ಶಕ್ತಿ ಪಪೂ ಕಾಲೇಜಿನಿಂದ ಹೊಸ ವಿಧಾನದಕಲಿಕೆಯ ಬಗ್ಗೆ ವೆಬಿನಾರ್

ಮಂಗಳೂರು (www.vknews.com) : ಶಕ್ತಿ ಪಪೂ ಕಾಲೇಜಿನಿಂದರಾಜ್ಯದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಕೋವಿಡ್19ರ ಸಮಯದಲ್ಲಿ ಹೊಸ ವಿಧಾನದಕಲಿಕೆಯಆನ್‍ಲೈನ್ ಶಿಕ್ಷಣದ ಬಗ್ಗೆ 4 ದಿನಗಳ ಉಚಿತ ವೆಬಿನಾರ್‍ನ್ನುಆಯೋಜಿಸಲಾಗಿದೆ. ಈ ವೆಬಿನಾರ್‍ನ್ನುಇಂದು ಶಕ್ತಿ ಎಜ್ಯುಕೇಶನ್‍ಟ್ರಸ್ಟ್‍ನ
ಆಡಳಿತ ಟ್ರಸ್ಟಿ ಸಂಜೀತ್ ನಾೈಕ್ ಉದ್ಘಾಟಿಸಿದರು.

ನಂತರ ಮಾತನಾಡಿದಅವರು ಶಕ್ತಿ ಶಿಕ್ಷಣ ಸಂಸ್ಥೆಯುಆನ್‍ಲೈನ್ ಮೂಲಕ ಅನೇಕ ದಿನಗಳಿಂದ ಹೊಸ ಹೊಸ ಪ್ರಯೋಗವನ್ನು ಮಾಡುವುದರ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಯಶಸ್ವಿಯಾಗಿದೆ. ರಾಜ್ಯದಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಒಂದು ಹೊಸ ಕಲಿಕೆಯ ವಿಧಾನವನ್ನು ಪರಿಚಯಿಸುವಕಾರ್ಯಕ್ರಮದಕುರಿತಂತೆ ಮಾಹಿತಿ ನೀಡಿದರು. ಕಾರ್ಯಕ್ರಮಕ್ಕೆ ಮುಖ್ಯಅತಿಥಿಯಾಗಿ ಆಗಮಿಸಿದ ಬೆಂಗಳೂರಿನ ಬಿಎಸ್‍ಬಿಎಸ್‍ಕಾಲೇಜಿನಉಪಾಧ್ಯಕ್ಷರಾದ ವಿನಯ್‍ಜಾಧವ್ ಮಾತನಾಡಿ ನಾವು ಕೋವಿಡ್-19ರ ಸಮಯದಲ್ಲಿ ಹೆದರಿಕೆಯಿಂದಯಾರುಜೀವನ ನಡೆಸಬಾರದು. ನಾವು ಧೈರ್ಯದಿಂದ ನಮ್ಮ ಮುಂದಿನ ಶಿಕ್ಷಣವನ್ನು ಪೂರೈಸಬೇಕು.ಇದಕೋಸ್ಕರ ಹೊಸ ವಿಧಾನದ ಕಲಿಕೆಗೆ ನಾವೆಲ್ಲರೂತಯಾರಿಯನ್ನು ನಡೆಸಬೇಕು.

ಈ ಮೂಲಕ ಯಾವುದೇಕಷ್ಟದ ಸನ್ನಿವೇಶ ನಿರ್ಮಾಣವಾದರು ನಾವು ಇದಕ್ಕೆತಯಾರಿರಬೇಕೆಂದು ತಿಳಿಸಿದರು. ರಾಜ್ಯದ ಸುಮಾರು ವಿವಿಧ ಶಾಲೆಗಳ 75ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಸಕ್ತಿಯಿಂದ ಈ ವೆಬಿನಾರ್‍ನಲ್ಲಿ ಭಾಗವಹಿಸಿದರು. ಶಕ್ತಿ ಎಜ್ಯುಕೇಶನ್‍ಟ್ರಸ್ಟ್‍ನ ಆಡಳಿತನಿರ್ದೇಶಕರಾದಡಾ. ಕೆ. ಸಿ ನಾೈಕ್,ಪ್ರಧಾನ ಸಲಹೆಗಾರರಮೇಶ್ ಕೆ, ಅಭಿವೃದ್ಧಿಅಧಿಕಾರಿ ಪ್ರಖ್ಯಾತ್‍ರೈ, ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ವಿದ್ಯಾ ಜಿ ಕಾಮಾತ್, ಶಕ್ತಿ ಪಪೂ ಕಾಲೇಜಿನ ಪ್ರಾಂಶುಪಾಲರಾದ ಪ್ರಭಾಕರ ಜಿ.ಎಸ್‍ಸ್ವಾಗತಿಸಿ ವಾಣಿಜ್ಯ ವಿಭಾಗದಉಪನ್ಯಾಸಕಿ ಶಿಲ್ಪಾ ವಂದನಾರ್ಪಣೆಗೈದರು.

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...