ದಕ್ಷಿಣ ಕನ್ನಡ ಜಿಲ್ಲಾ ಸುದ್ದಿಗಳು

ಕಾರ್‍ಸ್ಟ್ರೀಟ್‍ ಕಾಲೇಜಿನಲ್ಲಿ ವಿದ್ಯಾರ್ಥಿ ಕುಟುಂಬಗಳಿಗೆ ಆಹಾರ ಕಿಟ್‍ಗಳ ವಿತರಣೆ

ಮಂಗಳೂರು (www.vknews.com) : ರಥಬೀದಿಯಡಾ.ಪಿ.ದಯಾನಂದ ಪೈ.- ಪಿ.ಸತೀಶ ಪೈ.ಸರ್ಕಾರಿ ಪ್ರಥಮದರ್ಜೆಕಾಲೇಜು ಮಂಗಳೂರು, ರಥಬೀದಿ ಇಲ್ಲಿ, ಕೊರೊನಾ ವೈರಸ್‍ನಿಂದಉಂಟಾದ ಸಂಕಷ್ಟದಿಂದ ತೊಂದರೆಗೊಳಗಾದ ಕಾಲೇಜಿನ ವಿದ್ಯಾರ್ಥಿಗಳ ಹೆತ್ತವರಿಗೆಇಸ್ಕಾನ್‍ನಅಕ್ಷಯ ಪಾತ್ರೆ ವತಿಯಿಂದ 150ಕ್ಕೂ ಹೆಚ್ಚು ಆಹಾರದ ಕಿಟ್‍ಗಳನ್ನು ವಿತರಿಸಲಾಯಿತು.

ಇಸ್ಕಾನ್‍ನಅಕ್ಷಯ ಪಾತ್ರೆಕೋವಿಡ್- 19ನ ಪರಿಹಾರ ಸಂಯೋಜಕ ಹಾಗೂ ಇಸ್ಕಾನ್‍ಅಕ್ಷಯ ಪಾತ್ರೆಯಉಪಾಧ್ಯಾಕ್ಷ ಸನಂದನಾದಾಸಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳು ಧೃತಿಗೆಡದೆ ಕೋವಿಡ್-19 ಸೃಷ್ಟಿಸಿರುವ ಆತಂಕದ ಸಮಯದಲ್ಲಿಧನಾತ್ಮಕವಾಗಿ ಆಲೋಚಿಸಿ ಆತ್ಮಸ್ಥೈರ್ಯದೊಂದಿಗೆ ಹೊಸ ವಿಷಯ, ತಂತ್ರಜ್ಞಾನ, ಸಂಸ್ಕಾರಗಳನ್ನು ಕಲಿತು ಹೊಸತನಕ್ಕೆ ನಾಂದಿ ಹಾಡಲುಕರೆ ನೀಡಿದರು.

ಕಿಟ್‍ನಲ್ಲಿ ಸುಮಾರು 16 ಬಗೆಯಆಹಾರ ಸಾಮಗ್ರಿಗಳಿದ್ದು ಸಣ್ಣಕುಟುಂಬಕ್ಕೆ 12 ದಿನಗಳಿಗೆ ಸಾಕಾಗುವಷ್ಟು ಆಹಾರ ಸಾಮಾಗ್ರಿಗಳನ್ನು ನೀಡಲಾಗಿತ್ತು.
ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜಶೇಖರ್ ಹೆಬ್ಬಾರ್ ಸಿ.ಕಾರ್ಯಕ್ರಮದಅಧ್ಯಕ್ಷ ಸ್ಥಾನ ವಹಿಸಿ ಮಾತನಾಡುತ್ತಾಕೊರೊನಾ ವೈರಸ್ ವಿದ್ಯಾರ್ಥಿಗಳಿಗೆ ಶುಚಿತ್ವ, ಆನ್‍ಲೈನ್ ಪಾಠವಲ್ಲದೇ ಬದುಕಿನ ಪಾಠವನ್ನು ಸಹ ಕಲಿಸಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿಕಾಲೇಜಿನಉಪನ್ಯಾಸಕ ಡಾ.ಶಿವರಾಮ ಪಿ.ಉಪಸ್ಥಿತರಿದ್ದು, ಇಸ್ಕಾನ್‍ಅಕ್ಷಯ ಪಾತ್ರೆಗೆ ಹಾಗೂ ವಿಶೇಷವಾಗಿ ಆಹಾರದ ಕಿಟ್‍ಗಳನ್ನು ಪ್ರಾಯೋಜಿಸಿದ ಹೈದ್ರಾಬಾದ್‍ನ ಮೈಕ್ರಾನ್, ಬೆಂಗಳೂರಿನ ಅಡೊಬ್ ಕಂಪೆನಿಗಳಿಗೆ ಧನ್ಯವಾದಗಳನ್ನು ಸಮರ್ಪಿಸಿದರು.ಕಾಲೇಜಿನ ಬೋಧಕೇತರ ಸಿಬ್ಬಂದಿ ಮತ್ತು ಸ್ವಯಂ ಸೇವಕರಾದತುಷಾರ್, ಅಕ್ಷಯ್, ಪ್ರಜ್ವಲ್, ವಿನೋದ ಇವರುಗಳು ಕಾರ್ಯಕ್ರಮಕ್ಕೆ ಸಹಕರಿಸಿದ್ದರು.ಕಾಲೇಜಿನ 3 ತಂಡಗಳು ಕಿಟ್‍ಗಳನ್ನು ತಯಾರು ಮಾಡಲುಅಕ್ಷಯ ಪಾತ್ರೆಗೆ ಸಹಕರಿಸಿರುತ್ತಾರೆ.

 

ಅಡಿಕೆ ಮರ ರೋಗಗಳಿಗೆ ಔಷಧಿ ಸಿಂಪಡಿಸುವುದು ಅಗತ್ಯ: ತೋಟಗಾರಿಕೆ ಇಲಾಖೆ

ಅಡಿಕೆ ಎಲೆ ಚುಕ್ಕೆ ರೋಗವುಮಳೆಗಾಲದಲ್ಲಿ ಹೆಚ್ಚಾಗಿ ಕಂಡುಬರುವ ಶಿಲೀಂದ್ರ ರೋಗವಾಗಿದ್ದು, ಎಲೆಗಳ ಮೇಲೆ ತೇವಾಂಶಇದ್ದಾಗ ಈ ರೋಗಕಂಡು ಬರುತ್ತದೆ. ಮೊದಲು ತಳಭಾಗದ ಎಲೆಗಳ ಮೇಲೆ ಕಂದುಬಣ್ಣದ ಸಣ್ಣ ಸಣ್ಣ ಚುಕ್ಕೆಗಳು ಕಂಡು ಬಂದು ನಂತರ ಒಂದುರೂಪಾಯಿ ನಾಣ್ಯದಷ್ಟು ಅಗಲವಾಗುತ್ತದೆ. ನಂತರ ಇಡೀ ಎಲೆಗಳಿಗೆ ಹರಡಿ ಎಲೆಗಳು ಒಣಗುತ್ತವೆ. ಇದರಿಂದಆಹಾರತಯಾರಿಕೆಕಡಿಮೆಯಾಗಿಅಡಿಕೆ ಕಾಯಿ ಗಾತ್ರ, ಗುಣಮಟ್ಟ ಮತ್ತು ಇಳುವರಿ ಕಡಿಮೆಯಾಗುತ್ತದೆ. ರೋಗ ಹೆಚ್ಚಾಗಿ ತಳಭಾಗದ 4 ರಿಂದ 5 ಸೋಗೆಗಳು ಒಣಗುತ್ತವೆ. ಇದರಿಂದ ಶೇ.50 ರಷ್ಟು ಇಳುವರಿ ಕಡಿಮೆಯಾಗುತ್ತದೆ.

ರೋಗದ ನಿರ್ವಹಣೆಗೆ; ರೋಗಪೀಡಿತ ಸತ್ತ ಎಲೆಗಳನ್ನು ತೆಗೆದು ಸುಡುವುದು. 2) ತೋಟದಲ್ಲಿ ನೀರು ನಿಲ್ಲದಂತೆ ಎಚ್ಚರವಹಿಸುವುದು. 3) 3 ಗ್ರಾಂ. ಕಾಪರ್‍ ಆಕ್ಸಿಕ್ಲೋರೈಡ್‍ಅಥವಾ ಶೇ.1ರ ಬೋರ್ಡೋದ್ರಾವಣವನ್ನು ಸಿಂಪಡಿಸುವುದು.

ಅಡಿಕೆ ಕೊಳೆರೋಗಳು ಜೂನ್‍ನಿಂದ ಸೆಪ್ಟೆಂಬರ್ ತಿಂಗಳವರೆಗೆ ಕಾಣಿಸಿಕೊಳ್ಳುವುದರಿಂದ ಬೆಳೆಯಲ್ಲಿಹೆಚ್ಚಿನ ನಷ್ಟವನ್ನುಂಟು ಮಾಡುವ ಸಾಧ್ಯತೆಇರುತ್ತದೆ. ಕಳೆದ ವರ್ಷ ಕೊಳೆರೋಗ ಬಂದ ತೋಟಗಳಲ್ಲಿ ರೋಗಾಣು ಸುಪ್ತಾವಸ್ಥೆಯಲ್ಲಿದ್ದು, ಈಗ ಪೂರಕ ವಾತಾವರಣಇರುವುದರಿಂದಒಮ್ಮೆಲೆತೀವ್ರವಾಗುತ್ತದೆ.ಈ ರೋಗವು ಗಾಳಿ ಮುಖಾಂತರ ಹರಡುವ ಸಾಧ್ಯತೆಗಳು ಹೆಚ್ಚಾಗಿದೆ.

