ಜೆದ್ದಾ(www.vknews.in): ತಮ್ಮ ವೇತನವನ್ನು ಮೀರಿದ ವ್ಯವಹಾರ ನಡೆಸುವ ವಲಸಿಗ ಕಾರ್ಮಿಕರ ಬ್ಯಾಂಕ್ ಖಾತೆಗಳನ್ನು ಘನೀಕರಿಸುವ ಬಗ್ಗೆ ವರದಿಗಳಲ್ಲಿ ಯಾವುದೇ ಸತ್ಯವಿಲ್ಲ ಎಂದು ಸೌದಿ ಅರೇಬಿಯನ್ ಹಣಕಾಸು ಪ್ರಾಧಿಕಾರ (ಸಾಮಾ) ಸೋಮವಾರ ಪ್ರಕಟಿಸಿದೆ. ಕೆಲವು ಮಾಧ್ಯಮಗಳು ಮತ್ತು ವೆಬ್ಸೈಟ್ಗಳಲ್ಲಿ ವದಂತಿಗಳಿಗೆ ಯಾವುದೇ ಆಧಾರಗಳಿಲ್ಲ ಎಂದು ಕೇಂದ್ರ ಬ್ಯಾಂಕ್ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.
ಅದಾಗ್ಯೂ ಎಲ್ಲಾ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಗ್ರಾಹಕರ ಬ್ಯಾಂಕ್ ಖಾತೆಗಳ ಬಗ್ಗೆ ಸರಿಯಾದ ಅಧ್ಯಯನ ಮಾಡುತ್ತಿದ್ದು, ಬ್ಯಾಂಕಿಂಗ್ ನಿಯಮಗಳಿಗೆ ಅನುಗುಣವಾಗಿ ಅವರು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಸಾಮಾ ಹೇಳಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.