ಲೋಕ ಕಲ್ಯಾಣಾರ್ಥವಾಗಿ ನಡೆಸುವ ದೇವತಾ ಕಾರ್ಯಗಳಿಂದ ಸಮಾಜಹಿತ ಹಾಗೂ ಅರೋಗ್ಯ ರಕ್ಷಣೆಗೆ ವಿಶೇಷ ಶಕ್ತಿ – ವೇದವ್ಯಾಸ ಕಾಮತ್

(www.vknews.com) : ಜಗತ್ತನ್ನೇ ತಲ್ಲಣಗೊಳಿಸುತ್ತಿರುವ ಮಹಾ ಸಾಂಕ್ರಾಮಿಕ ಕೊರೋನಾ ರೋಗದಿಂದ ಮುಕ್ತಿ ಪಡೆÀಯಲು ಜನರು ಹಾತೊರೆಯುತ್ತಿರುವ ಈ ಕಾಲಘಟ್ಟದಲ್ಲಿ ಆ ರೋಗ ಇನ್ನಷ್ಟೂ ಹೆಚ್ಚುತ್ತ್ತಿದೆ. ಇಂತಹ ಸಂದರ್ಭದಲ್ಲಿ ಜನರು ದೇವರ ಮೊರೆಹೋಗುವುದು ಸಹಜ. ಲೋಕಕಲ್ಯಾಣಾರ್ಥವಾಗಿ, ಕೊರೋನಾ ರೋಗ ನಿವಾರಣೆಗಾಗಿ ಧಾರ್ಮಿಕ ತಜ್ಞರ ಸಲಹೆಯಂತೆ ಹಾಗೂ ಮಾನ್ಯ ಸಂಸದರಾದ ನಳಿನ್ ಕುಮಾರ್ ಕಟೀಲು ಅವರ ಸಾರಥ್ಯದಲ್ಲಿ ಹಮ್ಮಿಕೊಳ್ಳಲಾದ ಕ್ರಿಮಿನಾಶಕ ಸೂಕ್ತ ಹವನದಿಂದ ಶೀಘ್ರವಾಗಿ ರೋಗ ನಿವಾರಣೆಯಾಗಿ ಸಮಾಜಕ್ಕೆ ಶಾಂತಿ ಲಭಿಸಲಿ, ಶಾಸಕನ ನೆಲೆಯಿಂದ ತಮ್ಮ ಸಂಪೂರ್ಣ ಸಹಕಾರವನ್ನು ನೀಡುವುದಾಗಿ ಶಾಸಕರಾದ ಮಾನ್ಯ ವೇದವ್ಯಾಸ ಕಾಮತ್ ಅವರು ನುಡಿದರು.

ಅವರು ಮಂಗಳೂರಿನ ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಇದೇ ಆಗಸ್ಟ್ 3, ಸೋಮವಾರದಂದು ಹಮ್ಮಿಕೊಳ್ಳಲಾದ ಕ್ರಿಮಿನಾಶಕ ಸೂಕ್ತ ಹವನದ ಪೂರ್ವ ತಯಾರಿ ಸಭೆಯಲ್ಲಿ ಮುಖ್ಯ ಅಭ್ಯಾಗತರಾಗಿ ಮಾತಾಡುತ್ತಿದ್ದರು. ಈ ಹವನದಲ್ಲಿ ಸೀಮಿತ ಸಂಖ್ಯೆಯಲ್ಲಿ ಭಕ್ತರು ಜಿಲ್ಲಾಡÀಳಿತ ಹಾಗೂ ಸರಕಾರದ ನಿಯಮ ಪಾಲನೆಯೊಂದಿಗೆ ಸಾಮಾಜಿಕ ಅಂತರ ಕಾಪಾಡಿಕೊಂಡು ಭಗವಹಿಸಿ ನಡೆಸಲು ನಿಶ್ಚಯಿಸಲಾಯಿತು. ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರರಾದ ಡಾ. ಕೆ ಸಿ ನಾೈಕ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಧಾರ್ಮಿಕ ತಜ್ಞರಾದ ಜ್ಯೋತಿಷಿ ಶ್ರೀ ಸಿ. ವಿ. ಪೊದುವಾಳ್ ಅವರು ಹೋಮದ ಮಹತ್ವವನ್ನು ತಿಳಿಸಿದರು.

