ಬಿ.ಎಸ್.ಪಿ ಜಿಲ್ಲಾ ಉಸ್ತುವಾರಿ ಗೋಖಲೆ ವಿರುದ್ಧ ಸಿಂಗಾರೆ ಆಕ್ರೋಷ

ಬಸವಕಲ್ಯಾಣ (www.vknews.com) : ತಾಲೂಕಿನ ಬಹುಜನ ಸಮಾಜ ಪಾರ್ಟಿಯ ಬಸವಕಲ್ಯಾಣ ತಾಲೂಕಾ ಉಸ್ತುವಾರಿ ಜ್ಞಾನೇಶ್ವರ ಸಿಂಗಾರೆ ಅವರನ್ನು ಜಿಲ್ಲಾ ಬಿ.ಎಸ್.ಪಿ ಅಧ್ಯಕ್ಷರು ರಾಜ್ಯ ಹಾಗೂ ಸ್ಥಳೀಯ ಪತ್ರಿಕೆಗಳಲ್ಲಿ ಸಿಂಗಾರೆ ಅವರನ್ನು ಉಚ್ಛಾಟಿಸಲಾಗಿದೆ ಎಂದು ಪ್ರಕಟಣೆ ನೀಡಿರುವುದಕ್ಕೆ ಅವರು ಖಂಡಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ತಾಲೂಕಾ ಬಿ.ಎಸ್.ಪಿ ಉಸ್ತುವಾರಿ ಜ್ಞಾನೇಶ್ವರ ಸಿಂಗಾರೆ, ತಾನು ಬಹುಜನ ಸಮಾಜ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ, ಪಕ್ಷದ ನಿಯಮದಂತೆ ಹಾಗೂ ಜಿಲ್ಲಾ/ರಾಜ್ಯ ಪದಾಧಿಕಾರಿಗಳ ಆದೇಶಗಳನ್ನು ಪಾಲಿಸುತ್ತಾ ಬಂದಿದ್ದೇನೆ. ಪಕ್ಷದಲ್ಲಿ ಕಳೆದ ಒಂದು ದಶಕದಿಂದ ಜವಾಬ್ದಾರಿಯುತವಾಗಿ ಕಾರ್ಯಕ್ರಮಗಳನ್ನು ನಿಭಾಯಿಸಿರುತ್ತೇನೆ ಎಂದು ವಿವರಿಸಿದ್ದಾರೆ.

ಕೆಲವು ದಿನಗಳ ಹಿಂದೆ ರಾಜ್ಯ ಮತ್ತು ಸ್ಥಳೀಯ ಪತ್ರಿಕೆಗಳಲ್ಲಿ ನನ್ನನ್ನು ಉಚ್ಛಾಟಿಸಲಾಗಿದೆ ಎಂಬ ಹೇಳಿಕೆ ನನಗೆ ತುಂಬಾ ಬೇಸರ ತಂದಿದೆ. ಇದರ ಬಗ್ಗೆ ಜಿಲ್ಲಾಧ್ಯಕ್ಷರಿಗೆ ಕೇಳಿದಾಗ ಗೊತ್ತಿಲ್ಲ ಎಂಬ ಹಾರಿಕೆಯ ಉತ್ತರವನ್ನು ಕೊಟ್ಟು ಜಿಲ್ಲಾ ಉಸ್ತುವಾರಿಗಳಾದ ಅಂಕುಶ ಗೋಖಲೆ ಅವರಿಗೆ ವಿಚಾರಿಸಲು ಹೇಳಿರುವುದು ತೀರಾ ಅಸಮಾಧಾನಕ್ಕೆ ಕಾರಣವಾಗಿದೆ ಎಂದಿದ್ದಾರೆ.

