ಸುಳ್ಯ ವಿಖಾಯ ತಂಡದಿಂದ ಡಿ.ಕೆ ಶಿವಕುಮಾರ್ ಭೇಟಿ

(www.vknews.com) : ಸುಳ್ಯ SKSSF ತುರ್ತು ಸೇವಾ ವಿಭಾಗ ವಿಖಾಯದ ತರಬೇತಿ ಹೊಂದಿದ ತಂಡವು ಈ ದಿನ ಮಡಿಕೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ರವರನ್ನು ಭೇಟಿಯಾಗಿ ವಿಖಾಯದ ಕಾರ್ಯವೈಖರಿಯ ಬಗ್ಗೆ ವಿವರಿಸಿದರು.

ಕಳೆದ ಜೋಡುಪಾಲ ದುರಂತ ಸಂದರ್ಭದಲ್ಲಿ ಯಾವುದೇ ರೀತಿಯ ಸುರಕ್ಷಾ ಸಾಮಾಗ್ರಿಗಳು ಇಲ್ಲದೇ ಹಲವಾರು ಜನರನ್ನು ರಕ್ಷಿಸಿದ ಸುಳ್ಯ ವಿಖಾಯ ತಂಡವನ್ನು ಡಿ.ಕೆ.ಶಿ ಪ್ರಶಂಸಿದರು.

ವಿಖಾಯ ಸ್ವಯಂ ಸೇವಕರ ಸೇವೆಯ ಕುರಿತು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಂ ಶಾಹಿದ್ ಡಿ.ಕೆ ಶಿವಕುಮಾರ್ ರವರಿಗೆ ವಿವರಿಸಿದರು.

ನಿಯೋಗದಲ್ಲಿ ಸುಳ್ಯ ವಿಖಾಯ ಚೇರ್ಮೆನ್ ಷರೀಫ್ ಅಜ್ಜಾವರ, ಜ.ಕನ್ವೀನರ್ ಖಲಂದರ್ ಎಲಿಮಲೆ, ಕಾರ್ಯದರ್ಶಿ ತಾಜುದ್ದೀನ್ ಟರ್ಲಿ, ವಿಖಾಯ ಎಕ್ಟೀವ್ ವಿಂಗ್ ಸದಸ್ಯ ಆಶಿಕ್ ಸುಳ್ಯ, ಸುಳ್ಯ ಕ್ಲಸ್ಟರ್ ವಿಖಾಯ ಕಾರ್ಯದರ್ಶಿ ತಾಜುದ್ದೀನ್ ಆರಂತೋಡು, SKSSF ದ.ಕ ಜಿಲ್ಲಾ ಕೌನ್ಸಿಲರ್ ಶಹೀದ್ ಪಾರೆ ಜೊತೆಯಲ್ಲಿದ್ದರು.

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...