ಓವನ್‌ ಸ್ಫೋಟ : ಬೇಕರಿ ಮಾಲೀಕ ಸಾವು

ಉಡುಪಿ,(ವಿಶ್ವ ಕನ್ನಡಿಗ ನ್ಯೂಸ್ ): ತಾಲೂಕಿನ ಮಾಬುಕಳದಲ್ಲಿ ಬೇಕರಿ ಉತ್ಪನ್ನಗಳ ತಯಾರಿಕಾ ಘಟಕದಲ್ಲಿ ಅವಘಡ ಸಂಭವಿಸಿದ್ದು, ಬೇಕರಿ ಮಾಲೀಕ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಬೇಕರಿಲ್ಲಿನ ದೊಡ್ಡ ಗಾತ್ರದ ಓವನ್‌ ಸ್ಫೋಟದಿಂದ ಈ ದುರ್ಘಟನೆ ನಡೆದಿದೆ. ಬೇಕರಿಯ ಮಾಲೀಕ ರಾಬರ್ಟ್ ಪುಟಾರ್ಡೋ ಸ್ಥಳದಲ್ಲೇ ಸಾವನ್ನಪ್ಪಿದ ದುರ್ದೈವಿ.ಓವನ್ ನಿರ್ವಹಣೆಗೆಂದು ಮಾಲೀಕ ರಾಬರ್ಟ್ ಅದರ ಸಮೀಪ ಹೋದಾಗ ದಿಢೀರನೆ ಸ್ಫೋಟ ಸಂಭವಿಸಿದೆ. ಓವನ್ ಬಾಗಿಲು ಬಡಿದು ಅವರ ದೇಹ ಸಂಪೂರ್ಣ ಛಿದ್ರವಾಗಿದೆ. ಕೋಟ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...