‘ಸಮಸ್ತ ಗಲ್ಫ್ ಬ್ರದರ್ಸ್ ಕಟ್ಟತ್ತಾರು’ ಪ್ರಥಮ ವಾರ್ಷಿಕ ಸಭೆ,ನೂತನ ಸಮಿತಿ ಅಸ್ತಿತ್ವಕ್ಕೆ

ಪುತ್ತೂರು (www.vknews.com) : ಕಟ್ಟತ್ತಾರಿನ ಅನಿವಾಸಿಗರ ಸಂಘಟನೆ ‘ಸಮಸ್ತ ಗಲ್ಫ್ ಬ್ರದರ್ಸ್’ ನ ಪ್ರಥಮ ವಾರ್ಷಿಕ ಮಹಾಸಭೆಯು ಝುಬೈರ್ ಹಾಜಿ ಯವರ ಅಧ್ಯಕ್ಷತೆಯಲ್ಲಿ Zoom ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಿತು.ಶೈಖುನಾ ಉಮ್ಮರ್ ಉಸ್ತಾದ್ ನಂಜೆ ಕಾರ್ಯಕ್ರಮವನ್ನು ದುಆ ಮೂಲಕ ಉದ್ಘಾಟಿಸಿದರು.

ಅಬ್ದುಲ್ ಖಾದರ್ ಸ್ವಾಗತಿಸಿ ಕಳೆದ ಒಂದು ವರ್ಷದಲ್ಲಿ ಮಾಡಿದ ಉತ್ತಮ ಕೆಲಸ ಕಾರ್ಯಗಳನ್ನು ವಿವರಿಸಿದರು.ಕಾರ್ಯದರ್ಶಿ ಶರೀಫ್ ಕೆ.ಎ ವರದಿ ವಾಚಿಸಿ ಸಹಕರಿಸಿದ ಎಲ್ಲರನ್ನೂ ಸ್ಮರಿಸಿದರು.ಅಧ್ಯಕ್ಷರಾದ ಝುಬೈರ್ ಹಾಜಿ ಕೋವಿಡ್ ಸಂದರ್ಭದಲ್ಲಿ ಸಮಿತಿ ಮಾಡಿದ ಅತ್ಯುತ್ತಮ ಕಾರ್ಯಗಳನ್ನು ವಿವರಿಸಿ ಮುಂದಿನ ಹಲವಾರು ಯೋಜನೆಗಳನ್ನು ಪ್ರಸ್ತಾಪ ಮಾಡಿ ಸದಸ್ಯರಿಂದ ಸಲಹೆಗಳನ್ನು ಸ್ವೀಕರಿಸಿದರು.ಅಧಿಕಾರಾವಧಿಯಲ್ಲಿ ಸಹಕಾರ ನೀಡಿದ ಪ್ರತಿಯೊಬ್ಬರನ್ನೂ ನೆನಪಿಸಿ ಮುಂದೆಯೂ ಎಲ್ಲರ ಸಹಕಾರ ಕೋರಿದರು ಮತ್ತು ಹಾಲಿ ಸಮಿತಿಯನ್ನು ಬರ್ಖಾಸ್ತುಗೊಳಿಸಿದರು.

SKSSF ಕಟ್ಟತ್ತಾರು ಶಾಖಾ ಅಧ್ಯಕ್ಷರಾದ ಶಮೀರ್ ಫೈಝಿ ಅವರು ಚುಣಾವಣಾ ಅಧಿಕಾರಿಯಾಗಿ ಪದಾಧಿಕರಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಕತ್ತರ್,ಒಮಾನ್,ಸೌದಿ ಅರೇಬಿಯಾ,ಯುಎ.ಇ,ಕುವೈತ್ ಸಹಿತ 5 ರಾಷ್ಟ್ರಗಳಲ್ಲಿರುವ ಸದಸ್ಯರು ಏಕಕಾಲದಲ್ಲಿ ಭಾಗವಹಿಸಿದ್ದು ಸಂಪೂರ್ಣವಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದು ರವೂಫ್ ಬಿ.ಎಸ್ ರವರು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.

ಒಂದು ಲಕ್ಷಕ್ಕೂ ಹೆಚ್ಚಿನ ವೆಚ್ಚದಲ್ಲಿ ಮಸೀದಿಯ ಮುಂಭಾಗಕ್ಕೆ ಮೇಲ್ಚಾವಣಿ ನಿರ್ಮಾಣ:

ಸಮಸ್ತ ಗಲ್ಫ್ ಬ್ರದರ್ಸ್ ಕಟ್ಟತ್ತಾರು ಇದರ ಪ್ರಥಮ ವಾರ್ಷಿಕ ಸಂಭ್ರಮದ ಪ್ರಯುಕ್ತ ಸುಮಾರು ಒಂದು ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಮಸೀದಿ ಮುಂಭಾಗದಲ್ಲಿ ಮೇಲ್ಚಾವಣಿ ನಿರ್ಮಿಸಲು ಉದ್ದೇಶಿಸಿದ್ದು ಕಾಮಗಾರಿ ಪ್ರಗತಿಯಲ್ಲಿದೆ.ಮಳೆ ಮತ್ತು ಬಿಸಿಲಿನಿಂದ ನಮಾಝ್ ಗೆ ಬರುವವರು ಮತ್ತು ಮದ್ರಸಾ ಮಕ್ಕಳು ತೊಂದರೆಯನ್ನು ಅನುಭವಿಸುತ್ತಿದ್ದರು.ಇದನ್ನರಿತ ಸಮಿತಿಯು ಸುಸಜ್ಜಿತವಾದ ಮೇಲ್ಚಾವಣಿ ನಿರ್ಮಿಸಿ ಕೊಟ್ಟಿದೆ.

“ಸಮಸ್ತ ಗಲ್ಫ್ ಬ್ರದರ್ಸ್ ಕಟ್ಟತ್ತಾರು” ಸಮಿತಿಯ 2020-21ನೇ ಸಾಲಿನ ಪದಾಧಿಕರಿಗಳ ವಿವರ:

ಗೌರವ ಅಧ್ಯಕ್ಷರು: ಉಮ್ಮರ್ ಹಾಜಿ (ಖತ್ತರ್)

ಅಧ್ಯಕ್ಷರು: ಝುಬೈರ್ ಹಾಜಿ (ಒಮಾನ್)

ಉಪಾಧ್ಯಕ್ಷರು: ಇಬ್ರಾಹಿಂ (ಖತ್ತರ್)

ಕಾರ್ಯದರ್ಶಿ: ಶರೀಫ್ ಕೆ.ಎ (ಯ.ಎ.ಇ)

ಜೊತೆ ಕಾರ್ಯದರ್ಶಿ: ಅಬ್ದುಲ್ ಖಾದರ್

ಕೋಶಾಧಿಕಾರಿ: ಮುಸ್ತಫಾ ಬಿ.ಎಂ (ಸೌದಿ ಅರೇಬಿಯಾ)

ಧಾರ್ಮಿಕ ಸಲಹೆಗಾರರು: ಶಮೀರ್ ಫೈಝಿ.

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...