ಜೆದ್ದಾ(www.vknews.in): ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಈ ಸಾಲಿನ ಹಜ್ ವಿಶೇಷ ಭದ್ರತೆಯೊಂದಿಗೆ ನಡೆಯಲಿದ್ದು, ಹಜ್ ಕರ್ಮಕ್ಕಾಗಿ ತಯಾರಿಗಳು ಭರದಿಂದ ಸಾಗುತ್ತಿದೆ. ಕೊವಿಡ್ ಪ್ರೊಟೊಕಾಲ್ ನೊಂದಿಗೆ ನಡೆಯಲಿರುವ ಪ್ರಸಕ್ತ ಸಾಲಿನ ಹಜ್ ಗಾಗಿ ಕೇವಲ 10000 ಮಂದಿಗೆ ಮಾತ್ರ ಹಜ್ ಕರ್ಮ ನೆರವೇರಿಸಲು ಅವಕಾಶ ನೀಡಲಾಗಿದ್ದು, ಇವರಲ್ಲಿ 7000 ಮಂದಿ ವಿದೇಶಿಗಳು ಹಾಗೂ 3000 ಮಂದಿ ಸೌದಿ ಪ್ರಜೆಗಳು ಸೇರಿದ್ದಾರೆ. ಹಜ್ ಭದ್ರತೆಯ ದೃಷ್ಟಿಯಿಂದ ಜುಲೈ 19ರಿಂದ ಸಾರ್ವಜನಿಕರಿಗೆ ಮಕ್ಕಾ ಪ್ರವೇಶವನ್ನು ನಿಷೇಧಿಸಲಾಗಿದ್ದು, ಹಜ್ಜಾಜ್ ಗಳಿಗೆ ಹಾಗೂ ವಿಶೇಷ ಅನುಮತಿ ಪತ್ರ ಇರುವವರಿಗೆ ಮಾತ್ರ ಮಕ್ಕಾ ಪ್ರವೇಶವನ್ನು ಅನುಮತಿಸಲಾಗಿದೆ. ಮಾತ್ರವಲ್ಲ ನಿಷೇಧದ ನಿಯಮ ಉಲ್ಲಂಘಿಸುವವರಿಗಾಗಿ 10,000 ರಿಯಾಲ್ (ಸುಮಾರು 2 ಲಕ್ಷ ರೂಪಾಯಿ) ದಂಡ ವಿಧಿಸಲಾಗುವುದೆಂದು ಸೌದಿ ಸರಕಾರ ಎಚ್ಚರಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.