ನಿರ್ವಹಣೆಕ್ರಮ: ಶೇ.1 ರ ಬೋರ್ಡೋದ್ರಾವಣ ಸಿಂಪರಣೆಯನ್ನು ಮಳೆಗಾಲ ಪ್ರಾರಂಭವಾಗುವುದಕ್ಕೆ ಮೊದಲು ಮತ್ತು 30ರಿಂದ45 ದಿನಗಳ ನಂತರಇನ್ನೊಮ್ಮೆ ಸಿಂಪಡಿಸಬೇಕು. ರೈತರು ಮಳೆ ಬಿಡುವಿದ್ದಾಗ 2 ನೇ ಹಂತದ ಬೋಡೋದ್ರಾವಣ ಸಿಂಪರಣೆಯನ್ನು ಕೈಗೊಳ್ಳಲು ಈಗ ಸೂಕ್ತ ಕಾಲವಾಗಿದೆ.
ಕಾಳುಮೆಣಸು ಸೊರಗು ರೋಗಗಳುಮುಂಗಾರು ಹಂಗಾಮಿನಲ್ಲಿ ಹೆಚ್ಚಾಗಿ ಬಾಧಿಸುತ್ತದೆ.ಈ ಸೊರಗುರೋಗ ನಿಯಂತ್ರಿಸಲು ಶೇ.1 ರ ಬೋರ್ಡೋದ್ರಾವಣವನ್ನು ಬಳ್ಳಿಗಳ ಎಲ್ಲಾ ಎಲೆಗಳಿಗೆ ಬೀಳುವಂತೆ ಸೂಕ್ಷ್ಮವಾಗಿ ಸಿಂಪಡಿಸಿದ ನಂತರಅದೇದ್ರಾವಣವನ್ನು ಬಳ್ಳಿಗಳ ಬುಡಕ್ಕೂ ಸಿಂಪಡಿಸಬೇಕು.ಈ ಸಿಂಪರಣೆಯನ್ನು 30-40 ದಿನಗಳ ಅಂತರದಲ್ಲಿ ಪುನಾರವರ್ತಿಸಬೇಕು.

ಹೆಚ್ಚಿನ ಮಾಹಿತಿಗಾಗಿದೂರವಾಣಿ ಸಂಖ್ಯೆ: 8277806372 ಅಥವಾಮಂಗಳೂರುತೋಟಗಾರಿಕೆ ವಿಷಯತಜ್ಞರು, ರಿಶಲ್‍ ಡಿಸೋಜ ಅವರನ್ನು ಸಂಪರ್ಕಿಸುವಂತೆ ಮಂಗಳೂರು ತೋಟಗಾರಿಕೆ ಇಲಾಖೆಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

 

ಸೈನಿಕರ ಹೆಸರಿನಲ್ಲಿವಾಹನ ಮಾರಾಟವಂಚನೆ: ಜಾಗರೂಕರಾಗಿರಲು ಸಲಹೆ

ಇತ್ತೀಚಿನ ದಿನಗಳಲ್ಲಿ ಸೈನಿಕರ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರಿಗೆ ವಂಚಸುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ಸೆಕೆಂಡ್‍ಹ್ಯಾಂಡ್ ವಾಹನಗಳ ಮಾರಾಟದ ಹೆಸರಿನಲ್ಲಿಓಎಲ್‍ಎಕ್ಸ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ತಾವು ಸೇನೆಯಲ್ಲಿ ಸೇವೆ ಸಲ್ಲಿಸಿದವರು ಎಂದು ಕೆಲವು ಕಿಡಿಗೇಡಿಗಳು, ಸಮವಸ್ತ್ರ ಧರಿಸಿದ್ದ ಸೈನಿಕರಭಾವಚಿತ್ರವನ್ನುಆಪ್‍ಲೋಡ್ ಮಾಡಿ,ತಾವು ಸೈನಿಕರೆಂದು ಬಿಂಬಿಸಿವಾಹನಗಳು ಮಾರಾಟಕ್ಕೆಇದೆಎಂದುಪೋಸ್ಟ್ ಮಾಡುತ್ತಿದ್ದಾರೆ. ಬಳಿಕ ತಮ್ಮನ್ನು ಸಂಪರ್ಕಿಸಿದವರಿಂದ ಮುಂಗಡ ಹಣವಸೂಲಿ ಮಾಡಿ, ನಂತರ ವಾಹನ ನೀಡದೆ ವಂಚಿಸುತ್ತಿರುವಪ್ರಕರಣಗಳು ಬೆಳಕಿಗೆ ಬರುತ್ತಿವೆ.

ಈ ರೀತಿವಂಚನೆಗೊಳಗಾದ ಹಲವರು, ನಗರದ ಸೇನಾ ನೇಮಕಾತಿಕಚೇರಿಗೆ ಬರುತ್ತಿದ್ದಾರೆ.ಆದರೆ ಸೈನಿಕರಾರುಇಂತಹದಂಧೆಯಲ್ಲಿ ತೊಡಗಿಸಿಕೊಂಡಿಲ್ಲ. ಸಾರ್ವಜನಿಕರುಇಂತಹವರೊಂದಿಗೆ ವ್ಯವಹರಿಸುವಾಗಜಾಗರೂಕರಾಗಿರಬೇಕೆಂದುಪ್ರಕಟಣೆ ತಿಳಿಸಿದೆ.

 

ನರಿಮೊಗರು: ತಾ.ಪಂ.ಕಟ್ಟಡ ಏಲಂ

ಪುತ್ತೂರುತಾಲೂಕಿನ ನರಿಮೊಗ್ರುಗ್ರಾಮ ಪಂಚಾಯತ್ ವ್ಯಾಪ್ತಿಯ ಪುರುಷರ ಮಾರುಕಟ್ಟೆಯಲ್ಲಿರುವ (ಹಾಲು ಉತ್ಪಾದಕರ ಸಹಕಾರಿ ಸಂಘದ ಬಳಿ ಇರುವ) ತಾಲೂಕು ಪಂಚಾಯತ್‍ಕಟ್ಟಡದ ಏಲಂ ಅನ್ನು ಪುತ್ತೂರುತಾಲೂಕು ಪಂಚಾಯತ್‍ಕಚೇರಿಯ ಸಭಾಂಗಣದಲ್ಲಿಆಗಸ್ಟ್5 ರಂದುಅಪರಾಹ್ನ 4 ಗಂಟೆಗೆ ನಡೆಸಲಾಗುತ್ತದೆ.

ಬಿಡ್ಡುದಾರರುಅಂದುಬೆಳಿಗ್ಗೆ 10 ಗಂಟೆಯಿಂದ 3 ಗಂಟೆಯೊಳಗೆ ರೂ 1,000 ಪಾವತಿಸಿ ರಶೀದಿ ಪಡೆದುಕೊಳ್ಳತಕ್ಕದ್ದು ನಂತರ ಬಂದ ಬಿಡ್ಡುದಾರರಿಗೆಅವಕಾಶವಿರುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಹಾಗೂ ಶರ್ತಗಳಿಗೆ ತಾಲೂಕು ಪಂಚಾಯತ್ ಪುತ್ತೂರುಕಚೇರಿ, ದೂರವಾಣಿ ಸಂಖ್ಯೆ 08251 232361 ನ್ನು ಸಂಪರ್ಕಿಸಲು ಪುತ್ತೂರುತಾಲೂಕು ಪಂಚಾಯತ್‍ನಕಾರ್ಯನಿರ್ವಾಹಕಅಧಿಕಾರಿಇವರ ಪ್ರಕಟಣೆ ತಿಳಿಸಿದೆ.

 

ಕಾನೂನು ಪದವೀಧರರ ಶಿಷ್ಯ ವೇತನ-ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖಾ ವತಿಯಿಂದ 2020-21 ನೇ ಸಾಲಿಗೆ ಕಾನೂನು ಪದವೀಧರರ ಶಿಷ್ಯ ವೇತನಕ್ಕೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ನವೆಂಬರ್ 31 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಇಲಾಖಾ ವೆಬ್‍ಸೈಟ್ http://www.sw.kar.nic.in ಉಪನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ದ.ಕ. ಜಿಲ್ಲಾ ಪಂಚಾಯತ್ ಕಟ್ಟಡ, ಉರ್ವಸ್ಟೋರ್ಸ್, ದೂರವಾಣಿ ಸಂಖ್ಯೆ 0824 2451237 ನ್ನು ಸಂಪರ್ಕಿಸಲು ಮಂಗಳೂರು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

 

ಎಸ್‍ಎಸ್‍ಎಲ್‍ಸಿ ಮೌಲ್ಯಮಾಪನ: ನಿಷೇಧಾಜ್ಞೆ

ಎಸ್.ಎಸ್.ಎಲ್.ಸಿ. ಪರೀಕ್ಷೆ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಸುಸೂತ್ರವಾಗಿ ಹಾಗೂ ದೋಷರಹಿತವಾಗಿ ನಡೆಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜುಲೈ 13 ರಿಂದ ಜುಲೈ 20 ರವರೆಗೆ ದ.ಕ. ಜಿಲ್ಲೆಯಲ್ಲಿ ಮೌಲ್ಯಮಾಪನ ನಡೆಯುವ ಕೇಂದ್ರಗಳ 200 ಮೀಟರ್ ಸುತ್ತಮುತ್ತಲಿನ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ ದಂಡ ಪ್ರಕ್ರಿಯಾ ಸಂಹಿತೆ 1973 ರ ಕಲಂ 144 ರಂತೆ ನಿಷೇಧಾಜ್ಞೆಯನ್ನು ವಿಧಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಆದೇಶಿಸಿದ್ದಾರೆ.

