ಕತಾರ್ ಚಾರಿಟಿ ಹಸ್ತಾಂತರಿಸಿದ ಈದ್ ಕಿಟ್ ಗಳನ್ನು ಸಂಕಷ್ಟದಲ್ಲಿದ್ದ ಅನಿವಾಸಿ ಭಾರತೀಯರಿಗೆ ವಿತರಿಸಲು ನೆರವಾದ QISF

(www.vknews.com) : ಕೊರೋನ (ಕೋವಿಡ್-19) ಎಂಬ ಮಹಾಮಾರಿಯು ದೇಶಾದ್ಯಂತ ವ್ಯಾಪಿಸಿದ ಪರಿಣಾಮವಾಗಿ, ಸುಮಾರು ನಾಲ್ಕುವರೆ ತಿಂಗಳಿನಿಂದ ಕತಾರಿನಲ್ಲಿ ಉದ್ಯೋಗ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿದ ಅನಿವಾಸಿ ಭಾರತೀಯರಿಗೆ ಸಡಗರದಿಂದ ಈದ್ ಆಚರಿಸಲು ಕತಾರ್ ಚಾರಿಟಿ (Qatar Charity) ಯ ಸಹಭಾಗಿತ್ವದಲ್ಲಿ QISF ಈದ್ ಕಿಟ್ ವಿತರಿಸುವ ಮೂಲಕ ಸಂಕಷ್ಟದಲ್ಲಿರುವವರಿಗೆ ನೆರವಾಯಿತು.

ದಿನಾಂಕ 01-08-2020 ನೇ ಭಾನುವಾರ ಸಂಜೆ 4.30 ಕ್ಕೆ ಬಕ್ರೀದ್ ಹಬ್ಬದ ದಿನ ಕತಾರ್ ಚಾರಿಟಿಯು, ಲುಸೈಲ್ ನಲ್ಲಿರುವ ಕಛೇರಿಯಲ್ಲಿ ಸುಮಾರು 50000 ಮಂದಿಗೆ ಈದ್ ಕಿಟ್ ಗಳನ್ನು ವಿತರಣೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ಈ ಕಾರ್ಯಕ್ರಮದಲ್ಲಿ, ವಿವಿಧ ದೇಶಗಳ ರಾಯಭಾರಿ ಕಛೇರಿಯ ಅಧಿಕಾರಿಗಳು ಹಾಗೂ ವಿವಿಧ ದೇಶದ ಸಾಮಾಜಿಕ ಸಂಘಟನೆಯ ನೇತಾರರು ಮತ್ತು ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ, QISF ನ ಕೇಂದ್ರೀಯ ಸಮೀತಿಯ ಪ್ರಧಾನ ಕಾರ್ಯದರ್ಶಿಗಳಾದ ಬಶೀರ್ ಅಹ್ಮದ್ ಮತ್ತು
QISF ನ ಮಾನವೀಯ ಸೇವಾ ಘಟಕದ ಮುಖ್ಯಸ್ಥರಾದ ಲತೀಫ್ ಮಡಿಕೇರಿ ಆಹ್ವಾನಿತರಾಗಿ ಪಾಲ್ಗೊಂಡಿದ್ದರು.

ಹಲವಾರು ವರ್ಷಗಳಿಂದ ಸಮಾಜಸೇವೆ ಹಾಗೂ ಮಾನವೀಯ ಸೇವೆಯಲ್ಲಿ ಮುಂಚೂಣಿಯಲ್ಲಿದ್ದು, ಅನಿವಾಸಿ ಭಾರತೀಯರ ಹಾಗೂ ಕತಾರ್ ನ ವಿವಿಧ ಇಲಾಖೆಗಳ ಅಧಿಕಾರಿಗಳ ಮನಗೆದ್ದ ಕತಾರ್ ಇಂಡಿಯನ್ ಸೋಷಿಯಲ್ ಫೋರಮ್ (QISF) ಗೆ ಈದ್ ಕಿಟ್ ವಿತರಿಸುವ ಜವಾಬ್ದಾರಿಯನ್ನು ಕತಾರ್ ಚಾರಿಟಿಯು ಹಸ್ತಾಂತರಿಸಿತ್ತು.

