ಒಟ್ಟೋಮನ್ ಇತಿಹಾಸ (ಉಸ್ಮಾನಿಯಾ ಸಾಮ್ರಾಜ್ಯ)

(www.vknews.com) : ಭಾರತೀಯ ಪಠ್ಯ ಪುಸ್ತಕಗಳಲ್ಲಿ ಅತೀ ಹೆಚ್ಚು ಕಡೆಗಣಿಸಿದ ಇತಿಹಾಸ ಈ ಒಟ್ಟೋಮನ್ ಸಾಮ್ರಾಜ್ಯದ ವಿಷಯ, ನಮ್ಮ ಇತಿಹಾಸವೇ ತಿರುಚಿ ಹಾಕ್ತಾರೆ , ಮತ್ತೆ 600 ವರ್ಷ 3 ಭೂ ಖಂಡ (ಇಂದಿನ 41 ದೇಶಗಳು) ಆಳಿದ ತುರ್ಕರ ಬಗ್ಗೆ , ಅವರ ವೈಭವ , ನ್ಯಾಯ ನೀತಿ, ಒಂದೇ ರಾಜ ಕುಟುಂಬದ 36 ಸುಲ್ತಾನರ ಕಥೆ ಹೇಳ್ತಾರಾ ? , ಇನ್ನು ಮುಂದೆ ಕೆಲವು ಚಾಪ್ಟರ್ ಗಳಾಗಿ ಉಸ್ಮಾನಿಯಾ ಸುಲ್ತಾನರ ಮತ್ತು ಸಾಮ್ರಾಜ್ಯದ ಚರಿತ್ರೆ ಬಗ್ಗೆ ನಾನು (خلىل سراج) ಬರೆಯ ಬೇಕೆಂದಿದ್ದೇನೆ, انشا الله , – ಚಾಪ್ಟರ್ 1 – ಸುಲ್ತಾನ್ ಅಬ್ದುಲ್ ಹಮೀದ್ -೨ , ಅತ್ಯಂತ ಪ್ರಭಾಶಾಲಿ ಸುಲ್ತಾನರ ಪೈಕಿ , ಇವರೂ ಒಬ್ಬರು, ಸಿಂಹಾಸನ – 1876 , ಇವರು ಉಸ್ಮಾನಿಯಾ ಸಾಮ್ರಾಜ್ಯದ 34 ನೆಯ ರಾಜ ಮತ್ತು 26ನೆ ಕಲೀಫ, ಇವರ ಕಥೆ ಹೇಳುವ ಮೊದಲು, ಸುಲ್ತಾನ್ ಮುರಾದ್ (ಹಮೀದ್ ಅಣ್ಣ) ಬಗ್ಗೆ ಹೇಳಲೇ ಬೇಕು,

ಯಾಕಂದರೆ ಸುಲ್ತಾನ್ ಅಬ್ದುಲ್ ಹಮೀದ್ ಗೆ ಮೊದಲು ಈತ 4 ತಿಂಗಳು ರಾಜನಾಗಿದ್ದರು, ಪ್ರಪಂಚ ಯಾವುದೇ ದೇಶ, ರಾಜ್ಯ, ಸಾಮ್ರಾಜ್ಯ ಕ್ಕೂ ಎಲ್ಲಾ ಸಮಯಕ್ಕೂ ಪಿತೂರಿ, ಒಳ ಸಂಚು , ಹೊರಗಿನ ಶತ್ರು , ತಪ್ಪಿದ್ದಲ್ಲ, …. ಹಾಗೆ ಒಟ್ಟೋಮನ್ ಕೂಡ ಇಂತಹ ತೊಂದರೆ ಗಳಿಂದ ಹೊರತಾಗಿಲ್ಲ . ನಿಮಗೆ ಗೊತ್ತಿರುವ ಹಾಗೆ 1876 ಅಂದ್ರೆ ಬ್ರಿಟಿಷರ ದಬ್ಬಾಳಿಕೆ ಯ ಕಾಲ , ಬ್ರಿಟಿಷ್ ಎಂಬ ಕ್ಯಾನ್ಸರ್ ಒಟ್ಟೋಮನ್ ಸಾಮ್ರಾಜ್ಯ ವನ್ನು ಬಿಟ್ಟಿಲ್ಲ… ಇದಕ್ಕೂ ಮೊದಲು ನಿಮಗೆ Freemasons ಬಗ್ಗೆ ಗೊತ್ತಿರಬೇಕು, ಇದೊಂದು ಪಿತೂರಿ ಸಂಘಟನೆ ಇದರ ಉದ್ದೇಶ ಪ್ರಪಂಚದಲ್ಲಿ ಒಂದು ಹೊಸ ಆಡಳಿತ ಹುಟ್ಟು ಹಾಕೋದು, ಇಸವಿ 1425 ರಲ್ ಶುರುವಾದ ಈ ಗುಪ್ತ ಸಂಘಟನೆ, 19 ನೆಯ ಶತಮಾನದಲ್ಲಿ ಬಲಾಢ್ಯ ವಾಗಿ ಹೋಯ್ತು, ಎಷ್ಟರ ಮಟ್ಟಿಗೆ ಎಂದರೆ, ಅಂದಿನ ಬ್ರಿಟಿಷ್ ರಾಣಿ ವಿಕ್ಟೋರಿಯಾ ಳನ್ನು ತನ್ನ ಹತೋಟಿಗೆ ತರುವಷ್ಟರ ಮಟ್ಟಿಗೆ…. ಫ್ರೀ ಮೇಸನ್ ಗಳು ಹೆಚ್ಚಿನವರು ಯಹೂದಿಗಳು, ಮತ್ತು ಈಗಿನ ಬ್ಯಾಂಕಿಂಗ್ ಸಿಸ್ಟಮ್ ಶುರು ಮಾಡಿದ್ದೆ ಅವರು, ಫ್ರೀ ಮೇಸನ್ ಗಳನ್ನ ಬರೀ 3 ಶ್ರೀಮಂತ ಯಹೂದಿ ಕುಟುಂಬ ನಿಯಂತ್ರಿಸುತ್ತಿದ್ದಾರೆ , ಈಗಲೂ ಕೂಡ ಪ್ರಪಂಚ ಬ್ಯಾಂಕ್ಗಳು, ತೈಲ ವಹಿವಾಟು, ದೊಡ್ಡ ದೊಡ್ಡ ಕಂಪನಿ ಗಳು, ಇವರ ನಿಯಂತ್ರಣ ದಲ್ಲಿ ಇವೆ .. ಹಾ.. ಆಫಾರ್ಸ್ .. ಮೀಡಿಯಾ ಕೂಡ. ಈಗ ವಿಷಯಕ್ಕೆ ಬರೋಣ..

ಒಟ್ಟೋಮನ್ ಸಾಮ್ರಾಜ್ಯ ಕ್ಕು ಈ ಫ್ರೀ ಮೇಸನ್ ಗೂ ಏನೂ ಸಂಭಂದ ? ಯಾಕಿಲ್ಲ ? ಇಷ್ಟು ದೊಡ್ಡ ಸಾಮ್ರಾಜ್ಯ ವನ್ನೂ ಸುಮ್ಮನೆ ಬಿಡ್ತಾರಾ ? ಹಾಗೆ ಸುಮ್ಮನೆ ಬಿಟ್ಟರೆ ಇಡೀ ಪ್ರಪಂಚ ಆಳಿ ಬಿಟ್ಟರು ಈ ತುರ್ಕರು , ಸುಲ್ತಾನ್ ಮುರಾದ್ ರ ಚಿಕ್ಕಪ್ಪ ರನ್ನು (ಸುಲ್ತಾನ್ ಅಝೀಝ್) may 1876 ರಲ್ಲ ನಿಗೂಢ ರೀತಿಯಲ್ಲಿ ಹತ್ಯಾಯಾಗ್ತರೆ , ಈ ಕೊಲೆಯ ಹಿಂದೆ ಫ್ರೀ ಮೇಸನ್ ಪಿತೂರಿ ಇದೆ ಎಂದು ಕೊನೆಗೆ ತಿಳಿಯುತ್ತದೆ. ಯಾಕೆ ಕೊಲ್ಲುತ್ತಾರೆ ಎಂದರೆ , ಫ್ರೀ ಮೇಸನ್ ಬಗ್ಗೆ ಎಲ್ಲಾ ಮಾಹಿತಿ ಪಡಕೊಂಡಿದ್ದರು ಸುಲ್ತಾನ್ ಅಝೀಝ್, ಮತ್ತು ಸುಲ್ತಾನ್ ಮುರಾಡ್ ರನ್ನು ಒಲೈಸುವಲ್ಲಿ ಫ್ರೀ ಮೇಸನ್ ಯಶಸ್ವಿ ಕೂಡ ಆಗಿತ್ತು, ರಾಜ ತನ್ನ ಹತೋಟಿಗೆ ಇದ್ದರೆ ಇಷ್ಟು ದೊಡ್ಡ ಸಾಮ್ರಾಜ್ಯ ವನ್ನ ಸುಲಭವಾಗಿ ನಿಯಂತ್ರಿಸಲು ಸಾಧ್ಯ ಎಂದು ಫ್ರೀ ಮೇಸನ್ ಗೆ ಗೊತ್ತು….. ಹಾಗೆ ಪಿತೂರಿ ಗಳ ಇಚ್ಛೆಯಂತೆ ಮುರಾದ್ ೫ , ಸುಲ್ತಾನ್ ಆಗಿ ಸಿಂಹಾಸನ ಏರುತ್ತಾರೆ. ,

 ಮುಂದಿನ ಚಾಪ್ಟರ್ ಗಾಗಿ ಕಾಯಿರಿ….

– ಖಲೀಲ್ ಸೇರಾಜೆ

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...