ಕರೋನ

(www.vknews.com) :

ಕರೋನ ಬಂದೈತೆ ಜಗದಾಗ
ಢವಢವ ಅಂತೈತೆ ಎದೆಯಾಗ //

ನೆಮ್ಮದಿಯಿಂದ ಕೂರಂಗಿಲ್ಲ ಮನೆಯಾಗ
ಮಡದಿ ಮಕ್ಕಳು ಸೇರಂಗಿಲ್ಲ ಜೊತೆಯಾಗ //

ಹಾದಿ ಬೀದಿ ಸುತ್ತಂಗಿಲ್ಲ ಇಷ್ಟದಾಂಗ
ತಿಂಡಿ ತೀರ್ಥ ತಿನ್ನಂಗಿಲ್ಲ ಹೊಟೆಲ್ದಾಗ //

ಮೋಜು ಮಸ್ತಿ ಮಾಡಂಗಿಲ್ಲ ಬಾರಿನೊಳಗ
ರಾತ್ರಿ ಕುಡಿದು ಕುಣಿಯಂಗಿಲ್ಲ ಕ್ಲಬ್ಬಿನೊಳಗ //

ಗುಂಪು ಗಿಂಪು ಸೇರಂಗಿಲ್ಲ ಜನರೀಗ
ಮಾಸ್ಕ್ ಇಲ್ದೆ ಬರಂಗಿಲ್ಲ ತಾವು ಹೊರಗ //

ಮದುವೆ ಮುಂಜಿ ಮಾಡೋರಿಲ್ಲ ಜನಕೀಗ
ಮಂದಿ ಸತ್ರೂ ನೋಡಂಗಿಲ್ಲ ಬಂಧು ಬಳಗ //

ಎರಡು ಪಾಳಿ ಹಾಕ್ಯಾರ ಕೆಲ್ಸದಾಗ
ಬರದೆ ಹೋದ್ರೆ ಪಗಾರಿಲ್ಲ ತಿಂಗಳಿನಾಗ //

ಬಸ್ಸು ಕಾರು ಕಾಣುತ್ತಿಲ್ಲ ರಸ್ತೆಯಾಗ
ವಿಮಾನ ಹಾರುತ್ತಿಲ್ಲ ಬಾನಿನಾಗ //

ರೈಲು ಗಾಡಿ ಓಡುತ್ತಿಲ್ಲ ದೇಶದೊಳಗ
ಮೆಟ್ರೋ ರೈಲು ನಿಂತೋಗೈತೆ ಹಳಿಮ್ಯಾಗ //

ಗುಡಿ ಗೋಪುರ ಮುಚ್ಯಾರ ದೇಶದಾಗ
ಕಾಣಿಕೆ ಕಾಸು ಬೀಳುತ್ತಿಲ್ಲ ಹುಂಡಿಯೊಳಗ //

ಚರ್ಚು ಮಸೀದಿ ತೆಗೆಯಂಗಿಲ್ಲ ಯಾರೂ ಈವಾಗ
ಭಜನೆ ಪ್ರಾರ್ಥನೆ ಮಾಡಂಗಿಲ್ಲ ಯಾರೂ ಅಲ್ಲೀಗ //

ಶಾಲೆ ಕಾಲೇಜ್ ಮುಚ್ಯಾರ ದೇಶದಲ್ಲೀಗ
ಮಕ್ಳು ಮರಿ ಸೇರ್ಕೊಂಡಾರ ಮೊಬೈಲೂಳಗ //

ಬಡವರ ಬಾಳು ಬೀದೀಗ್ ಬಂತು ದೇಶದೊಳಗ
ದುಡ್ಡು ಕಾಸು ಇಲ್ದಂಗಾಯ್ತು ಜನರ ಕೈಯ್ಯಾಗ //

ಕರೋನ ಬಂದೈತೆ ಜಗದಾಗ
ಢವ ಢವ ಅಂತೈತೆ ಎದೆಯಾಗ //

ರಚನೆ: ಮು.ನಂ.ಗಜೇಂದ್ರ

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...