 

ಪ.ಪಂಗಡ – ಕೋಳಿ ಸಾಕಾಣಿಕೆಕೇಂದ್ರ ಸ್ಥಾಪಿಸಲು ಅರ್ಜಿ ಆಹ್ವಾನ

2019-20ನೇ ಸಾಲಿನಲ್ಲಿ ವಿಶೇಷ ಕೇಂದ್ರೀಯ ನೆರವಿನಡಿ ಪರಿಶಿಷ್ಟ ಪಂಗಡಕ್ಕೆ ಕೋಳಿ ಸಾಕಾಣಿಕೆ ಕೇಂದ್ರಗಳನ್ನು ಸ್ಥಾಪಿಸಲು ಸಹಾಯಧನ ನೀಡುವಕಾರ್ಯಕ್ರಮವನ್ನು ಅನುಷ್ಟಾನಗೊಳಿಸಲು ಅರ್ಜಿಆಹ್ವಾನಿಸಲಾಗಿದೆ.

ದಕ್ಷಿಣಕನ್ನಡಜಿಲ್ಲೆಯ ಪರಿಶಿಷ್ಟ ವರ್ಗದವರು ನಿಗಧಿತ ನಮೂನೆಯಅರ್ಜಿಯನ್ನು ಸಂಬಂಧಪಟ್ಟತಾಲೂಕಿನ ಸಹಾಯಕ ನಿರ್ದೇಶಕರು, ಗ್ರೇಡ್-1&2 ಸಮಾಜಕಲ್ಯಾಣಇಲಾಖೆಯಿಂದಪಡೆಯಬಹುದು. ಅರ್ಜಿ ಸಲ್ಲಿಸಲುಆಗಸ್ಟ್ 10 ಕೊನೆ ದಿನ.

ಷರತ್ತುಗಳು:ಅರ್ಜಿದಾರರುಕರ್ನಾಟಕದವರಾಗಿದ್ದು, ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು, ಕೋಳಿ ಸಾಕಾಣಿಕೆ ಶೆಡ್ ನಿರ್ಮಿಸಲು ಫಲಾನುಭವಿಯ ಹೆಸರಿನಲ್ಲಿ ಸ್ವಂತಜಮೀನು ಹೊಂದಿರಬೇಕು ಹಾಗೂ ನೀರಿನ ಸೌಲಭ್ಯ ಹೊಂದಿರಬೇಕು, ವಿದ್ಯುತ್ ಸಂಪರ್ಕ ಹೊಂದಿರಬೇಕು, ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ನಿರಪೇಕ್ಷಣಾ ಪತ್ರ ಪಡೆದಿರಬೇಕು, ಆರೋಗ್ಯ ಹಾಗೂ ಪಶುಸಂಗೋಪನೆ ಇಲಾಖೆಗಳಿಂದ ಅನುಮತಿ ಪತ್ರ ಪಡೆದಿರಬೇಕು, ಅರ್ಜಿದಾರರು ಹಾಗೂ ಅವರಅವಲಂಬಿತಕುಟುಂಬ ಸದಸ್ಯರು ಸರ್ಕಾರಿ ನೌಕರಿಯಲ್ಲಿರಬಾರದು, ಅರ್ಜಿದಾರರು ಹಾಗೂ ಅವರಅವಲಂಬಿತಕುಟುಂಬ ಸದಸ್ಯರುಯಾವುದೇಯೋಜನೆಯಡಿ ಈ ಹಿಂದೆಯಾವುದೇ ಇಲಾಖೆ ಮತ್ತು ನಿಗಮದಿಂದಯಾವುದೇಯೋಜನೆಯಡಿ ಸೌಲಭ್ಯವನ್ನು ಪಡೆದಿರಬಾರದು, ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವ ಬಗ್ಗೆ ಪ್ರಮಾಣ ಪತ್ರ ನೀಡಬೇಕು, ಪಡಿತರಚೀಟಿ ಮತ್ತುಆಧಾರ್‍ಕಾರ್ಡ್ ಹೊಂದಿರಬೇಕು,ಘಟಕವೆಚ್ಚರೂ.5.50 ಲಕ್ಷಗಳಾಗಿದ್ದು, ಶೇ.75%ರಷ್ಟು ಸಹಾಯಧನವನ್ನುಇಲಾಖಾವತಿಯಿಂದನೀಡಲಾಗುವುದು.ಉಳಿದೆ ಶೇ.25% ರಷ್ಟುಅನುದಾನವನ್ನು ಫಲಾನುಭವಿಯು ಭರಿಸಬೇಕುಅಥವಾ ಬ್ಯಾಂಕ್‍ಗಳಿಂದ ಪಡೆಯಲು ಬದ್ಧನಾಗಿರಬೇಕುಎಂದುದಕ್ಷಿಣಕನ್ನಡಜಿಲ್ಲೆ, ಸಮಗ್ರಗಿರಿಜನಅಭಿವೃದ್ಧಿಯೋಜನೆಯೋಜನಾ ಸಮನ್ವಯಾಧಿಕಾರಿಪ್ರಕಟಣೆ ತಿಳಿಸಿದೆ.

 

ಉದ್ಯೋಗ ಮಾರುಕಟ್ಟೆ ಸ್ಥಿತಿ ಕುರಿತು ವೆಬಿನಾರ್

ಕ್ಷೇತ್ರಜನಸಂಪರ್ಕಕಾರ್ಯಾಲಯ, ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಭಾರತ ಸರ್ಕಾರ, ಮಂಗಳೂರು ಮತ್ತುಬೆಸೆಂಟ್ ಮಹಿಳಾ ಕಾಲೇಜಿನಇಂಗ್ಲೀಷ್ ವಿಭಾಗಇವರ ಸಹಯೋಗದಲ್ಲಿ ಕೋವಿಡ್-19 ನಂತರದಉದ್ಯೋಗ ಮಾರುಕಟ್ಟೆ ಸ್ಥಿತಿ ಮತ್ತು ಉದ್ಯೋಗಾಕ್ಷಿಗಳು ಅದಕ್ಕೆ ನಡೆಸಬೇಕಾದ ಸಿದ್ದತೆ ವಿಶೇಷ ವೆಬಿನಾರ್‍ಕಾರ್ಯಕ್ರಮಜುಲೈ 9 ರಂದುಮಂಗಳೂರಿನ ಬೆಸೆಂಟ್ ಮಹಿಳಾ ಕಾಲೇಜಿನಲ್ಲಿನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದಕ್ಷೇತ್ರ ಪ್ರಚಾರಅಧಿಕಾರಿರೋಹಿತ್.ಜಿ.ಎಸ್,,ಕೋವಿಡ್ ನಂತರ ಭಾರತದಉದ್ಯೋಗ ಮಾರುಕಟ್ಟೆಯಲ್ಲಿತೀವ್ರತರವಾದ ಏರಿಳಿತಳಾಗಿದ್ದು ಹಲವಾರುಬದಲಾವಣೆಗಳಾಗಿವೆ. ಈ ಬದಲಾವಣೆಯ ಸಮುದಾಯದಲ್ಲಿ ಉದ್ಯೋಗಾಂಕ್ಷಿಗಳುಹೆಚ್ಚಿನಕೌಶಲ್ಯ ಮತ್ತುಜ್ಞಾನಹೊಂದಿ ಉದ್ಯೋಗದಲ್ಲಿ ತೊಡಗಿಸಿಕೊಳ್ಳಬೇಕು ಎಂದುತಿಳಿಸಿದರು.

ಸಂಪನ್ಮೂಲ ವ್ಯಕ್ತಿ ಹರೀಶ್ ಶೆಟ್ಟಿ ಮಾತನಾಡಿಕೋವಿಡ್-19ನಂತರ ಭಾರತದಉದ್ಯೋಗ ಮಾರುಕಟ್ಟೆಯಲ್ಲಿಉಂಟಾದ ಪ್ರಮುಖ ಬದಲಾವಣೆಗಳು ಯಾವಕ್ಷೇತ್ರದಲ್ಲಿಉದ್ಯೋಗ ಪಡೆಯಲು ಅವಕಾಶಗಳಿವೆ ಎಂಬುದರಕುರಿತು ಮಾಹಿತಿ ನೀಡಿದರು. ರಾಜ್ಯ ಮತ್ತುಕೇಂದ್ರ ಸರ್ಕಾರಗಳು ಕೆಲವೊಂದುಆನ್ ಲೈನ್‍ಉಚಿತ ಕಾರ್ಯಗಾರಗಳನ್ನು ನಡೆಸುತ್ತಿದ್ದುಅದರ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.

