಡು ಹೋದದ್ದು 2016 ಜೂನ್ ತಿಂಗಳ ಸಂಜೆ ಪತ್ರಿಕೆಯೊಂದರಲ್ಲಿ ಫೋಟೋ ಸಮೇತ ಪ್ರಕಟವಾಗಿತ್ತು ಹೊರತು ನೀಡಿದ ಭರವಸೆಯ ಕೆಲಸ – ಕಾರ್ಯ ಈವರೆಗೂ ಆರಂಭಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

*ಮಾತ್ರವಲ್ಲದೆ 2018 ರಲ್ಲಿ ಸಜಿಪನಡು ಗ್ರಾ.ಪಂ ಆಶ್ರಯದಲ್ಲಿ “ಗ್ರಾಮೋತ್ಸವ “ ಎಂಬ ಸಮಾರಂಭ ನಡೆದಿತ್ತು. ಆ ಕಾರ್ಯಕ್ರಮದಲ್ಲಿ ನಮ್ಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ಕೆಲಸವು ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ಸರ್ಕಾರದ ಮೂಲಕ ನಡೆಯಬೇಕಾಗಿದೆ ಎಂಬುವುದನ್ನು ಜನರ ಸಮ್ಮುಖದಲ್ಲಿ ಗ್ರಾ.ಪಂ ಅಧ್ಯಕ್ಷರು ಶಾಸಕರಿಗೆ ಮನವಿ ನೀಡಬಯಸಿದ್ದರು. * ಕೀಳುಮಟ್ಟದ ರಾಜಕೀಯ ನಡೆಸಿ ಶಾಸಕರು ಸಮಾರಂಭಕ್ಕೆ ಗೈರು ಹಾಜರಿ ನೀಡಿದ್ದರೂ , ಗ್ರಾಮದ ಅಭಿವೃದ್ಧಿಯೇ ನಮಗೆ ಮುಖ್ಯ ಎಂದು ಗ್ರಾ.ಪಂ ಅಧ್ಯಕ್ಷರಾದ ಮು.ನಾಸೀರ್ ರವರು ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ಶಾಸಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.

ಕಾಂಗ್ರೆಸ್ ಸರ್ಕಾರವೇ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲೂ ಕೂಡ ಈ ಕಾರ್ಯಗಳನ್ನು ತಮ್ಮಿಂದ ಮಾಡಿಸಲು ಸಾದ್ಯವಾಗದೇ ಇರುವುದು ನಿಮ್ಮ ದ್ವೇಷ ರಾಜಕೀಯ ಕ್ಕೆ ಒಂದು ಸ್ಪಷ್ಟವಾದ ಉದಾಹರಣೆ ಯಾಗಿದೆ .

ಎಲ್ಲರಿಗೂ ತಿಳಿದಿರುವಂತೆ ಪಂಚಾಯತ್ ಗೆ ಸರ್ಕಾರದಿಂದ ಪಂಚವಾರ್ಷಿಕ ಯೋಜನೆಯ ಅಡಿಯಲ್ಲಿ ಐದು ವರ್ಷಕ್ಕಾಗಿ ಒಂದು ಕೋಟಿ ಇಪ್ಪತ್ತೈದು ಲಕ್ಷ ರೂಪಾಯಿ ಮಾತ್ರ ಮಂಜೂರಾಗುತ್ತದೆ.ಇದನ್ನು ಹಂತ ಹಂತವಾಗಿ ವಿಭಾಗಿಸಿ ವರ್ಷಕ್ಕೊಮ್ಮೆ ಬಿಡುಗಡೆ ಗೊಳಿಸಲಾಗುತ್ತದೆ.

ಈ ಹಣದಲ್ಲಿ 25% ಹಣ ಎಸ್ಸಿ ಎಸ್ಟಿ,ವಲಯಕ್ಕೆ ಮೀಸಲಾಗಿರುತ್ತದೆ,25% ಹಣ ವಿದ್ಯುತ್ ಬಿಲ್ ಕಡಿತವಾಗುತ್ತದೆ,15% ಹಣ ನೀರು ಸರಬರಾಜು ಯೋಜನೆಗೆ,25% ಹಣ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಅಥವಾ ಚರಂಡಿ ನಿರ್ಮಾಣಕ್ಕೆ,10% ಪಂಚಾಯತ್ ಕಟ್ಟಡ ನಿರ್ಮಾಣಕ್ಕೆ ಮೀಸಲಾಗಿರುತ್ತದೆ.