ಬೀದರ ಜಿಲ್ಲಾ ಬಹುಜನ ಸಮಾಜ ಪಕ್ಷದ ಉಸ್ತುವಾರಿ ಗೋಖಲೆ ಅವರು ಪಕ್ಷದ ನಿಷ್ಠಾವಂತ ಪದಾಧಿಕಾರಿಗಳಿಗೆ ಕಡೆಗಣಿಸಿ, ಕಾರ್ಯಕರ್ತರ ಮೇಲೆ ವಯಕ್ತಿಕ ದ್ವೇಷವನ್ನು ಸಾಧಿಸುತ್ತಿರುವುದು ಸರಿಯಲ್ಲ. ತಮ್ಮ ಸ್ವಾರ್ಥಕ್ಕಾಗಿ ಪಕ್ಷವನ್ನು ಬಳಸಿಕೊಳ್ಳುತ್ತಿರುವ ಗೋಖಲೆ ಅವರು ಈ ಹಿಂದೆ ಬಿ.ಎಸ್.ಪಿ ತೊರೆದು ಅನ್ಯ ಪಕ್ಷದಿಂದ ಚುನಾವಣೆಗೆ ಸ್ಪಂರ್ಧಿಸುವ ಮೂಲಕ ಪಕ್ಷದ ವಿರುದ್ಧ ಚುನಾವಣೆಗೆ ನಿಂತು ಅವರೇ ದ್ರೋಹ ಬಗೆದಿದ್ದಾರೆ. ಆ ಸಮಯದಲ್ಲಿ ಅವರ ಹಿಂದೆ ಹೋದವರನ್ನಷ್ಟೇ ಇದೀಗ ಅವರು ಬಿ.ಎಸ್.ಪಿ ಪಕ್ಷದ ಉಸ್ತುವಾರಿ ವಹಿಸಿಕೊಂಡ ದಿನಗಳಿಂದ ತಮ್ಮ ಪರವಾಗಿ ಇರುವವರನ್ನು ಮಣೆ ಹಾಕುತಿದ್ದಾರೆ. ಭಾ.ರಿ.ಪ. ಪಕ್ಷದಿಂದ ಬಿ.ಎಸ್.ಪಿ.ಗೆ ಬಂದ ನಂತರ ಸ್ವತಃ ಅವರೇ ಪಕ್ಷದ ಹಲವು ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ನಾಚಿಗೇಡಿತನವಾಗಿದೆ ಎಂದು ಆರೋಪಿಸಿದ್ದಾರೆ.

ಪಕ್ಷದ ಜಿಲ್ಲಾ ಉಸ್ತುವಾರಿಗಳಾದ ಅಂಕುಶ ಗೋಖಲೆ ಅವರು ಪಕ್ಷದ ನಿಯಮದಂತೆ ‘ಬೈ-ಲಾ’ ಪ್ರಕಾರ ಯಾವುದೇ ತಾಲೂಕಾ ಮಾಜಿ ಅಧ್ಯಕ್ಷರಿಗೆ ತೆಗೆಯಬೇಕಾದರೆ ಮುನ್ಸೂಚನೆ ನೀಡಬೇಕು. ಅಂತಹ ಯಾವುದೇ ನೋಟಿಸ್ ಹೊರಡಿಸದೇ ಪಕ್ಷದಿಂದ ತೆಗೆದರೆ ಅದು ಪಕ್ಷ ವಿರೋಧಿ ನಿಯಮವಾಗಿರುತ್ತದೆ. ತಾನು ಗೋಖಲೆಯವರಿಗಿಂತ ಹೆಚ್ಚುಕಾಲ ಪಕ್ಷದಲ್ಲಿ ಸೇವೆ ಸಲ್ಲಿಸಿದ್ದೇನೆ. ಆದರೆ ಜಿಲ್ಲಾಧ್ಯಕ್ಷರನ್ನು ತಮ್ಮ ಕೈಗೊಂಬೆಯಾಗಿಟ್ಟುಕೊಂಡು ಪಕ್ಷದ ನಿಷ್ಠಾವಂತ ಪದಾಧಿಕಾರಿಗಳನ್ನು ತೊಂದರೆ ನೀಡುತಿದ್ದಾರೆ ಎಂದು ಬಲವಾಗಿ ದೂರಿದ್ದಾರೆ.

ಪಕ್ಷದ ಜಿಲ್ಲಾಧ್ಯಕ್ಷರು ತನ್ನನ್ನು ಯಾವುದೇ ಕಾರಣಗಳಿಲ್ಲದೇ ತೆಗೆದು ಹಾಕಿರುವ ಹೇಳಿಕೆ ವಾಪಸ್ ಪಡೆಯಬೇಕು. ಒಂದು ವೇಳೆ ಹೇಳಿಕೆ ವಾಪಸ್ ಪಡೆಯದಿದ್ದರೆ ಪಕ್ಷದ ಉಸ್ತುವಾರಿಗಳಾದ ಅಂಕುಶ ಗೋಖಲೆ ಅವರ ವಿರುದ್ಧ ಜಿಲ್ಲೆಯಾದ್ಯಂತ ಪಕ್ಷದ ಕಾರ್ಯಕರ್ತರೊಂದಿಗೆ ಹೋರಾಟ ಮಾಡಲಾಗುವುದು ಎಂದು ಜ್ಞಾನೇಶ್ವರ ಸಿಂಗಾರೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...