ಕಾರ್ಯಕ್ರಮದಲ್ಲಿಪ್ರಾಂಶುಪಾಲರು ಸತೀಶ್ ಶೆಟ್ಟಿ, ಕಾಲೇಜಿನ ಸಂಚಾಲಕ ದೇವನಾಂದ ಪೈ,ಪ್ರೀತಾ ಭಂಡಾರಿ, ಗಿರೀಶ್‍ಕುಮಾರ್ ಹಾಗೂ ಮತ್ತಿತರು ಉಪಸ್ಥಿತರಿದ್ದರು.

 

ಜುಲೈ 13- ಬ್ಯಾರಿ ಅಕಾಡೆಮಿಯಿಂದ ಪುಸ್ತಕ ಮತ್ತು ಸಿಡಿ ಬಿಡುಗಡೆ

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಜುಲೈ 13 ರಂದು ಬೆಳಿಗ್ಗೆ 11 ಗಂಟೆಗೆ ಪುಸ್ತಕ ಮತ್ತು ಸಿಡಿ ಬಿಡುಗಡೆ ಸಮಾರಂಭವನ್ನು ಮಂಗಳೂರು ತಾಲೂಕು ಪಂಚಾಯತ್‍ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‍ಸಾರ್ ಪುಸ್ತಕ ಮತ್ತು ಸಿಡಿಯನ್ನು ಬಿಡುಗಡೆ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ವಹಿಸಲಿದ್ದಾರೆ. ಕೊರೋನ ಮುಂಜಾಗ್ರತ ಕ್ರಮವಾಗಿ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಪೂರ್ಣಿಮಾ ತಿಳಿಸಿದ್ದಾರೆ.

 

ಡಿಜಿಟಲ್ ಬೆಂಬಲಿತ ಮಾರ್ಗದರ್ಶನಕಾರ್ಯಕ್ರಮ-ಅರ್ಜಿಆಹ್ವಾನ

ಮಂಗಳೂರು ಜುಲೈ 09 (ಕರ್ನಾಟಕ ವಾರ್ತೆ):-ಬುಡಕಟ್ಟು ವ್ಯವಹಾರಗಳ ಸಚಿವಾಲಯವುಡಿಜಿಟಲ್ ಬೆಂಬಲಿತ ಮಾರ್ಗದರ್ಶನ ಕಾರ್ಯಕ್ರಮ“ಗೋಯಲ್”(ಸ್ವಯಂ ನಾಯಕರಾಗಿ ರೂಪುಗೊಳ್ಳುವುದು) ಪ್ರಾರಂಭಿಸಿದೆ.

ದುರ್ಗಮ ಪ್ರದೇಶದಲ್ಲಿರುವ ಪರಿಶಿಷ್ಟ ಪಂಗಡದಯುವಕರುಡಿಜಿಟಲ್ ವಿಶ್ವವನ್ನುಕರಗತ ಮಾಡಿಕೊಂಡುಅದನ್ನು ಬುಡಕಟ್ಟು ಸಮುದಾಯಕ್ಕೆತಲುಪಿಸುವ ಮೂಲಕ ಡಿಜಿಟಲ್ ಭಾರತದ ಧ್ಯೇಯಗಳನ್ನು ಅರ್ಥಮಾಡಿಕೊಂಡುತಮ್ಮ ಪ್ರತಿಭೆಯನ್ನು ಹೆಚ್ಚಿಸಿಕೊಳ್ಳಲು ಡಿಜಿಟಲ್ ಪ್ಲಾಟ್‍ಫಾರಂಗಳನ್ನು ಬಳಸಿಕೊಳ್ಳಲು ಅನುವಾಗಿಸುವುದುಈ ಕಾರ್ಯಕ್ರಮದಗುರಿಯಾಗಿರುತ್ತದೆ.

II ಡಿಜಿಟಲ್ ಸಾರಕ್ಷತೆ, ಉದ್ಯಮದಾರಿಕೆ ಮತ್ತುಜೀವನ ಕೌಶಲ್ಯಗಳ ಬಗ್ಗೆ ಸಲಹೆಗಾರಿಕೆಒದಗಿಸುವ ಮುಖಾಂತರತಮ್ಮ ಸಮುದಾಯಗಳಿಗೆ ಗ್ರಾಮ ಮಟ್ಟದಲ್ಲಿಡಿಜಿಟಲ್‍ಯುವ ನಾಯಕರಾಗಿ ರೂಪುಗೊಳ್ಳಲು ಅನುಕೂಲವಾಗಲು ಡಿಜಿಟಲ್‍ತಂತ್ರಜ್ಞಾನದ ಪ್ರತಿಭೆಯನ್ನು ಬೆಳೆಸುವುದು ಈ ಉಪಕ್ರಮದ ಪ್ರಮುಖಧ್ಯೇಯವಾಗಿರುತ್ತದೆ. ಈ ಕಾರ್ಯಕ್ರಮಕ್ಕಾಗಿ ಸಮರ್ಪಿತವಾದ ಪೋರ್ಟಲ್ http://goal.tribal.gov.in ರಲ್ಲಿಎಲ್ಲಾ ವಿವರಗಳು ಮತ್ತು ಮಾಹಿತಿಯುದೊರೆಯುವುದು, ಆಸಕ್ತಿಯುಳ್ಳ ಮಾರ್ಗದರ್ಶನ ಪಡೆಯುವವರು (ಬುಡಕಟ್ಟುಯುವಕರು) ಮತ್ತು ಮಾರ್ಗದರ್ಶನ ನೀಡುವವರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸ್ವೀಕರಿಸಲು ಜುಲೈ 14 ಕೊನೆಯ ದಿನ.

ಹೆಚ್ಚಿನ ಮಾಹಿತಿಗಾಗಿ http://goal.tribal.gov.in ಇಲ್ಲಿಗೆಅಥವಾದೂರವಾಣಿ ಸಂಖ್ಯೆ0824-2451269, 0824-2450114 ಸಂಪರ್ಕಿಸಬಹುದು.
ಮಾರ್ಗದರ್ಶಕರಿಗೆ (ಮೆಂಟರ್ಸ್)ಬುಡಕಟ್ಟು ವ್ಯವಹಾರಗಳ ಸಚಿವಾಲಯ ಮತ್ತು ಫೇಸ್‍ಬುಕ್‍ನಿಂದ “ಭಾಗವಹಿಸಿದ ಪ್ರಮಾಣ ಪತ್ರ’’ ನೀಡಲಾಗುವುದು. ಕೈಗಾರಿಕೆ ಸೇರಿದಂತೆ ಆಸಕ್ತ ಪ್ರಮುಖರ ಗುಂಪಿನೊಂದಿಗೆ ಪರಸ್ಪರ ವಿಚಾರ ವಿನಿಮಯಕ್ಕೆಅವಕಾಶ. ಬುಡಕಟ್ಟು ವ್ಯವಹಾರಗಳ ಸಚಿವಾಲಯಅಥವಾ ಫೇಸ್‍ಬುಕ್‍ಏರ್ಪಡಿಸುವರಾಜ್ಯಮಟ್ಟದಕಾರ್ಯಕ್ರಮಕ್ಕೆಆದ್ಯತೆ ಪ್ರವೇಶಾವಕಾಶ ಲಭ್ಯ.ಸಲಹೆಗಾರರಾಗಿರುವ ಬಗ್ಗೆ ವ್ಯಕ್ತಿಗತ ವಿವರಗಳನ್ನು ಗೋಯಲ್‍ನಲ್ಲಿ ಪ್ರಕಟಿಸಲಾಗುತ್ತದೆ.

ಮಾರ್ಗದರ್ಶನ ಪಡೆಯುವವರಿಗೆ (ಮೆಂಟೀಸ್)ಸ್ಮಾರ್ಟ್‍ಫೋನ್ ಮತ್ತುಒಂದು ವರ್ಷದವರೆಗೆಇಂಟರ್‍ನೆಟ್ ಅನುಕೂಲ ನೀಡಲಾಗುತ್ತದೆ.ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವ ಮತ್ತು ಪರಿಣಿತರು ಮತ್ತುಕೈಗಾರಿಕಾ ನಾಯಕರಿಂದ ಸಲಹೆ ಪಡೆಯುವ ಅವಕಾಶ.ಬುಡಕಟ್ಟು ವ್ಯವಹಾರಗಳ ಸಚಿವಾಲಯ ಮತ್ತು ಫೇಸ್‍ಬುಕ್‍ನಿಂದಕಾರ್ಯಕ್ರಮದಲ್ಲಿಭಾಗವಹಿಸಿದ್ದ ಪ್ರಮಾಣಪತ್ರ ನೀಡಲಾಗುತ್ತದೆ.ಪ್ರಸಿದ್ದ ಸಂಸ್ಥೆಯಲ್ಲಿ ಇಂಟರ್ನ್‍ಶಿಪ್ ಲಭ್ಯತೆಯ ಅವಕಾಶ ಸಿಗುತ್ತದೆ ಎಂದುದ.ಕ.ಜಿಲ್ಲಾಸಮಗ್ರಗಿರಿಜನಅಭಿವೃದ್ಧಿಯೋಜನೆಯಯೋಜನಾ ಸಮನ್ವಯಾಧಿಕಾರಿಅವರ ಪ್ರಕಟಣೆ ತಿಳಿಸಿದೆ.