ಈ ನಿಧಿಯನ್ನು ಸಜೀಪ ನಡು ಗ್ರಾಮ ಪಂಚಾಯತ್ ಪ್ರತಿವರ್ಷವೂ ಸಮರ್ಪಕವಾಗಿ ಬಳಸಿಕೊಂಡು ಬಂದಿದೆ ಹಾಗು ಇನ್ನಿತರ ಕೆಲವು ಕೆಲಸ ಕಾರ್ಯಗಳನ್ನು ಸರ್ಕಾರದ ನಿಧಿಯಿಂದಲೂ ಒತ್ತಡ ಹಾಕಿ ಅನುದಾನವನ್ನು ತರಿಸಿ ಕೆಲಸ ಮಾಡಿಸಿರುತ್ತದೆ. ಅದೇ ರೀತಿ ನಮ್ಮ ಪಕ್ಷದ ಕಾರ್ಯಕರ್ತರ ಶ್ರಮದಾನದ ಮೂಲಕ ಮತ್ತು SDPI ಪಕ್ಷದ ನೇರ ಧನಸಹಾಯದಿಂದ ಕೂಡ ಈ ಪಂಚಾಯತ್ ನ ಅಭಿವೃದ್ಧಿಗೆ ಶ್ರಮವಹಿಸಿ ಕರ್ನಾಟಕ ರಾಜ್ಯದಲ್ಲೆ ಸಜೀಪ ನಡು ಗ್ರಾಮ ಪಂಚಾಯತ್ ನ್ನು ಮಾದರಿ ಗ್ರಾಮವನ್ನಾಗಿ ಪರಿವರ್ತಿಸಲು ಯಶಸ್ವಿಯಾಗಿದ್ದೇವೆ.

ಪ್ರತೀ ವರ್ಷ ಜಲಾವ್ರತಗೊಳ್ಳುವ ಪ್ರದೇಶವಾದ ಬೈಲುಗುತ್ತು ಪ್ರದೇಶಕ್ಕೆ ಅಂದರೆ ಸುಬ್ರಹ್ಮಣ್ಯ ದೇವಸ್ಥಾನದಿಂದ ಹಿಡಿದು ಲಕ್ಷ್ಮಣ ಕಟ್ಟೆಯವರೆಗೆ ತೋಡು ಅಗೆದು ಶಾಶ್ವತ ಪರಿಹಾರ ಕಲ್ಪಿಸಲು ಸುಮಾರು 40 ಲಕ್ಷಕ್ಕೂ ಅಧಿಕ ಮೊತ್ತದ ಅನುದಾನದ ಅವಶ್ಯಕತೆ ಇದೆ

ಈ ಮೊತ್ತವನ್ನು ಗ್ರಾ.ಪಂ ಗಳಿಂದ ಭರಿಸಲು ಸಾಧ್ಯವಿಲ್ಲ.ಈ ಕಾರಣದಿಂದ ಶಾಸಕರಿಗೆ ಹಲವಾರು ಬಾರಿ ಮನವಿ ನೀಡಿದ್ದರೂಯಾವುದೇ ಕ್ರಮ ಕೈಗೊಳ್ಳದೆ ಈಗ ಗ್ರಾ.ಪಂ ಚುನಾವಣೆ ಸಮೀಪಿಸುವಾಗ ಅನಿರೀಕ್ಷಿತ ಭೇಟಿ ಎಂಬ ಹೆಸರಿನಲ್ಲಿ ಚರಂಡಿ ಮುಂಭಾಗ ನಿಂತು ಫೋಟೋ ತೆಗೆದು ಕೇವಲ ಪರಿಹಾರದ ಭರವಸೆ ನೀಡಿ ತಮ್ಮ ಕೆಲವು ಹಿಂಬಾಲಕರ ಮೂಲಕ ಸಜೀಪ ನಡು ಗ್ರಾಮ ಪಂಚಾಯತ್ ನ ಆಡಳಿತದ ಬಗ್ಗೆ ಬಾಲಿಶ ಆರೋಪ ಹೊರಿಸಿ ರಾಜಕೀಯ ಮಾಡುವುದು ನಿಮ್ಮ ಘನತೆ ಮತ್ತು ವರ್ಚಸ್ಸಿಗೆ ಶೋಭೆ ತರುವಂತದಲ್ಲ,ಈ ಗ್ರಾಮ ಯಾವ ರೀತಿ ಅಭಿವೃದ್ಧಿಯ ಪಥದೆಡೆಗೆ ಸಾಗಿದೆ ಎಂದು ಈ ಊರಿನ ಜನಸಾಮಾನ್ಯರಿಗೆ ತಿಳಿದಿದೆ.

