(www.vknews.com) : ಭಾರತದ ಹೆಮ್ಮೆಯ ಕಂಪನಿಯಾದ ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಮೊದಲ ಆನ್ಲೈನ್ ವರ್ಚುವಲ್ ವಾರ್ಷಿಕ ಸಾಮಾನ್ಯ ಸಭೆ ( ಆನ್ಯುವಲ್ ಜನರಲ್ ಮೀಟಿಂಗ್- ಎಜಿಎಂ) ಅನ್ನು ಬುಧವಾರ ನಡೆಸಲಿದೆ ಮತ್ತು ಇದು ಹೊಚ್ಚಹೊಸ ವರ್ಚುವಲ್ ಪ್ಲಾಟ್ಫಾರ್ಮ್ನೊಂದಿಗೆ ದೊಡ್ಡ ಮಟ್ಟದಲ್ಲಿ ನಡೆಯಲಿದ್ದ, ವಿವಿಧ ದೇಶಗಳ 500 ಸ್ಥಳಗಳಿಂದ 1 ಲಕ್ಷಕ್ಕೂ ಹೆಚ್ಚು ಷೇರುದಾರರು ಏಕಕಾಲದಲ್ಲಿ ಲಾಗ್ ಮಾಡಬಹುದಾದ ದೊಡ್ಡ ವರ್ಚುವಲ್ ಸಭೆ ಇದಾಗಲಿದೆ.
ತನ್ನ ಷೇರುದಾರರ ವರ್ಚುವಲ್ ಸಭೆಗೆ ಆನ್ಬೋರ್ಡ್ ಆಗುಲು ಯಾವುದೇ ತೊಂದರೆಯನ್ನು ಅನುಭವಿಸಬಾರದು ಎಂದು ಚಾಟ್ಬಾಟ್ ಶುರು ಮಾಡಿದೆ. ಸಭೆಗೆ ಲಾಗಿನ್ ಆಗುವ, ಪ್ರಶ್ನೆಗಳನ್ನು ಕೇಳುವ ಮತ್ತು ನಿರ್ಣಯದ ಮೇಲೆ ಮತದಾನ ಮಾಡುವ ಸೂಕ್ಷ್ಮ ವ್ಯತ್ಯಾಸವನ್ನು ತಿಳಿಯುವುದಕ್ಕಾಗಿ ಆರ್ ಐಎಲ್ ವಾಟ್ಸಾಪ್ ಸಂಖ್ಯೆ + 91-79771-11111 ಮೂಲಕ ಮಾಹಿತಿ ಚಾಟ್ಬಾಟ್ ಗೆ ಚಾಲನೆಯನ್ನು ನೀಡಿದೆ.
ಎಜಿಎಂ ಬಗ್ಗೆ ಷೇರುದಾರರು, ನಿರೀಕ್ಷಿತ ಹೂಡಿಕೆದಾರರು, ಮಾಧ್ಯಮಗಳು ಮತ್ತು ಸಾರ್ವಜನಿಕರು ಕೇಳುವ ಪ್ರಶ್ನೆಗಳಿಗೆ ನಿಖರವಾಗಿ ಉತ್ತರಿಸಲು ಮತ್ತು ಮಾಹಿತಿಯೊಂದಿಗೆ ಮಾರ್ಗದರ್ಶನ ನೀಡಲು ಚಾಟ್ಬಾಟ್ ಸಜ್ಜುಗೊಂಡಿದೆ. ಚಾಟ್ಬಾಟ್ 24×7 ಹೆಲ್ಪ್ಡೆಸ್ಕ್ ಆಗಿ ಕಾರ್ಯನಿರ್ವಹಿಸುತ್ತದೆ, ಆದರೆ ಇದು ಸಂವಾದಾತ್ಮಕ ಪಠ್ಯ ಮತ್ತು ವೀಡಿಯೊ ಮೂಲಕ 50,000 ಕ್ವೆರಿಸ್ ಗಳನ್ನು ಏಕಕಾಲದಲ್ಲಿ ನಿಭಾಯಿಸಬಲ್ಲದು ಎಂದು ಕಂಪನಿ ತಿಳಿಸಿದೆ.
ಜುಲೈ 15 ರಂದು ನಡೆಯಲಿರುವ ವಾರ್ಷಿಕ ಸಾಮಾನ್ಯ ಸಭೆ ಎಜಿಎಂ ನೈಜ-ಸಮಯದ ಆಧಾರದ ಮೇಲೆ ಟೂವೇ ಲೈವ್ ಸ್ಟ್ರೀಮಿಂಗ್ ನೀಡಲಿದ್ದು ಮತ್ತು ಹೊಚ್ಚ ಹೊಸ ವರ್ಚುವಲ್ ಪ್ಲಾಟ್ಫಾರ್ಮ್ ಇದರೊಂದಿಗೆ ಸೇರಿದೆ, ಇದು ಭಾರತ ಮತ್ತು ವಿದೇಶಗಳಿಂದ 500 ಸ್ಥಳಗಳ 1 ಲಕ್ಷಕ್ಕೂ ಹೆಚ್ಚು ಷೇರುದಾರರಿಗೆ ಏಕಕಾಲದಲ್ಲಿ ಲಾಗ್ ಇನ್ ಮಾಡಲು ಅನುವು ಮಾಡಿಕೊಡುತ್ತದೆ.
ಭಾರತದಲ್ಲಿ ಈಕ್ವಿಟಿ ಸಂಸ್ಕೃತಿಯನ್ನು ಪ್ರಾರಂಭಿಸಿದ ಕೀರ್ತಿಗೆ ಪಾತ್ರವಾಗಿರುವ ಕಂಪನಿಯು ಆರಂಭದಲ್ಲಿ ವಾರ್ಷಿಕ ಸಾಮಾನ್ಯ ಸಭೆ ಗಳನ್ನು ಸಂಸ್ಥಾಪಕ ಧೀರೂಭಾಯಿ ಅಂಬಾನಿಯವರ ನೇತೃತ್ವದಲ್ಲಿ ಕ್ರೀಡಾಂಗಣಗಳಲ್ಲಿ ನಡೆಸುತ್ತಿತ್ತು ಮತ್ತು ಈಗ ಮಗ ಮುಖೇಶ್ ಅಂಬಾನಿ ನೇತೃತ್ವದಲ್ಲಿ ಮುಂಬರುವ ವಾರ್ಷಿಕ ಸಾಮಾನ್ಯ ಸಭೆ ವರ್ಚುವಲ್ ಆಗಿರುತ್ತದೆ, ಅಲ್ಲಿ ಷೇರುದಾರರು ವಾರ್ಷಿಕ ಸಾಮಾನ್ಯ ಸಭೆ ವೀಕ್ಷಿಸಲು, ಅಧ್ಯಕ್ಷರಿಗೆ ಪ್ರಶ್ನೆಗಳನ್ನು ಕೇಳಲು ಮತ್ತು ಮತ ಚಲಾಯಿಸಲು ಸಾಧ್ಯವಾಗುತ್ತದೆ ಎಂದು ಕಂಪನಿ ತಿಳಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.