ತುಂಬೆ ಅಹ್ಮದ್ ಹಾಜಿ ನಿಧನ: ಐ ಎಸ್ ಎಫ್ ಸಂತಾಪ.


ಸೌದಿ ಅರೇಬಿಯಾ(ವಿಶ್ವ ಕನ್ನಡಿಗ ನ್ಯೂಸ್):ಬಿ ಎ ಸಮೂಹ ಸಂಸ್ಥೆಗಳ ಅಧ್ಯಕ್ಷರು,ಸಾಮಾಜಿಕ ಹಾಗು ಶೈಕ್ಷಣಿಕ ರಂಗದ ಅದ್ವಿತೀಯ ನಾಯಕರಾದ ಬಿ ಎ ಅಹ್ಮದ್ ಹಾಜಿ ಮುಹಿಯುದ್ದೀನ್ ರವರ ನಿಧನದಿಂದ ಸಮಾಜ ಮಾನವೀಯ ಗುಣವುಳ್ಳ ಒಬ್ಬ ಉತ್ತಮ ನಾಯಕನನ್ನು ಕಳೆದುಕೊಂಡಿದೆ, ಶೈಕ್ಷಣಿಕ ರಂಗದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿ ಮುಸ್ಲಿಂ ಸಮುದಾಯ ವಿಧ್ಯಾಭ್ಯಾಸದಿಂದ ದೂರ ಉಳಿದ ಸಂಧರ್ಭದಲ್ಲಿ ವಿದ್ಯಾ ಸಂಸ್ಥೆಗಳನ್ನು ಹುಟ್ಟುಹಾಕಿ ಮುಸ್ಲಿಂ ಸಮುದಾಯವನ್ನು ಸುಶಿಕ್ಷಿತರನ್ನಾಗಿಸುವ ಪ್ರಯತ್ನವನ್ನು ಮಾಡಿದರು.ಶೈಕ್ಷಣಿಕ ಮಾತ್ರವಲ್ಲದೆ ಧಾರ್ಮಿಕ ರಂಗಕ್ಕೂ ಅಹ್ಮದ್ ಹಾಜಿ ಕೊಡುಗೆ ಅಪಾರ,ಮಸೀದಿಯ ಅಧ್ಯಕ್ಷರಾಗಿ,ಹಲವಾರು ಸಂಘಟನೆಗಳೊಂದಿಗೆ ಗುರುತಿಸಿಕೊಂಡು ಸಮುದಾಯದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ವ್ಯಕ್ತಿಯಾಗಿದ್ದರು.ಅಹ್ಮದ್ ಹಾಜಿಯವರ ಅಗಲುವಿಕೆಯಿಂದ ಸಮಾಜ ಒಬ್ಬ ಉನ್ನತ ನಾಯಕನನ್ನು ಕಳೆದುಕೊಂಡಿದೆ ಎಂದು ಇಂಡಿಯನ್ ಸೋಶಿಯಲ್ ಫಾರಂ ತೀವ್ರ ಸಂತಾಪ ಸೂಚಿಸಿದೆ,ಇವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿ ಇವರ ಕುಟುಂಬಕ್ಕೆ ಸೃಷ್ಟಿಕರ್ತನು ದಯಪಾಲಿಸಲಿ.
ಇಂಡಿಯನ್ ಸೋಶಿಯಲ್ ಫೋರಮ್ ಸೌದಿ ಅರೇಬಿಯಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಸಂಪಾದಕರು,
ವಿಶ್ವ ಕನ್ನಡಿಗ ನ್ಯೂಸ್

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...