ನಮ್ಮ ಮಕ್ಕಳನ್ನು ನಿಂದಿಸಲು ಹತ್ತು ಕಾರಣಗಳಿದ್ದರೆ ಪ್ರಶಂಸಿಸಲು ನೂರು ಕಾರಣಗಳಿವೆ..

ಎಸ್ಸೆಸ್ಸೆಲ್ಸಿ ಫಲಿತಾಂಶ ಏನೇ ಬಂದರೂ ನಾವು ಅಭಿನಂದಿಸೋಣ

(www.vknews.com) : ಇನ್ನು ಸ್ವಲ್ಪ ಹೊತ್ತಲ್ಲಿ ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶ ಹೊರಬರಲಿದೆ. ಪರೀಕ್ಷೆ ಬರೆದ ಎಲ್ಲ ವಿದ್ಯಾರ್ಥಿಗಳು ಮತ್ತು ಅವರ ಹೆತ್ತವರು ಬಹಳ ಕಾತರದಿಂದ ಕಾಯ್ತಾ ಇದ್ದಾರೆ.

ಫಲಿತಾಂಶ ಏನೇ ಬರಲಿ ನಾವು ಮಕ್ಕಳನ್ನು ಅಭಿನಂದಿಸೋಣ.
ಅದು ಟಾಪರ್ ಆಗಿರಲಿ, ಡಿಸ್ಟಿಂಕ್ಷನ್ ಆಗಿರಲಿ, ಫಸ್ಟ್ ಕ್ಲಾಸ್ ಆಗಿರಲಿ, ಸೆಕೆಂಡ್ ಕ್ಲಾಸ್ ಆಗಿರಲಿ, ಪಾಸ್ ಕ್ಲಾಸ್ ಆಗಿರಲಿ ಅಥವಾ ಫೇಲ್ ಆಗಿರಲಿ.
ನಮ್ಮ ಮಗುವಿನ ಅಂಕವನ್ನು ಇತರ ಮಕ್ಕಳ ಅಂಕಗಳ ಜೊತೆಗೆ ಹೋಲಿಕೆ ಮಾಡದಿರೋಣ.

ಎರಡು ವಿಷಯಗಳಲ್ಲಿ ಫೇಲಾದರೆ ನೀನು ಎರಡು ಸಬ್ಜೆಕ್ಟ್ ನಲ್ಲಿ ಫೇಲ್ ಅಂತ ಹೇಳುವ ಬದಲು ನಾಲ್ಕು ಸಬ್ಜೆಕ್ಟ್ ನಲ್ಲಿ ಪಾಸಾಗಿದ್ದೀಯಾ ಅಂತ ಅವರನ್ನು ಅಭಿನಂದಿಸೋಣ. ಎಲ್ಲಾ ಸಬ್ಜೆಕ್ಟ್ ನಲ್ಲಿ ಫೇಲಾಗದಿದ್ದರೆ ಕನಿಷ್ಠ ನೀನು ಪರೀಕ್ಷೆಯಾದರೂ ಬರೆದಿದ್ದೀಯಲ್ಲಾ ಅಂತ ಅವರನ್ನು ಪ್ರಶಂಸಿಸೋಣ.
ಮತ್ತೆ ನಿನಗೆ ಬರೆಯಲು ಅವಕಾಶವಿದೆ ಎಂಬ ಧೈರ್ಯ ಕೊಡೋಣ. ಪರೀಕ್ಷೆಯಲ್ಲಿ ಫೇಲಾದರೂ ಬದುಕಿನಲ್ಲಿ ಬಹಳ ದೊಡ್ಡ ಜನ ನೀವಾಗಬಹುದು ಎಂಬ ಆತ್ಮ ವಿಶ್ವಾಸ ತುಂಬೋಣ. ಏನೇ ಫಲಿತಾಂಶ ಬರಲಿ ಖುಷಿ ಖುಷಿಯಾಗಿರೋಣ. ಮಕ್ಕಳ ಮನಸ್ಸಿಗೆ ನೋವಾಗುವ ಅವಮಾನವಾಗುವ ಮಾತುಗಳನ್ನು ಆಡದಿರೋಣ. ಮಗುವಿಗೆ ಪಾಸಿಟಿವ್ ಥಿಂಕಿಂಗ್ ಅನ್ನು ಬೆಳೆಸೋಣ.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮತ್ತು ಅನುತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳಿಗೂ ನನ್ನ ಅಭಿನಂದನೆಗಳು.

ಪಾಸಾದವರಿಗೆ ಪಾಸಾಗಿದ್ದಾರೆ ಎಂಬ ಕಾರಣಕ್ಕೆ ನನ್ನ ಅಭಿನಂದನೆಗಳು. ಫೇಲಾದವರಿಗೆ ಪರೀಕ್ಷೆಯನ್ನು ಎದುರಿಸಿದ್ದೀರಿ ಎಂಬ ಕಾರಣಕ್ಕೆ ನನ್ನ ಅಭಿನಂದನೆಗಳು.

ಬದುಕು ಬಹಳ ಸುಂದರ ಬದುಕು ಬಹಳ ಸರಳ

Life is simple
Life is beautiful
Life is jinga lala

✒️ ರಫೀಕ್ ಮಾಸ್ಟರ್

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...