ದುಬೈ(www.vknews.in): ಬಾಲಿವುಡ್ ದಂತಕಥೆ ಅಮಿತಾಬ್ ಬಚ್ಚನ್ ಮತ್ತು ನಟ ಮಗ ಅಭಿಷೇಕ್ ಬಚ್ಚನ್ ಅವರು ಕೊವಿಡ್ ದೃಢಪಟ್ಟ ಒಂದು ದಿನದ ನಂತರ ಕೊವಿಡ್ ಪರೀಕ್ಷೆ ನಡೆಸಿದ ಐಶ್ವರ್ಯಾ ರೈ ಬಚ್ಚನ್ ಮತ್ತು ಮಗಳು ಆರಾಧ್ಯ ಬಚ್ಚನ್ ಅವರು ಕರೋನವೈರಸ್ ಪಾಸಿಟಿವ್ ಎಂದು ವರದಿಯಾಗಿದೆ.
ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೊಪೆ ಈ ಸುದ್ದಿಯನ್ನು ಟ್ವಿಟರ್ನಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿದ ಅವರು ‘ಶ್ರೀಮತಿ ಐಶ್ವರ್ಯಾ ರೈ ಬಚ್ಚನ್ ಮತ್ತು ಮಗಳು ಆರಾಧ್ಯ ಅಭಿಷೇಕ್ ಬಚ್ಚನ್ ಸಹ ಕೋವಿಡ್ 19 ಪೊಸಿಟಿವ್ ಎಂದು ದೃಢಪಟ್ಟಿದೆ. ಶ್ರೀಮತಿ. ಜಯ ಬಚ್ಚನ್ ಜಿ ಅವರಿಗೆ ಕೋವಿಡ್ ನೆಗೆಟಿವ್ ವರದಿ ಬಂದಿದ್ದು, ಬಚ್ಚನ್ ಕುಟುಂಬವು ಶೀಘ್ರವಾಗಿ ಆರೋಗ್ಯವಾಗಲಿ ಚೇತರಿಸಿಕೊಳ್ಳಲಿ ಎಂದು ನಾವು ಆಶಿಸುತ್ತೇವೆ. ”ಎಂದಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.