ಉಡುಪಿ,(ವಿಶ್ವ ಕನ್ನಡಿಗ ನ್ಯೂಸ್ ) : ಉಡುಪಿ ನಗರಸಭೆಯ ಇಬ್ಬರು ಮಹಿಳಾ ಸದಸ್ಯೆಯ ರಿಗೆ ಕೊರೋನ ಸೋಂಕು ಇರುವುದು ದೃಢಪಟ್ಟಿದೆ.ಒರ್ವ ಸದಸ್ಯೆ ಅನಾರೋಗ್ಯದ ಕಾರಣದಿಂದಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಅವರಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದ್ದು ಅವರಿಗೆ ಬುಧವಾರ ಪಾಸಿಟಿವ್ ದೃಢಪಟ್ಟಿದೆ ಅಲ್ಲದೆ ಇನ್ನೋರ್ವ ನಗರಸಭಾ ಸದಸ್ಯೆಗೆ ಕೂಡ ಪಾಸಿಟಿವ್ ಧೃಢಪಟ್ಟಿದ್ದು ಇಬ್ಬರನ್ನೂ ಕೂಡ ಕೋವಿಡ್-19 ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಕೊರೋನಾ ಪಾಸಿಟಿವ್ ದೃಢಗೊಂಡಿರುವ ಹಿನ್ನಲೆಯಲ್ಲಿ ನಗರಸಭೆಯನ್ನು ಸೀಲ್ ಡೌನ್ ಮಾಡಿ ಸ್ಯಾನಿಟೈಜ್ ಮಾಡಲಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.