ಕ್ಷೇತ್ರದ ಪ್ರಧಾನ ಅರ್ಚಕರಾದ ವೇದಮೂರ್ತಿ ವೆಂಕಟರಮಣ ಭಟ್ಟರು ಹೋಮದ ವಿಧಿವಿಧಾನಗಳನ್ನೂ ಫಲಗಳನ್ನೂ ತಿಳಿಸಿದರು.
ಇದೇ ಸಂದರ್ಭದಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣದ ಸಲುವಾಗಿ ದೇಣಿಗೆ ಸಂಗ್ರಹಕ್ಕಾಗಿ ಕೇಂದ್ರವನ್ನು ಸ್ಥಾಪಿಸಿ ಆ ಮೂಲಕ ಧನಸಂಗ್ರಹದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಆ ಬಗ್ಗೆ ವಿಶೇಷವಾದ ಭಿತ್ತಿಪತ್ರವನ್ನು ಬಿಡುಗಡೆಗೊಳಿಸಿದ ಮಾನ್ಯ ಶಾಸಕರಾದ ವೇದವ್ಯಾಸ ಕಾಮತ್ ಅವರು ಭಕ್ತಜನರು ಶ್ರೀರಾಮಮಂದಿರಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ವೈಯಕ್ತಿಕವಾಗಿ ರೂಪಾಯಿ ಹತ್ತು ಅಥವಾ ಮನೆಯೊಂದರ ಕನಿಷ್ಟ ರೂಪಾಯಿ ನೂರರಂತೆ ದೇಣಿಗೆಯನ್ನು ನೀಡಲು ವಿನಂತಿಸಿದರು. ಈ ಪ್ರದೇಶದ ಜನರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ತಮ್ಮ ದೇಣಿಗೆಯನ್ನು ನೀಡಬಹುದು ಎಂದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಬಿಜೆಪಿಯ ಜಿಲ್ಲಾ ಅಧ್ಯಕ್ಷರಾದ ಸುದರ್ಶನ್ ಅವರು ಸಲಹೆ ಸೂಚನೆಗಳನ್ನು ನೀಡಿದರು. ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಕಲಶ ಸಮಿತಿಯ ಅಧ್ಯಕ್ಷರಾದ ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಮೋನಪ್ಪ ಭಂಡಾರಿಯವರು ಇಂಥ ಕಾರ್ಯಕ್ರಮಗಳಲ್ಲಿ ಸಮಾಜದ ಎಲ್ಲರೂ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಬಿಜೆಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ರಾಮದಾಸ್, ಮಾಜಿ ಕಾರ್ಪೋರೇಟರ್ ಭಾಸ್ಕರಚಂದ್ರ ಶೆಟ್ಟಿ, ಬಿಜೆಪಿ ಪ್ರಮುಖರಾದ ಅಜೇಯ, ಭಜರಂಗದಳದ ಶರಣ್ ಪಂಪ್‍ವೆಲ್, ಹೆಚ್. ಕೆ. ಪುರುಷೋತ್ತಮ್, ಸ್ಥಳೀಯ ಕಾರ್ಪೋರೇಟರ್‍ಗಳಾದ ಶಕೀಲಾ ಕಾವ, ವನಿತಾ ಪ್ರಸಾದ್, ಕಿಶೋರ್ ಶೆಟ್ಟಿ, ಶಕ್ತಿ ವಿದ್ಯಾಸಂಸ್ಥೆಯ ಪ್ರಮುಖರಾದ ರಮೇಶ್ ಕೆ., ಪ್ರಭಾಕರ್ ಜಿ.ಎಸ್. ಉಪಸ್ಥಿತರಿದ್ದರು. ಆಡಳಿತಾಧಿಕಾರಿ ಕೃಷ್ಣಕುಮಾರ್ ಅವರು ಸ್ವಾಗತಿಸಿ ಧನ್ಯವಾದವಿತ್ತರು.

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...