 

ಅಂತರ್‍ಜಾತಿ ವಿವಾಹಕ್ಕೆ ಪ್ರೋತ್ಸಾಹಧನ–ಅರ್ಜಿಆಹ್ವಾನ

ಪರಿಶಿಷ್ಟ ಪಂಗಡದಯುವಕ, ಯುವತಿಯರು ಪರಿಶಿಷ್ಟ ಪಂಗಡ ಸಮುದಾಯದ ಒಳಗೆ ಅಂತರ್‍ಜಾತಿ ವಿವಾಹವಾದಲ್ಲಿ ಪ್ರೋತ್ಸಾಹಧನ ಮಂಜೂರಾತಿಗೆಅರ್ಜಿ ಆಹ್ವಾನಿಸಿದೆ.

ಯುವತಿಗೆ ಕನಿಷ್ಠ 18 ವರ್ಷ, ಗರಿಷ್ಟ 42 ವರ್ಷ, ಯುವಕನಿಗೆ ಕನಿಷ್ಟ 21 ವರ್ಷದಿಂದಗರಿಷ್ಟ 45 ವರ್ಷವಾಗಿರಬೇಕು.ವಾರ್ಷಿಕಆದಾಯರೂ.2 ಲಕ್ಷ ಮೀರಬಾರದು, ಮದುವೆಯಾದಒಂದು ವರ್ಷದ ಅವಧಿಯೊಳಗೆ ಪ್ರೋತ್ಸಾಹಧನಕ್ಕಾಗಿಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲುಉಪನೋಂದಣಾಧಿಕಾರಿಕಚೇರಿಯಲ್ಲಿ ವಿವಾಹ ನೋಂದಣಿ ಪ್ರಮಾಣ ಪತ್ರವನ್ನು ಪಡೆದಿರಬೇಕು. ಪರಿಶಿಷ್ಟ ಪಂಗಡದ ಸಮುದಾಯದ ಒಳಗೆ ಅಂತರ್‍ಜಾತಿ ವಿವಾಹವಾದಯುವಕ ವಾಸ್ತವ್ಯವಿರುವಜಿಲ್ಲೆಯಲ್ಲಿ ಮಾತ್ರ ಅವಕಾಶ. ರಾಜ್ಯ ಮತ್ತುಕೇಂದ್ರ ಸರ್ಕಾರದಅಸ್ಪøಶ್ಯತಾ ನಿವಾರಣಾಕಾರ್ಯಕ್ರಮದಡಿಅಂತರ್‍ಜಾತಿ ವಿವಾಹ ಅಥವಾ ವಿಧವೆಯರ ಮರುವಿವಾಹ ಯೋಜನೆಗಳಡಿ ಪ್ರೋತ್ಸಾಹಧನ ಪಡೆದವರುಅರ್ಹರವಾಗಿರುವುದಿಲ್ಲ.ಅನುಸೂಚಿತ ಬುಡಕಟ್ಟುಗಳ ಪಟ್ಟಿಯಲ್ಲಿಒಂದೇ ಸಂಖ್ಯೆಯಲ್ಲಿ ನಮೂದಿಸಿರುವ ಸಮನಾಂತರ ಜಾತಿಗಳ ಒಳಗೆ ಮದುವೆಯಾದವರುಅರ್ಹರಿರುವುದಿಲ್ಲ. ಅಂತರ್‍ಜಾತಿ ವಿವಾಹವಾದಲ್ಲಿಅಂತಹ ದಂಪತಿಗಳಿಗೆ ರೂ. 2 ಲಕ್ಷ ನೀಡಲಾಗುವುದು.ಪರಿಶಿಷ್ಟ ಪಂಗಡದ ಸಮುದಾಯದಯುವಕ, ಯುವತಿಯರು ಸರಳ ವಿವಾಹ ಕಾರ್ಯಕ್ರಮದಡಿ ವಿವಾಹವಾದಲ್ಲಿಅಂತರ್ಹರರು ಈ ಯೋಜನೆಯಡಿಯಲ್ಲಿ ಸರಳವಿವಾಹದ ರೂ.50 ಸಾವಿರ ಹೊರತುಪಡಿಸಿ ಉಳಿದ ರೂ.1.50ಲಕ್ಷ ಪ್ರೋತ್ಸಾಹಧನವನ್ನು ಪಡೆಯಲುಅರ್ಹರಿರುತ್ತಾರೆ.

ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು: ದಂಪತಿಗಳ ಜಾತಿ ಪ್ರಮಾಣ ಪತ್ರ, ವಾರ್ಷಿಕಆದಾಯ ಪ್ರಮಾಣ ಪತ್ರ, ಆಧಾರ್‍ಕಾರ್ಡ್, ಪಡಿತರಚೀಟಿ, ಜನನ ಪ್ರಮಾಣ ಪತ್ರ, ಎಸ್.ಎಸ್.ಎಲ್.ಸಿ ಅಂಕಪಟ್ಟಿ, ವಿವಾಹ ಆಮಂತ್ರಣ ಪತ್ರಿಕೆ, ವಾಸ್ತವ್ಯದೃಢೀಕರಣ ಪತ್ರ, ಜಂಟಿಖಾತೆ ಬ್ಯಾಂಕ್ ಪುಸ್ತಕ ಸಲ್ಲಿಸಬೇಕು.
ಸುಳ್ಳು ಮಾಹಿತಿ ಹಾಗೂ ನಕಲಿ ದಾಖಲೆಗಳನ್ನು ಸಲ್ಲಿಸಿದಲ್ಲಿಮಂಜೂರಾದ ಹಣವನ್ನು ಸರ್ಕಾರ ವಾಪಾಸ್‍ಕಟ್ಟುವ ಬಗ್ಗೆ ಮತ್ತು ಶಿಕ್ಷೆಗೆ ಒಳಪಡಲು ಸಿದ್ದರಿರುವ ಬಗ್ಗೆ ಪ್ರಮಾಣ ಪತ್ರರೂ. 20 ಛಾಪಾಕಾಗದದಲ್ಲಿ ಬರೆದು ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಬಂಟ್ವಾಳ ಸಮಾಜಕಲ್ಯಾಣ ಇಲಾಖೆ ಕಚೇರಿದೂರವಾಣಿ ಸಂಖ್ಯೆ; 08255-230986 ಸಂಪರ್ಕಿಸುವಂತೆಬಂಟ್ವಾಳ ಸಮಾಜಕಲ್ಯಾಣಇಲಾಖೆಯಸಹಾಯಕ ನಿರ್ದೇಶಕರು(ಗ್ರೇಡ್-1)ರಪ್ರಕಟಣೆ ತಿಳಿಸಿದೆ.

 

ಆಯುμÁ್ಮನ್ ಭಾರತ್‍ಕಾರ್ಡ್‍ನಲ್ಲಿಕೋವಿಡ್‍ಚಿಕಿತ್ಸೆ ಸೇರ್ಪಡೆ

ಆಯುμÁ್ಮನ್ ಭಾರತ್‍ಆರೋಗ್ಯಕರ್ನಾಟಕಯೋಜನೆಯು ಸರ್ವರಿಗೂಆರೋಗ್ಯ ಸೇವೆ ಒದಗಿಸುವ ಸಂಯೋಜಿತಯೋಜನೆಯಾಗಿದ್ದು, ಈ ಯೋಜನೆಯಲ್ಲಿ ಕೋವಿಡ್-19 ಚಿಕಿತ್ಸೆಯೂ ಸಹ ಸೇರ್ಪಡೆಯಾಗಿದೆ.

ದಕ್ಷಿಣಕನ್ನಡಜಿಲ್ಲೆಯಲ್ಲಿಒಟ್ಟು 240 ಸಾಮಾನ್ಯ ಸೇವಾ ಕೇಂದ್ರಗಳಿದ್ದು, ಸಾರ್ವಜನಿಕರುತಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳಿಗೆ ತೆರಳಿ ಆಯುμÁ್ಮನ್ ಭಾರತ್‍ಕಾರ್ಡನ್ನು ಮಾಡಿಸಿಕೊಳ್ಳಬಹುದಾಗಿದೆ. ಕಾರ್ಡನ್ನು ಮಾಡಿಸುವ ಸಂದರ್ಭದಲ್ಲಿ ಮಾಸ್ಕ್ ಮತ್ತು ಸಾಮಾಜಿಕಅಂತರಕಾಪಾಡುವುದುಅವಶ್ಯವಾಗಿರುತ್ತದೆ.

ಬಿ.ಪಿ.ಎಲ್. ಕಾರ್ಡ್ ಹೊಂದಿದ ಫಲಾನುಭವಿಗಳಿಗೆ ವರ್ಷಕ್ಕೆರೂ.5 ಲಕ್ಷದ ವರೆಗೆಉಚಿತಚಿಕಿತ್ಸೆ ನೀಡಲಾಗುವುದು.ಎ.ಪಿ.ಎಲ್. ಕಾರ್ಡ್ ಹೊಂದಿದ ಫಲಾನುಭವಿಗಳಿಗೆ ಪಾವತಿಆಧಾರದ ಮೇಲೆ ಸರ್ಕಾರಿ ಪ್ಯಾಕೇಜ್‍ದರದ ಶೇ.30% ರಷ್ಟುಚಿಕಿತ್ಸಾ ವೆಚ್ಚ ಲಭ್ಯವಿದ್ದು, ವಾರ್ಷಿಕ ಮಿತಿ ಪ್ರತಿಕುಟುಂಬಕ್ಕೆರೂ.1.50 ಲಕ್ಷ.ಪಡಿತರಚೀಟಿ ಮತ್ತುಆಧಾರ್‍ಕಾರ್ಡ್ ಹಾಜರುಪಡಿಸಿ ಸಹ ಚಿಕಿತ್ಸೆ ಪಡೆದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸರಕಾರಿಆಸ್ಪತ್ರೆ, ತಾಲೂಕು ಮತ್ತುಜಿಲ್ಲಾಆಸ್ಪತ್ರೆ, ಸರ್ಕಾರಿ ವೈದ್ಯಕೀಯಕಾಲೇಜು ಆಸ್ಪತ್ರೆಗಳಲ್ಲಿನ ಆರೋಗ್ಯ ಮಿತ್ರರು, ಆರೋಗ್ಯ ಸಹಾಯವಾಣಿ 104 ಸಂಪರ್ಕಿಸಬಹುದುಎಂದುದ.ಕ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

 

ಚಾರ್ಮಾಡಿ ಘಾಟ್:ರಾತ್ರಿವಾಹನ ಸಂಚಾರ ನಿರ್ಬಂಧ

ದಕ್ಷಿಣಕನ್ನಡಜಿಲ್ಲೆ ವ್ಯಾಪ್ತಿಗೆ ಒಳಪಟ್ಟ ರಾಷ್ಟ್ರೀಯ ಹೆದ್ದಾರಿ-73 (ಹಳೆ ರಾ.ಹೆ.234) ಮಂಗಳೂರು-ವಿಲ್ಲುಪುರಂರಸ್ತೆಯ ಕಿ.ಮೀ 76 ರಿಂದ 86 ವರೆಗಿನಚಾರ್ಮಾಡಿಘಾಟ್ ಭಾಗದಲ್ಲಿ ಮಣ್ಣು ಹಸಿಯಾಗಿ ಕುಸಿಯುವ ಸಾಧ್ಯತೆಇದ್ದುರಸ್ತೆಯ ಪಕ್ಕದಲ್ಲಿ ತಡೆಗೋಡೆಗಳು ಇಲ್ಲದೆ, ಮಂಜುಕವಿದುಚಾಲಕರಿಗೆದಾರಿಕಾಣದೆ ಅಪಘಾತಗಳಾಗುವ ಸಾಧ್ಯತೆ ಹೆಚ್ಚಾಗಿರುವಕಾರಣದಿಂದಚಾರ್ಮಾಡಿಘಾಟಿನಲ್ಲಿ ವಾಹನಗಳ ನಿರ್ಬಂಧವು ಅನಿವಾರ್ಯವಾಗಿರುತ್ತದೆ. ಆದುದರಿಂದಜುಲೈ 9 ರಿಂದ ಪ್ರತಿ ದಿನ ಸಂಜೆ 7 ಗಂಟೆಯಿಂದ ಸಂಜೆ 7 ಗಂಟೆವರೆಗೆ ನಿರ್ಬಂಧಿಸಿ ಮುಂದಿನ ಆದೇಶದವರೆಗೆನಿಷೇಧಾಜ್ಞೆಜಾರಿಗೊಳಿಸಿ ದಕ್ಷಿಣಕನ್ನಡಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಆದೇಶಿಸಿರುತ್ತಾರೆ.

ಈ ಆದೇಶವು ಮುಂದಿನ ಆದೇಶದವರೆಗೆಜಾರಿಯಲ್ಲಿರುತ್ತದೆ. ಅಲ್ಲದೆತುರ್ತುಆರೋಗ್ಯ ಪರಿಸ್ಥಿತಿಯಲ್ಲಿ ಸದ್ರಿ ಮಾರ್ಗದಲ್ಲಿ ಆ್ಯಂಬುಲೆನ್ಸ್‍ಗಳಿಗೆ ಮಾತ್ರ ಈ ಆದೇಶದಿಂದ ವಿನಾಯಿತಿ ನೀಡಲಾಗಿದೆ.

 

ಕ್ರೀಡಾ ವಿದ್ಯಾರ್ಥಿ ವೇತನ -ಅರ್ಜಿಆಹ್ವಾನ

ರಾಜ್ಯ ಸರಕಾರದಕ್ರೀಡಾ ವಿದ್ಯಾರ್ಥಿ ವೇತನಯೋಜನೆಯಡಿ ಪ್ರತಿಭಾವಂತ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ 8 ರಿಂದ 10ನೇ ತರಗತಿಓದುತ್ತಿರುವ ವಿದ್ಯಾರ್ಥಿ ಕ್ರೀಡಾಪಟುಗಳಿಗೆ 2020ನೇ ಸಾಲಿನ ಪ್ರೋತ್ಸಾಹಿತಕ್ರೀಡಾ ವಿದ್ಯಾರ್ಥಿ ವೇತನಕ್ಕಾಗಿ ಸೇವಾ ಸಿಂಧುಮೂಲಕ ಆನ್‍ಲೈನ್‍ನಲ್ಲಿಅರ್ಜಿಆಹ್ವಾನಿಸಲಾಗಿದೆ. ರಾಜ್ಯ ಮಟ್ಟದಕ್ರೀಡೆಯಲ್ಲಿಚಿನ್ನದ ಪದಕ/ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ಅರ್ಜಿ ಸಲ್ಲಿಸಲುಅರ್ಹರಾಗಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿಉಪನಿರ್ದೇಶಕರಕಚೇರಿ, ಯುವ ಸಬಲೀಕರಣ ಮತ್ತುಕ್ರೀಡಾ ಇಲಾಖೆ,ಮಂಗಳ ಕ್ರೀಡಾಂಗಣ, ಮಂಗಳೂರುದೂರವಾಣಿ ಸಂಖ್ಯೆ 0824-2451264ನ್ನು ಸಂರ್ಪಕಿಸಲುಯುವ ಸಬಲೀಕರಣ ಮತ್ತುಕ್ರೀಡಾ ಇಲಾಖೆಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

 

ತೆಂಗು/ಅಡಿಕೆ ಫಸಲು – ಇ-ಹರಾಜು

2020-21ನೇ ಸಾಲಿನಲ್ಲಿದಕ್ಷಿಣಕನ್ನಡಜಿಲ್ಲೆಯಮದ್ದಡ್ಕ, ತುಂಬೆ, ಹೊಸಗದ್ದೆತೋಟಗಾರಿಕೆ ಕ್ಷೇತ್ರಗಳಲ್ಲಿನ ತೆಂಗು/ಅಡಿಕೆ ಫಸಲಿನ ಇ-ಹರಾಜು ಮೂಲಕ ವಿಲೇವಾರಿ ಮಾಡಲಾಗುತ್ತದೆ.

ಇ-ಹರಾಜುಜುಲೈ8 ರಂದುಸಂಜೆ 4.30 ಗಂಟೆಗೆ ಪ್ರಾರಂಭವಾಗಲಿದ್ದು,ಆಗಸ್ಟ್ 13 ರಂದುಸಂಜೆ 4 ಗಂಟೆಗೆ ಮುಕ್ತಾಯಗೊಳ್ಳಲಿದೆ. (ಇ-ಹರಾಜು ಪ್ರಕಟಣೆ ಸಂ.ಕೆ.ಎಸ್.ಹೆಚ್.ಡಿ.:/ಹರಾಜು/2020-21/2566/2567/2568/2569/).

ಆಸಕ್ತರುಹರಾಜಿನಲ್ಲಿ ಭಾಗವಹಿಸಬಹುದು.ವಿಲೇವಾರಿ ಷರತ್ತುಗಳು ಹಾಗೂ ಹೆಚ್ಚಿನ ವಿವರಗಳನ್ನುe.ಠಿಡಿoಛಿuಡಿemeಟಿಣ.ಞಚಿಡಿ.iಟಿರಲ್ಲಿ ಪಡೆಯಬಹುದುಎಂದು ಮಂಗಳೂರು ಹಿರಿಯ ಸಹಾಯಕತೋಟಗಾರಿಕೆ ನಿರ್ದೇಶಕರ(ರಾಜ್ಯವಲಯ) ಪ್ರಕಟಣೆ ತಿಳಿಸಿದೆ.

 

ಬೆಳ್ತಂಗಡಿ ತಾಲೂಕು–ಅಂಗನವಾಡಿಕಾರ್ಯಕರ್ತೆ/ಸಹಾಯಕಿ ಹುದ್ದೆಗೆಅರ್ಜಿಆಹ್ವಾನ

ಬೆಳ್ತಂಗಡಿ ತಾಲೂಕು ಶಿಶು ಅಭಿವೃದ್ಧಿಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ 2 ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರ ಹುದ್ದೆಗಳಿಗೆ ಮತ್ತು8 ಅಂಗನವಾಡಿ ಕೇಂದ್ರಗಳ ಸಹಾಯಕಿಯರ ಹುದ್ದೆಗೆಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ವೆಬ್‍ಸೈಟ್‍ http://www.anganwadirecruit.kar.nic.in ನಲ್ಲಿಅರ್ಜಿಆಹ್ವಾನಿಸಲಾಗಿದೆ.

ಕಾರ್ಯಕರ್ತೆ ಹುದ್ದೆ ಖಾಲಿಯಿರುವಅಂಗನವಾಡಿಕೇಂದ್ರದ ವಿವರಇಂತಿವೆ:-ಗುರುವಾಯನಕೆರೆಹಾಗೂ ಮುಂಡಾಜೆಗ್ರಾಮದಕೊಟ್ರೊಟ್ಟುಅಂಗನವಾಡಿಕೇಂದ್ರ.
ಸಹಾಯಕಿ ಹುದ್ದೆ ಖಾಲಿಯಿರುವಅಂಗನವಾಡಿ ಕೇಂದ್ರಗಳ ವಿವರಇಂತಿವೆ:- ಕೊಯ್ಯೂರುಗ್ರಾಮದ ಮಲೆಬೆಟ್ಟು, ಕಳೆಂಜೆ ಗ್ರಾಮದ ಶಿಬರಾಜೆ, ಧರ್ಮಸ್ಥಳ ಗ್ರಾಮದ ಮುಂಡ್ರುಪ್ಪಾಡಿ, ಕೊಕ್ಕಡಗ್ರಾಮದ ಹಳ್ಳಿಂಗೇರಿ, ತೆಂಕಕಾರಂದೂರುಗ್ರಾಮದ ಕಾಪಿನಡ್ಕ, ಇಳಂತಿಲ ಗ್ರಾಮದ ಬನ್ನೆಂಗಳ, ಉಜಿರೆಗ್ರಾಮದಕಕ್ಕೇಜಾಲು, ನಾವರಗ್ರಾಮದ ನಾವರಅಂಗನವಾಡಿಕೇಂದ,್ರ
ಅರ್ಜಿ ಸಲ್ಲಿಸಲುಜುಲೈ 30 ಕೊನೆಯ ದಿನ. ಹೆಚ್ಚಿನ ವಿವರಗಳಿಗಾಗಿ ಶಿಶು ಅಭಿವೃದ್ಧಿಯೋಜನಾಕಚೇರಿ, ಬೆಳ್ತಂಗಡಿ,ದೂರವಾಣಿ ಸಂಖ್ಯೆ 08256-232134 ಸಂಪರ್ಕಿಸಲು ಬೆಳ್ತಂಗಡಿ ಶಿಶು ಅಭಿವೃದ್ಧಿಯೋಜನಾಧಿಕಾರಿಅವರ ಪ್ರಕಟಣೆ ತಿಳಿಸಿದೆ.

 

ಸವಿತಾ ಸಮಾಜ:ಉದ್ಯೋಗ ಸಾಲ ಯೋಜನೆಗೆಅರ್ಜಿಆಹ್ವಾನ

2020-21ನೇ ಸಾಲಿನಲ್ಲಿ ಸವಿತಾ ಸಮಾಜಕ್ಕೆ ಸೇರಿದ ಪರಿಯಾಳ, ಅಂಬಟ್ಟನ್, ಬಜಂತ್ರಿ, ಬಂಡಾರಿ, ಚೌರಿಯ, ಹಡಪದ, ಕವುಟಿಯನ್, ಕೆಲಸಿ, ಕ್ಷೌರಿಕ, ಕ್ಷೌರದ್, ಮಹಾಲೆ, ಮಂಗಳ, ಮೇಲಗಾರ, ನಾಡಿಗ, ನಾಪಿತ, ನವಲಿಗ್, ನಾವಿ, ನಯನಜಕ್ಷತ್ರಿಯ, ನ್ಹಾವಿ, ವಾಜಾಂತ್ರಿ, ಸವಿತ, ನಯನಜಕ್ಷತ್ರಿ, ನಾಡಿಗ್, ಕ್ಷೌರಿಕ್, ಕ್ಷೌರಿಕಜನರಆರ್ಥಿಕಅಭಿವೃದ್ಧಿಗಾಗಿಸಾಂಪ್ರದಾಯಿಕ ವೃತ್ತಿದಾರರ ಸಾಲ ಯೋಜನೆ ಮತ್ತುಸ್ವಯಂಉದ್ಯೋಗ ಸಾಲ ಯೋಜನೆಯಲ್ಲಿಸಾಲ ಮತ್ತು ಸಹಾಯಧನದ ಸೌಲಭ್ಯ ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಈ ಮೇಲ್ಕಂಡ ಯೋಜನೆಗಳಲ್ಲಿ ಸೌಲಭ್ಯ ಪಡೆಯಲುಇಚ್ಛಿಸುವವರುಅರ್ಜಿ ನಮೂನೆಯನ್ನುಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಜಿಲ್ಲಾಕಛೇರಿಯಲ್ಲಿಅಥವಾ ನಿಗಮದ ವೆಬ್‍ಸೈಟ್‍ನಲ್ಲಿ ಪಡೆದುಅರ್ಜಿಯೊಂದಿಗೆಜಾತಿಆದಾಯ ಪ್ರಮಾಣ ಪತ್ರ, ಆಧಾರ್‍ಕಾರ್ಡ್ ಮತ್ತು ಫೋಟೋ ಮತ್ತುಇತರೆ ದಾಖಲಾತಿಗಳನ್ನು ನಿಗಮದ ವೆಬ್‍ಸೈಟ್‍ http://www.dbcdc.karnataka.gov.in ಮೂಲಕ ಆನ್‍ಲೈನ್‍ನಲ್ಲಿಅಥವಾಆನ್‍ಲೈನ್‍ನಲ್ಲಿಅರ್ಜಿ ಸಲ್ಲಿಸಲು ಸಾಧ್ಯವಾಗದೇಇದ್ದಲ್ಲಿ ಭರ್ತಿ ಮಾಡಿದಅರ್ಜಿಯನ್ನು ದಾಖಲಾತಿಗಳೊಡನೆ ಡಿ.ದೇವರಾಜಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಜಿಲ್ಲಾಕಚೇರಿ, ರೇಡಿಯೋ ಪಾರ್ಕ್ ಬಳಿ, ಉರ್ವಸ್ಟೋರ್, ಮಂಗಳೂರು ಕಚೇರಿಗೆಆಗಸ್ಟ್ 3 ರೊಳಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗೆ ನಿಗಮದಜಿಲ್ಲಾಕಚೇರಿಯನ್ನುಅಥವಾ ನಿಗಮದ ಮೇಲ್ಕಂಡ ವೆಬ್‍ಸೈಟ್‍ನಲ್ಲಿ ಸಂಪರ್ಕಿಸುವಂತೆಜಿಲ್ಲಾ ವ್ಯವಸ್ಥಾಪಕರ ಪ್ರಕಟಣೆತಿಳಿಸಿದೆ.

 