ಮಾನ್ಯ ಶಾಸಕರೇ ,ತುಂಬೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಎಸ್ ಅಬ್ಬಾಸ್ ರವರ ಸಜೀಪ ನೇತ್ರಾವತಿ ನದಿ ಬದಿಯಲ್ಲಿರುವ ಅಡಿಕೆಮರದ ತೋಟಕ್ಕೆ ನಿಮ್ಮ ಶಾಸಕ ನಿಧಿಯಿಂದ 25 ಲಕ್ಷ ರೂಪಾಯಿ ವೆಚ್ಚ ಮಾಡಿಕೊಂಡು ಬೃಹತ್ತಾಕಾರದ ಕಾಂಕ್ರೀಟ್ ತಡೆಗೋಡೆಯನ್ನು ನಿರ್ಮಿಸಿರುತ್ತೀರಿ.ಪ್ರತಿವರ್ಷ ವೂ ಬೈಲಗುತ್ತು ಪರಿಸರದ ಸುಮಾರು 25ಕ್ಕೂ ಹೆಚ್ಚು ಮನೆಗಳು ನೆರೆನೀರಿನಲ್ಲಿ ಜಲಾವೃತಗೊಂಡು ಆ ಮನೆಯವರು ಅನುಭವಿಸುವ ಕಷ್ಟ ನೋವು ಗಳಿಗಿಂತಲೂ ಮಾಜಿ ಜಿಲ್ಲಾಪಂಚಾಯತ್ ಸದಸ್ಯರ ತೋಟದ ಸಮಸ್ಯೆಯೇ ನಿಮಗೆ ದೊಡ್ಡದಾಯಿತೇ ಎಂದು ಪ್ರಶ್ನಿಸಿದ್ದಾರೆ .

ಮಾನ್ಯ ಯು ಟಿ ಕಾದರ್ ರವರೇ।ಇನ್ನು ಮುಂದಕ್ಕಾದರು ನಾವು ಸಲ್ಲಿಸಿದ ಮನವಿಯ ಪುಟಗಳನ್ನು ತಿರುಗಿಸಿ ಓದಿ ಅದರಲ್ಲಿ ಬೈಲುಗುತ್ತು ಪ್ರದೇಶದ ಸಮಸ್ಯೆ ಮಾತ್ರವಲ್ಲದೇ ಶಾಸಕರ ನಿಧಿಯಿಂದ ನಡೆಯಬೇಕಾಗಿರುವ ಹಲವಾರು ಕೆಲಸ ಕಾರ್ಯಗಳು ಬಾಕಿ ಇವೆ. ಹಾಗಾಗಿ ಇನ್ನೊಮ್ಮೆ ಅನಿರೀಕ್ಷಿತ ಅಥವಾ ನಿರೀಕ್ಷಿತ ಭೇಟಿ ಕೊಡುವಾಗ ನಾವು ಸಲ್ಲಿಸಿದ ಮನವಿ ಪತ್ರಗಳನ್ನು ಓದಿಕೊಂಡು ಅನುದಾನವನ್ನು ತೆಗೆದುಕೊಂಡೇ ಬರಲಿ ಎಂದು ಸಜಿಪ ನಡು ಎಸ್.ಡಿ.ಪಿ.ಐ ಗ್ರಾಮ ಸಮಿತಿ ಅಧ್ಯಕ್ಷರಾದ ಮುಹಮ್ಮದ್ ನವಾಝ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...