ಬಹರೈನ್: ರಕ್ತದಾನ ಮಾಡುವುದರೊಂದಿಗೆ ಬಕ್ರೀದ್ ಆಚರಿಸಿದ ಅನಿವಾಸಿ ಭಾರತೀಯರು

ಬಹ್ರೈನ್(www.vknews.in): ಇಂಡಿಯನ್ ಸೋಶಿಯಲ್ ಫೋರಂ ಬಹ್ರೈನ್, ಝಮಾನ್ ಬಾಯ್ಸ್ ಕಲ್ಲಡ್ಕ – ರಿ, ಬ್ಲಡ್ ಡೋನರ್ಸ್ ಮಂಗಳೂರು – ರಿ ಇದರ ಸಂಯುಕ್ತ ಆಶ್ರಯದಲ್ಲಿ ಸಲ್ಮಾನಿಯಾ ರಕ್ತನಿಧಿ ಕೇಂದ್ರ ಮನಮಾ ಬಹ್ರೈನ್ ಇವರ ಸಹಯೋಗದೊಂದಿಗೆ ಜುಲೈ 31 ಶುಕ್ರವಾರ ಈದ್ ಹಬ್ಬದ ದಿನದಂದು ಬೆಳಿಗ್ಗೆ 7 :30 ರಿಂದ ಮಧ್ಯಾಹ್ನ 2:00 ಗಂಟೆಯವರೆಗೆ ಸಲ್ಮಾನಿಯಾ ರಕ್ತ ನಿಧಿ ಕೇಂದ್ರದಲ್ಲಿ ಬೃಹತ್ ರಕ್ತದಾನ ಶಿಬಿರ ಜರುಗಿತು.

ಕೋವಿಡ್ 19, ಕೊರೋನಾದ ಈ ಒಂದು ಸಂದಿಗ್ಧ ಸಮಯದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಲವು ದೇಶ-ವಿದೇಶದ ರೋಗಿಗಳಿಗೆ ರಕ್ತದ ಅವಶ್ಯಕತೆಯಿದ್ದು, ಈ ಒಂದು ಶಿಬಿರದ ಆ ಯೋಜನೆಯ ಮೂಲಕ ರಕ್ತ ಪೋರೈಕೆಯ ಮೂಲ ಉದ್ದೇಶವಾಗಿತ್ತು.

ಕಾರ್ಯಕ್ರಮ ಆಯೋಜಕರ ಕರೆಗೆ ಓಗೊಟ್ಟು ಬಹ್ರೈನ್ ಆನಿವಾಸಿ ನಿವಾಸಿಗಳು ಉತ್ತಮ ಸ್ಪಂದನೆ ನೀಡಿ ಸುಮಾರು 120 ಜನರು ರಕ್ತದಾನ ಮಾಡಿದರು.

ಈ ಮೂಲಕ ಭಾರತೀಯ ಮೂಲದ ಸಂಘಟನೆ ಹೊಸ ದಾಖಲೆ ಸೃಷ್ಟಿಸಿತು.

ಇಂಡಿಯನ್ ಸೋಶಿಯಲ್ ಫೋರಂ ಬಹ್ರೈನ್, ಝಮಾನ್ ಬಾಯ್ಸ್ ಕಲ್ಲಡ್ಕ – ರಿ, ಬ್ಲಡ್ ಡೋನರ್ಸ್ ಮಂಗಳೂರು – ರಿ ಇದರ ಕಾರ್ಯ ನಿರ್ವಾಹಕರು ಮತ್ತು ಸದಸ್ಯರು ಸಹಕರಿಸಿದರು.

ವರದಿ:ಬ್ಲಡ್ ಡೋನರ್ಸ್ ಮಂಗಳೂರು(ರಿ)

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...