ಮಡಿವಾಳ ಸಮಾಜ: ವಿವಿಧ ಯೋಜನೆಗಳಿಗೆ ಅರ್ಜಿಆಹ್ವಾನ

2020-21ನೇ ಸಾಲಿನಲ್ಲಿ ಮಡಿವಾಳ ಸಮಾಜಕ್ಕೆ ಸೇರಿದ ಅಗಸ, ಚಕಲ, ಧೋಬಿ, ಮಡಿವಾಳ, ಮನ್ನನ್, ಪರಿತ್, ರಾಜಕ, ಸಕಲ, ವನ್ನನ್, ವೆಲ್ಲುತೇಡನ್, ಸಾಕಲವಾಡುಜನರಆರ್ಥಿಕಅಭಿವೃದ್ಧಿಗಾಗಿ 1.ಸಾಂಪ್ರದಾಯಿಕ ವೃತ್ತಿದಾರರ ಸಾಲ ಯೋಜನೆ, 2.ಸ್ವಯಂ ಉದ್ಯೋಗ ಸಾಲ ಯೋಜನೆ, 3.ಸ್ವ ಸಹಾಯ ಗುಂಪುಗಳ ಮೂಲಕ ಸಾಲ ಮತ್ತು ಸಹಾಯಧನ, 4.ಅರಿವು ಶೈಕ್ಷಣಿಕ ಸಾಲ ಯೋಜನೆ ಮತ್ತು 5.ಗಂಗಾ ಕಲ್ಯಾಣ ನೀರಾವರಿ ಯೋಜನೆಗಳಲ್ಲಿ ಸಾಲ ಮತ್ತು ಸಹಾಯಧನದ ಸೌಲಭ್ಯ ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಈ ಯೋಜನೆಗಳಲ್ಲಿ ಸೌಲಭ್ಯ ಪಡೆಯಲುಇಚ್ಛಿಸುವ ಮೇಲ್ಕಂಡ ಸಮಾಜದವರುಉಚಿತವಾಗಿಅರ್ಜಿ ನಮೂನೆಯನ್ನುಜಿಲ್ಲಾಕಚೇರಿಯಲ್ಲಿಅಥವಾ ನಿಗಮದ ವೆಬ್‍ಸೈಟ್‍ನಲ್ಲಿ ಪಡೆದುಅರ್ಜಿಯೊಂದಿಗೆಜಾತಿಆದಾಯ ಪ್ರಮಾಣ ಪತ್ರ, ಆಧಾರ್‍ಕಾರ್ಡ್ ಮತ್ತು ಫೋಟೋವನ್ನು ಮತ್ತು ವಿದ್ಯಾರ್ಥಿಗಳ ವ್ಯಾಸಂಗದ ದಾಖಲಾತಿಗಳು, ಗಂಗಾ ಕಲ್ಯಾಣ ನೀರಾವರಿಯೋಜನೆಯಲ್ಲಿ ಸೌಲಭ್ಯ ಪಡೆಯಲುಅರ್ಜಿದಾರರು ಹೊಂದಿರುಜಮೀನಿನ ದಾಖಲಾತಿಗಳು ಮತ್ತು ಸಣ್ಣರೈತರ ಪ್ರಮಾಣ ಪತ್ರಗಳನ್ನು ನಿಗಮದ ವೆಬ್‍ಸೈಟ್‍ http://www.dbcdc.karnataka.gov.in ಮೂಲಕ ಆನ್‍ಲೈನ್‍ನಲ್ಲಿಅಥವಾಆನ್‍ಲೈನ್‍ನಲ್ಲಿಅರ್ಜಿ ಸಲ್ಲಿಸಲು ಸಾಧ್ಯವಾಗದೇಇದ್ದಲ್ಲಿ ಭರ್ತಿ ಮಾಡಿದಅರ್ಜಿಯನ್ನು ದಾಖಲಾತಿಗಳೊಡನೆ ಜಿಲ್ಲೆಯಡಿ.ದೇವರಾಜಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಜಿಲ್ಲಾಕಚೇರಿ, ರೇಡಿಯೋ ಪಾರ್ಕ್ ಬಳಿ, ಉರ್ವಸ್ಟೋರ್, ಮಂಗಳೂರು ಕಚೇರಿಗೆಆಗಸ್ಟ್ 3 ರೊಳಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗೆ ನಿಗಮದಜಿಲ್ಲಾಕಛೇರಿಯನ್ನುಅಥವಾ ನಿಗಮದ ಮೇಲ್ಕಂಡ ವೆಬ್‍ಸೈಟ್‍ನಲ್ಲಿ ಸಂಪರ್ಕಿಸುವಂತೆಜಿಲ್ಲಾ ವ್ಯವಸ್ಥಾಪಕರ ಪ್ರಕಟಣೆತಿಳಿಸಿದೆ.

 

ಭತ್ತದ ಬೆಳೆಗೆ ಪ್ರಧಾನಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆ(ಮುಂಗಾರು) (PMFBY)

• ಅಧಿಸೂಚಿತ ಬೆಳೆ – ಭತ್ತ (ಮಳೆ ಆಶ್ರಿತ)
• ನೋಂದಣಿಗೆಕೊನೆಯ ದಿನಾಂಕ – 14ನೇ ಅಗಸ್ಟ್ 2020
• ರೈತರವಂತಿಕೆÀ– ರೂ.440/- ಪ್ರತಿಎಕರೆಗೆಅಥವಾ ರೂ.1100/- ಪ್ರತಿ ಹೆಕ್ಟೇರಿಗೆ
• ಬೇಕಾಗುವ ದಾಖಲಾತಿಗಳು:- 1) ಅರ್ಜಿ
2) ಪಹಣಿ, ಖಾತೆ, ಪಾಸ್‍ಪುಸ್ತಕ, ಕಂದಾಯ ರಶೀದಿ, ಆಧಾರ್
• ಹೊಸ ಮಾರ್ಗಸೂಚಿಯನ್ವಯ ಈ ಬಾರಿ ಸಾಲ ಪಡೆದರೈತರಿಗೆ ಬೆಳೆ ವಿಮೆಯಡಿ ಒಳಪಡುವುದು ಐಚ್ಛಿಕವಾಗಿರುತ್ತದೆ. ಆಸಕ್ತಿ ಇಲ್ಲದರೈತರು ಬ್ಯಾಂಕ್‍ಗಳಲ್ಲಿ ನಿರಾಕರಣಾ ಪತ್ರವನ್ನು ನೀಡಿ ನೋಂದಣಿಯಿಂದ ಹೊರ ಉಳಿಯಬಹುದು.(ನಿರಾಕರಣಾ ಪತ್ರವನ್ನು ನೊಂದಣಿಯಕೊನೆಯ ದಿನಾಂಕಕ್ಕಿಂತ ಏಳು ದಿನ ಮುಂಚಿತವಾಗಿ ನೀಡಬೇಕು)

• ಅಧಿಸೂಚಿತ ಘಟಕಗಳು:-

1) ಬೆಳೆ ಕಟಾವು ಪ್ರಯೋಗಗಳ ಆಧಾರದ ಮೇಲೆ ಇಳುವರಿ ಮಾಹಿತಿಯನ್ನು ಪರಿಗಣಿಸಿ ಬೆಳೆ ನಷ್ಟ ನಿರ್ಧಾರಒಟ್ಟಾರೆ ಪ್ರದೇಶಕ್ಕೆ ಮಾಡಲಾಗುವುದು.
2) ಬಿತ್ತನೆ ವಿಫಲಗೊಂಡಲ್ಲಿ– ಮಳೆಯ ಅಭಾವ/ಪ್ರತಿಕೂಲ ಹವಾಮಾನ ಶೇ.75ಕ್ಕಿಂತ ಹೆಚ್ಚಿನಕ್ಷೇತ್ರ ವಿಫಲಗೊಂಡಲ್ಲಿ ಶೇ.25ರಷ್ಟು ಪರಿಹಾರ– ವರದಿ ಮಾಡಿಕೊಳ್ಳಲು ಕೊನೆಯ ದಿ:22-8-2020
3) ಮಧ್ಯಂತರ ವಿಕೋಪಗಳಾದ –ಆಲಿಕಲ್ಲು ಮಳೆ, ಭೂಕುಸಿತ, ಬೆಳೆ ಮುಳುಗಡೆ, ಬೆಂಕಿ ಅವಘಡಗಳಿಗೆ ವೈಯಕ್ತಿಕವಾಗಿ ನಿರ್ಧಾರ, 72 ಗಂಟೆಯೊಳಗೆ ವಿಮಾ ಸಂಸ್ಥೆಗೆ ಮಾಹಿತಿ ನೀಡಬೇಕಾಗಿರುತ್ತದೆ.
4) ಬಿತ್ತನೆಯಾದ ನಂತರಕಟಾವಿಗೆ ಮೊದಲು ಸಾಮಾನ್ಯ ಇಳುವರಿಗಿಂತ ಶೇ.50ಕ್ಕಿಂತ ಹೆಚ್ಚಿನ ಬೆಳೆ ಹವಾಮಾನ ವೈಪರೀತ್ಯದಿಂದ ನಷ್ಟ ಸಂಭವಿಸಿದಲ್ಲಿ ಶೇ.25 ಮುಂಚಿತವಾಗಿ ಪರಿಹಾರ.
5) ಬೆಳೆ ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲಿಒಣಗಲು ಬಿಟ್ಟಂತಹ ಸಂದರ್ಭದಲ್ಲಿ–ಕಟಾವು ಮಾಡಿದ 14ದಿನಗಳ ಒಳಗೆ ಮಳೆ ಮತ್ತುಆಲಿಕಲ್ಲು ಮಳೆಯಿಂದ ನಷ್ಟ, 72 ಗಂಟೆಯೊಳಗೆ ವಿಮಾ ಸಂಸ್ಥೆಗೆ ಮಾಹಿತಿ ನೀಡಬೇಕಾಗಿರುತ್ತದೆ.

ಹೆಚ್ಚಿನ ವಿವರಗಳಿಗೆ ಹೋಬಳಿ ರೈತ ಸಂಪರ್ಕಕೇಂದ್ರ/ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರಕಛೇರಿಯನ್ನು ಸಂಪರ್ಕಿಸಲುಕೋರಿದೆ.

1. ಸಹಾಯಕ ಕೃಷಿ ನಿರ್ದೇಶಕರು, ಮಂಗಳೂರು 8277931071
2. ಸಹಾಯಕ ಕೃಷಿ ನಿರ್ದೇಶಕರು, ಬಂಟ್ವಾಳ 8277931072
3. ಸಹಾಯಕ ಕೃಷಿ ನಿರ್ದೇಶಕರು, ಬೆಳ್ತಂಗಡಿ 8277931066
4. ಸಹಾಯಕ ಕೃಷಿ ನಿರ್ದೇಶಕರು, ಪುತ್ತೂರು 8277931079
5. ಸಹಾಯಕ ಕೃಷಿ ನಿರ್ದೇಶಕರು, ಸುಳ್ಯ 8277931079
6. USGIC ವಿಮಾ ಸಂಸ್ಥೆ, ಸಂಜಯ ವತ್ಸ 7400446265
ಸಂಕೇತ್  7353814580

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...