ಸರಕಾರಿ ಪ್ರೌಢ ಶಾಲೆಗಳು ಸಂಪನ್ಮೂಲ ಕೇಂದ್ರಗಳಾಗಲಿ: ಮೇಜರ್ ಸಿದ್ಧಲಿಂಗಯ್ಯ ಹಿರೇಮಠ

ಧಾರವಾಡ(ವಿಶ್ವಕನ್ನಡಿಗ ನ್ಯೂಸ್): ವಿದ್ಯಾರ್ಥಿಗಳ ಕಲಿವಿನಫಲ ಸಂವರ್ಧನೆಗೆ ಪೂರಕವಾಗಿ ಸರಕಾರಿ ಪ್ರೌಢ ಶಾಲೆಗಳು ವಿಶಿಷ್ಟ ಸಂಪನ್ಮೂಲ ಕೇಂದ್ರಗಳಾಗಿ ಸಿದ್ಧಗೊಳ್ಳುವಲ್ಲಿ ಮುಖ್ಯ ಶಿಕ್ಷಕರು ತೀವ್ರ ಆಸಕ್ತಿಯಿಂದ ಶ್ರಮಿಸುವ ಅಗತ್ಯವಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಳಗಾವಿ ವಿಭಾಗದ ಹೆಚ್ಚುವರಿ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಹೇಳಿದರು.

ಅವರು ಗುರುವಾರ ತಮ್ಮ ಕಚೇರಿ ವತಿಯಿಂದ ಹಮ್ಮಿಕೊಂಡಿದ್ದ ಬೆಳಗಾವಿ ವಿಭಾಗ ಮಟ್ಟದ ಕೌನ್ಸೆಲಿಂಗ್‌ದಲ್ಲಿ ಸರಕಾರಿ ಪ್ರೌಢ ಶಾಲಾ ಗ್ರೇಡ್-೨ ಸಹ ಶಿಕ್ಷಕ ವೃಂದದಿAದ ಸರಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಗ್ರುಪ್-ಬಿ ವೃಂದಕ್ಕೆ ಬಡತಿ ಪಡೆದ ಶಿಕ್ಷಕ-ಶಿಕ್ಷಕಿಯರಿಗೆ ಆದೇಶ ಪತ್ರಗಳನ್ನು ವಿತರಿಸಿ ಮಾತನಾಡುತ್ತಿದ್ದರು. ಶಾಲೆಯ ಮುಖ್ಯಾಧ್ಯಾಪಕರು ನಿರಂತರ ಕ್ರಿಯಾಶೀಲ ನೆಲೆಯಲ್ಲಿ ತಮ್ಮ ಸಾಮಾಜಿಕ ