ಕೋವಿಡ್ ನಿಯಮಾನುಸಾರ ಮೃತದೇಹ ಸಂಸ್ಕರಣೆ

ಕಾಪು (www.vknews.com) : ಕಾಪು ತಾಲೂಕಿನ ಮಲ್ಲಾರ್ ಗ್ರಾಮದಲ್ಲಿ ಮಹಿಳೆಯೊಬ್ಬರು ಮೃತ ಪಟ್ಟಿದ್ದು , ಈಕೆಯು ಸಾಮಾನ್ಯ ಮರಣ ಹೊಂದಿರುವರು ಎಂದು ಆಶಾ ಕಾರ್ಯಕರ್ತರ ವರದಿಯ ಮೇರೆಗೆ, ಕಾಪು ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಪ್ರಮಾಣ ಪತ್ರ ನೀಡಿ ನಿಮ್ಮ ಸಂಪ್ರದಾಯದಂತೆ ಮುಂದಿನ ಕೆಲಸ ನಿರ್ವಹಿಸಿ ಎಂದು ತಿಳಿಸಿದರು.

ಆದರೆ ನೆರೆಕರೆಯವರು ಮತ್ತು ಸಂಬಂಧಿಕರು ಮೃತಪಟ್ಟ ಮಹಿಳೆಗೆ ಕೊರೋನಾ ಸೋಂಕು ಇದ್ದಿರಬಹುದೆಂದು ಯಾರೂ ಹತ್ತಿರ ಬರಲಿಲ್ಲ ಹಾಗೂ ದಫನದ ಕೆಲಸಕ್ಕೆ ಸಹಕರಿಸಲಿಲ್ಲ.

ಇದನ್ನು ಮನಗೊಂಡು ಜಮಾಅತೆ ಇಸ್ಲಾಮೀ ಹಿಂದ್ ಕಾಪು ವರ್ತುಲದ ಸಂಚಾಲಕಿ ಹಾಗೂ ಹೆಚ್ . ಆರ್. ಎಸ್ ನ ಸದಸ್ಯೆ ಶೆಹೆನಾಜ್ ಕಾಪು ರವರು , ತನ್ನ ನೇತೃತ್ವದಲ್ಲಿ ತಂಡ ರಚಿಸಿ ಕೋವಿಡ್ ನಿಯಮಾನುಸಾರ , ಮುಂಜಾಗ್ರತೆಯ ಕ್ರಮವಾಗಿ ಸ್ಯಾನಿಟಿರೈಸ್ ಬಳಸಿ ಪಿ. ಪಿ. ಡ್ರೆಸ್ ಧರಿಸಿ ಮ್ರತದೇಹಕ್ಕೆ ಸ್ನಾನ ಮಾಡಿಸಿ, ಕಫನ್ ( ಮಯ್ಯತ್ ವಸ್ತ್ರ ) ತೊಡಿಸಿ ದಫನ ಕೆಲಸಕ್ಕೆ ಅನುವು ಮಾಡಿ ಕೊಟ್ಟರು.

ತದ ನಂತರ ಜಮಾಅತೆ ಇಸ್ಲಾಮೀ ಹಿಂದ್ ನ ಸ್ಥಾನೀಯ ಅಧ್ಯಕ್ಷ ಹೆಚ್. ಆರ್. ಸದಸ್ಯ ಅನ್ವರ್ ಅಲಿ ಕಾಪು ತರಭೇತಿ ಪಡೆದ ಅಷ್ಫಾಕ್ ಅಬ್ದುಲ್ ಅಲಿ ಯವರ ಮುಂದಾಳುತ್ವದಲ್ಲಿ ಕೊಪ್ಪಲಂಗಡಿ ಖಬ್ರಸ್ಥಾನದಲ್ಲಿ ದಫನ ಕಾರ್ಯ ನೆರವೇರಿಸಲಾಯಿತು.

ಪುರಷರ ತಂಡದಲ್ಲಿ ಸ್ಥಳೀಯರಾದ ತೌಸಿಫ್ , ತಾರೀಖ್ , ಇರ್ಫಾನ್ , ಆತೀಫ್ , ಆಸೀಫ್ ಶೇಖ್ , ಮುಹಮ್ಮದ್ ಅಲಿ , ಅಬ್ದುಲ್ ಜಲೀಲ್ ಉಪಸ್ಥಿರಿದ್ದರು.
ಮೌಲಾನಾ ಮುಹಮ್ಮದ್ ಪರ್ವೇಜ್ ಆಲಂ ರವರು ಜನಾಝಾ ( ಮ್ರತದೇಹಕ್ಕೆ ಅಂತಿಮ ನಮಾಜ್ ) ನಮಾಜ್ ನಿರ್ವಹಿಸಿದರು.

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...