ಎಲ್ಲರಿಗೂ ಮಾದರಿಯಾಗುತ್ತಿರುವ ಮುಕ್ಕಚ್ಚೇರಿ ಯಾ ಮೊಹಲ್ಲಾ ಸಮಿತಿ ಹಾಗು ಊರಿನ ಯುವಕರು

(www.vknews.com) : ಹೌದು ಉಳ್ಳಾಲದ ಮುಕ್ಕಚೇರಿ ಮೊಹಲ್ಲದವರು ಇಲ್ಮ್ ನ್ ವಿಷಯದಲ್ಲಿ, ಉಲಮಾಗಳನ್ನು, ಸದತ್ಗಳನ್ನು ಹಾಗೂ ಇಲ್ಮ್ ಕಲಿಯುವ ಮುತಾಲಿಮರನ್ನು ಗೌರವಿಸುದರಲ್ಲಿ ಯಾವಾಗಲೂ ಎಲ್ಲರಿಗೂ ಮಾದರಿಯಾಗಿದ್ದಾರೆ. ಅದೇ ಕಾರಣದಿಂದ ಕಳೆದ 20 ವರ್ಷಗಳಿಂದ ಅಲ್ಲಿ ಪಳ್ಳಿ ದರ್ಸ್ ಬಹಳ ಅಚ್ಚುಕಟ್ಟಾಗಿ ನಡೆಯುತಾ ಬರುತ್ತಿದೆ. ಅಷ್ಟೇ ಅಲ್ಲ ಅಲ್ಲಿನ ಯುವಕರಂತೂ ಹಿರಿಯರಿಗಿಂತ ಹೆಚ್ಚಾಗಿ ಇಲ್ಮ್ನ ವಿಷಯದಲ್ಲಿ, ಮಸೀದಿಯ ವಿಷಯದಲ್ಲಿ, ಮಸೀದಿಯಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಕ್ಕೆ ಮುಂದೆ ನಿಲ್ಲುವವರಾಗಿದ್ದರೆ. ಅಲ್ಲಿನ ಯುವಕರೇ ಅಲ್ಲಿಯ ಆಸ್ತಿ.

ಈಗ ಕೋರೋಣ ದಿಂದ ಉಳ್ಳಾಲದ ಹಲವು ಕಡೆ ಸರಕಾರದ ನಿಯಮದ ಪ್ರಕಾರ ಮಯ್ಯತ್ ದಫನ್ ಮಾಡಲು ಕಷ್ಟ ಆಗುತ್ತೆ ಅಂತ ಅರಿತು, ಹಾಗೂ ಕೋರೋಣ ದಿಂದ ಮರಣ ಹೊಂದಿದವರ ಮಯ್ಯತ್ ಆದಷ್ಟು ಬೇಗ ದಫನ ಮಾಡ ಬೇಕು ಎಂದು ಅರಿತು, ಈಗಲೇ 10 ರಷ್ಟು ಖಬರ್ ಗಳನ್ನೂ ಅಲ್ಲಿಯ ಆಡಳಿತ ಸಮಿತಿಯೊಂದಿಗೆ ಸೇರಿಕೊಂಡು ಅಲ್ಲಿಯ ಯುವಕರು ರೆಡಿ ಮಾಡಿದ್ದಾರೆ. ಅಲ್ಲದೆ ಕೋರೋಣ ದಿಂದ ಮರಣ ಹೊಂದುವ ಮಯ್ಯತ್ ನ ಪರಿಪಾಲನೆ ನಡೆಸಲು ಸಿದ್ದರಾಗಿದ್ದಾರೆ.

ಅಲ್ಲದೆ ಊರಿನಲ್ಲಿ ಮಯ್ಯತ್ ಪರಿಪಾಲನಗೆ ಬೇಕಾದ ಎಲ್ಲಾ ರೀತಿಯ ವಸ್ತುಗಳನ್ನು, ಖಬರ್ ಸ್ಥಾನಕ್ಕೆ ಬೇಕಾದ ಟೆಂಟ್, ಖಬರ್ ತೆಗಯಲು ಬೇಕಾದ ಕಂಪ್ರೆಸರ್ ಯುವಕರೇ ಖರೀದಿ ಮಾಡಿದ್ದಾರೆ. ಯುನೈಟೆಡ್ ಮುಕ್ಕಚೇರಿ ಎಂಬ ಯುವಕರ ಟೀಮ್ ಮಯ್ಯತ್ ಸ್ಥಾನ ಮಾಡಲು ಬೇಕಾದ ಸಾಮಗ್ರಿಗಳನ್ನು ಸಹ ಆಡಳಿತ ಸಮಿತಿಗೆ ಕೊಟ್ಟಿದ್ದಾರೆ.

ಒಟ್ಟಾರೆ ಹೇಳುದಾದರೆ ಅಲ್ಲಿಯ ಯುವಕರು ಒಟ್ಟಿಗೆ ಸೇರಿ ಒಂದು ಮಾದರಿ ಮೊಹಲ್ಲಾ ಮಾಡಲು ಸಮಿತಿಯವರಿಗೆ ಸಹಕಾರಿಯಾಗಿದ್ದಾರೆ
ಮುಖ್ಯವಾಗಿ ಅಲ್ಲಿ ಫೋಟೋ ತೆಗೆದು ರಾಜಕೀಯ ಮಾಡಲು ಆ ಯುವಕರು ಇಲ್ಲ. ಅವರ ಉದ್ದೇಶ ಅಲ್ಲಾಹನ ಸಂತ್ರಿಪ್ತಿಯಾಗಿದೆ. ಅಲ್ಹಮ್ದುಲಿಲ್ಲಾಹ್.

ಇದಕ್ಕೆ ಸಹಕಾರ ನೀಡಿದ ಅಲ್ಲಿಯ ಯುವಕರು, ಪ್ರತೇಕವಾಗಿ ಅಲ್ಲಿ ಸಮಿತಿಯ ಸದಸ್ಯರು ಇದಕ್ಕೆಲ್ಲ ಮುಂದಾಳು ಆಗಿ ಕೆಲಸ ಮಾಡುತಿರುವ ನಾಝಿಮ್ ಮುಕ್ಕಚೇರಿ, ಅಶ್ರಫ್ ಆಟೋ, ಹಿದಾಯತ್, ಶಬೀರ್, ಮುಹಮ್ಮೆದ್ ಕೈಕೋ, ಇಮ್ರಾನ್, ಜಬ್ಬಾರ್, ಬಾತಿಶ್, ರಿಜ್ವಾನ್, ಶಿಹಾಮ್, ಅಬ್ರಾರ್ ರಂತಹ ಎಲ್ಲಾ ಯುವಕರಿಗೂ ಅಲ್ಲಾಹು ಬರಕತ್ ನೀಡಲಿ. ಎಲ್ಲಾ ಆಫತ್ ಮೂಸೀಬತ್ ಗಳಿಂದ ಅಲ್ಲಾಹು ಕಾಪಾಡಲಿ. ಖಬರ್ ನ ಶರ್ ನಿಂದ ನಮ್ಮೆಲ್ಲರನ್ನೂ ರಕ್ಷಿಸಲಿ. ಆಮೀನ್..

MHB Ullal

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...