ಬಡ ಹೆಣ್ಣು ಮಗಳ ಬಾಳಿಗೆ ಆಸರೆಯಾದ MNG ಫೌಂಡೇಶನ್(ರಿ)

ಮಂಗಳೂರು (www.vknews.com) : ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಬಡ ಕುಟುಂಬದ ಮಹಿಳೆಯೊಬ್ಬರು ತನ್ನ ಮಗಳ ಮದುವೆ ಖರ್ಚು ವೆಚ್ಚಗಳಿಗಾಗಿ ಬೇರೆ ಯಾವುದೇ ದಿಕ್ಕು ತೋಚದೆ ತನ್ನ ಅಲಳನ್ನು ತೋಡಿಕೊಂಡ ವಾಯ್ಸ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಆ ತಾಯಿಯ ನೋವನ್ನು ಮನಗಂಡ ಮಂಗಳೂರು ಭಾಗದ MNG ಫೌಂಡೇಶನ್ (ರಿ) ಸಂಸ್ಥೆ ಪದಾಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ಆ ಕುಟುಂಬವನ್ನು ಸಂಪರ್ಕಿಸಿ ಮಾಹಿತಿಯನ್ನು ಕಲೆಹಾಕಿದ್ದು, ಆ ನಂತರದಲ್ಲಿ ಬಡ ಹೆಣ್ಣು ಮಗಳ ಮದುವೆ ಖರ್ಚು ವೆಚ್ಚದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡಿತ್ತು.

ಅದರ ಭಾಗವಾಗಿ MNG ಫೌಂಡೇಶನ್ ಸಂಸ್ಥೆ ತನ್ನ ಅಧಿಕೃತ ಫೇಸ್‌ಬುಕ್‌ ಪೇಜ್, ಇನ್ಸ್ಟಗ್ರಾಮ್ ಖಾತೆ ಮತ್ತು ವಾಟ್ಸಾಪ್ ಗ್ರೂಪುಗಳಲ್ಲಿ ದಾನಿಗಳ ಸಹಾಯಕ್ಕಾಗಿ ಕೋರಿಕೆಯೊಂದನ್ನ ಇಟ್ಟಿತ್ತು. ಇದನ್ನು ವಿಶೇಷವಾಗಿ ಪರಿಗಣಿಸಿ ತುರ್ತಾಗಿ ಸ್ಪಂದಿಸಿದ ದಾನಿಗಳು ಕೇವಲ ಒಂದೂವರೆ ದಿವಸಗಳಲ್ಲಿ ಸುಮಾರು ಒಂಬತ್ತು ಲಕ್ಷದ ಹದಿನಾರು ಸಾವಿರದಷ್ಟು ಮೊತ್ತವನ್ನು ಆ ಕುಟುಂಬದ ಖಾತೆಗೆ ಜಮೆ ಮಾಡಿರುತ್ತಾರೆ.

ಈ ಬಗ್ಗೆ ಸಂಸ್ಥೆಗೆ ಕುಟುಂಬವು ಸಂಪೂರ್ಣ ಮಾಹಿತಿಯನ್ನು ನೀಡಿದ್ದು, ಹಾಗೂ ಮದುವೆ ಖರ್ಚಿನಲ್ಲಿ ಉಳಿದ ಮೊತ್ತವನ್ನು ಇನ್ಯಾವುದಾದರೂ ಬಡ ಹೆಣ್ಣಿನ ಮದುವೆ ಖರ್ಚಿಗಾಗಿ ಸಂಸ್ಥೆಗೆ ಹಸ್ತಾಂತರಿಸುವ ಭರವಸೆಯನ್ನು ನೀಡಿರುತ್ತಾರೆ.

MNG ಫೌಂಡೇಶನ್ (ರಿ) ಸಂಸ್ಥೆಯು ಇತ್ತೀಚಿನ ಲಾಕ್ ಡೌನ್ ಸಂಧರ್ಭದಲ್ಲಿ ಜಾತಿ ಮತ ಭೇದವಿಲ್ಲದೆ ಜಿಲ್ಲೆಯಾದ್ಯಂತ ಅರ್ಹ ಬಡಕುಟುಂಬಗಳಿಗೆ ಕಚ್ಚಾ ಆಹಾರ ಸಾಮಾಗ್ರಿಗಳ ಕಿಟ್ ಗಳನ್ನು ಬಹಳ ಯಶಸ್ವಿಯಾಗಿ ವಿತರಿಸಿ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು.

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...