ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): ಹೌದು ಸುಮಾರು 2014 ರಲ್ಲಿ 23 ಜನ ಸದಸ್ಯರನ್ನು ಒಳಗೊಂಡು ಅಂದು ಪ್ರಾರಂಭಿಸಿದ ಈ ಗ್ರೂಪ್ ಇಂದು 85 ರಷ್ಟು ಜನರ ಸಮೂಹದ ಬಳಗವಾಗಿ ಸಮಾಜಿಕ ಚಟುವಟಿಕೆಗಳಲ್ಲಿ ಮುನ್ನುಗ್ಗುತ್ತಿದೆ.
ಹಲವು ಕಾರ್ಯಕ್ರಮಗಳಾದ ಪಂದ್ಯಾವಳಿ, ರಾಜಕೀಯವಾಗಿ, ಸಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಈ ಗ್ರೂಪಿನ ಸದಸ್ಯರುಗಳು ಸಕ್ರೀಯವಾಗಿದ್ದು ತಮ್ಮನ್ನು ತಾವು ಮುಂದುವರೆಸಿಕೊಂಡಿದ್ದಾರೆ.
ನಮ್ಮೂರಿನ ಹಾಗೂ ಎಲ್ಲಾ ಸುದ್ದಿಗಳನ್ನು ಸರ್ವರಿಗೂ ತಲುಪಿಸಲು *ನೆಕ್ಕರೆ ಫ್ರೆಂಡ್ಸ್* ಸಹಕಾರಿಯಾಗಿದೆ.
ನೆಕ್ಕರೆ ಎಂಬ ಪುಟ್ಟದಾದ ಊರಿನಲ್ಲಿ ದೊಡ್ಡ ಮನಸ್ಸಿನ ವ್ಯಕ್ತಿಗಳೇ ಇರುವುದು. ಊರು ಚಿಕ್ಕದಾದರೂ ಇಲ್ಲಿನ ಜನರ ಮನಸ್ಸು ದೊಡ್ಡದು…ಕಷ್ಟದಲ್ಲಿರುವಾಗ ಕೈ ಕೈ ಹಿಡಿಯುವ ವ್ಯಕ್ತಿಗಳೇ ನಮ್ಮೂರಿನ ನೆಕ್ಕರೆಯವರು.
ಇದೀಗ ಏಳನೇ ವರ್ಷದತ್ತಾ ಕಾಲಿಡುತ್ತಿದೆ…ಬಹಳ ಖುಷಿನೀಡುತ್ತಿದೆ…ಹಲವಾರು ಸ್ನೇಹಿತರು, ಹಿರಿಯರು, ಯುವಕರು, ಸಹೋದರ ಸಹೋದರಿಯರ ಪ್ರೀತಿಪೂರ್ವಕವಾದ ಸಹಕಾರವೇ ನಮ್ಮೂರಿಗೆ ಹೆಮ್ಮೆ.
ನಮಗೆ ಮಾರ್ಗದರ್ಶನ ನೀಡುತ್ತಿರುವ ನಮ್ಮೂರಿನ ಧರ್ಮಗುರುಗಳು….ಅಲ್ಲಾಹನ ಸುಂದರ ಭವನ…ನಮ್ಮೂರಿಗೆ ಸುಭದ್ರ.
ಹಿರಿಯರಾದ ಪುತ್ತುನ್ಙಾಕನವರ ಎ.ಎಸ್ ಫಾತಿಮಾ ಪೆಟ್ರೋಲ್ ಪಂಪ್, ಕೆ.ಎನ್ ಸಹೋದರರ ಹೋಟೆಲ್ ಹಾಗೂ ಆಟೋ ಲಿಂಕ್ಸ್, ಎಸ್.ಎಮ್ ಸಹೋದರರ ಆಟೋ ಲಿಂಕ್ಸ್ ಹಾಗೂ ಸ್ಟೋನ್ ಕ್ರಷರ್, ಆರ್.ಆರ್ ರಹಿಮಾನ್ ರೋಡ್ ಲೈನ್ಸ್, ಮೆಹಬೂಬ್ ಸಹೋದರರ ಅರ್ಥ್ ಮೂವರ್ಸ್ ಹಾಗೂ ಸ್ಪೀಡ್ ಸ್ಟೋನ್ ಗ್ರೂಪ್ ಆಫ್ ಬೆಂಗಳೂರು, ಇವೆಲ್ಲ ನಮ್ಮೂರಿಗೆ ಅಭಿಮಾನ….
ನೆಕ್ಕರೆಯ ವಿಶೇಷತೆ ಏನೆಂದರೆ ಎಲ್ಲರೂ ಹೆಚ್ಚಿನವರು ಡ್ರೈವರ್ ಗಳೇ…ಹಲವು ಫೀಲ್ಡ್ ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಉನ್ನತಿಯಲ್ಲಿದ್ದಾರೆ..ಇವರಿಗೆ ಅಲ್ಲಾಹನ ಸಹಾಯ ಸದಾ ಇರಲಿ.
ನಮ್ಮೂರಿನ ಸುಂದರ ಪ್ರಕೃತಿ ಸೌಂದರ್ಯ, ಅಡಿಕೆ ತೋಟ, ಬಾಳೆ ತೋಟ, ನೆಕ್ಕರೆ ಮಾವು, ಇವೆಲ್ಲವೂ ಎಲ್ಲಾ ಮನೆಯಲ್ಲೂ ಸರ್ವೇಸಾಮಾನ್ಯ….
ವ್ಯವಹಾರಿಕವಾಗಿ ಎಲ್ಲರೂ ಸಮಾನರಾಗಿದ್ದೂ ನಾವೆಲ್ಲರೂ ಒಂದೇ ಮನೆಯ ಸದಸ್ಯರಾಗಿ ಅಣ್ಣ ತಮ್ಮಂದಿರಂತಿದ್ದೇವೆ…ಇನ್ಷಾ ಅಲ್ಲಾ.
ನಮಗೆಲ್ಲರಿಗೂ ಅಲ್ಲಾಹನು ತೌಫೀಕ್ ನೀಡಲಿ…ಆಮೀನ್
✍🏻ಫೌಸಿಲ್ ನೆಕ್ಕರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.