ಕತಾರ್ ಇಂಡಿಯನ್ ಸೋಷಿಯಲ್ ಫೋರಂ ನ ತಂಡವು ತಮ್ಮ ಅಮೂಲ್ಯವಾದ ಸಮಯವನ್ನು ಸಮಾಜಸೇವೆಗೆ ಮೀಸಲಿಡುವ ಮುಖಾಂತರ, ಆರೋಗ್ಯ ಇಲಾಖೆಯ ಕಟ್ಟುನಿಟ್ಟಿನ ಕ್ರಮವಾದ ಸಾಮಾಜಿಕ ಅಂತರ ಕಾಪಾಡಿಕೊಂಡು, ಅರ್ಹ ಬಡ ಕುಟುಂಬಗಳಿಗೆ ಹಾಗೂ ಹಲವಾರು ಕಾರ್ಮಿಕರು ನೆಲೆಸಿರುವ ಕ್ಯಾಂಪುಗಳಿಗೆ ಭೇಟಿ ನೀಡಿ ಈದ್ ಕಿಟ್ ವಿತರಿಸಿ ಕತಾರ್ ಚಾರಿಟಿಯು ನೀಡಿದ್ದ ಜವಾಬ್ದಾರಿಯನ್ನು ಚಾಚೂ ತಪ್ಪದೇ ಪಾಲಿಸುವಲ್ಲಿ ಯಶಸ್ವಿಯಾಯಿತು.

ಕಳೆದ ರಂಜಾ಼ನ್ ತಿಂಗಳಿನ ಈದ್ ಉಲ್ ಫಿತರ್ ನಲ್ಲೂ ಸಹ, ಈದ್ ಕಿಟ್ ಹಾಗೂ ಕೋವಿಡ್-19 ರ ಪರಿಹಾರ ಕಿಟ್ ಗಳನ್ನು QISF ವಿತರಿಸಿತ್ತು.

ದಿನಾಂಕ 06-08-2020 ರ ಈದ್ ಕಿಟ್ ವಿತರಿಸುವ ಕಾರ್ಯಕ್ರಮದಲ್ಲಿ QISF ಕರ್ನಾಟಕ ಘಟಕದ ರಾಜ್ಯಾ ಧ್ಯಕ್ಷರಾದ ನಝೀರ್ ಪಾಷ, QISF ಕರ್ನಾಟಕ ಘಟಕದ ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್ ಕಾರ್ನಾಡ್, IFF ನ ಅಯ್ಯೂಬ್ ಉಳ್ಳಾಲ, ಖಾಲೀದ್ ಮೋಹಸೀನ್ ಮಂಗಳೂರು, ಇಸ್ಮಾಯಿಲ್ ಕಾಪು ಹಾಗೂ QISF ನ ಮಾನವೀಯ ಸೇವಾ ಘಟಕದ ಮುಖ್ಯಸ್ಥರಾದ ಲತೀಫ್ ಮಡಿಕೇರಿ ಉಪಸ್ಥಿತರಿದ್ದರು.

ಈದ್ ಕಿಟ್ ವಿತರಿಸುವಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಭಾಗಿಯಾಗಿ, ಸಹಕರಿಸಿದ ಪ್ರತಿಯೊಬ್ಬರಿಗೂ QISF ಕರ್ನಾಟಕ ಘಟಕದ ರಾಜ್ಯಾಧ್ಯಕ್ಷರಾದ ನಝೀರ್ ಪಾಷರವರು ಧನ್ಯವಾದಗಳನ್ನು ಅರ್ಪಿಸಿ, “ಮಾನವೀಯ ಸೇವೆಯೇ ಅತ್ಯುತ್ತಮ ಸೇವೆ” ಇದನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಡವಳಿಸಿಕೊಳ್ಳಬೇಕೆಂದು ಹೇಳಿದರು.

ಈ ಮಾನವೀಯ ಸಮಾಜ ಸೇವೆಯಲ್ಲಿ ಕೈ ಜೋಡಿಸಿದ ಎಲ್ಲಾ ದೇಶದ ಸಾಮಾಜಿಕ ಸಂಘಟನೆಗಳನ್ನು ಮತ್ತು ಸಾಮಾಜಿಕ ಸಂಘಟನೆಯ ನೇತಾರರನ್ನು ಕತಾರ್ ಚಾರಿಟಿಯ ಅಧಿಕಾರಿಗಳು ಪ್ರಶಂಶಿಸಿದರು.

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...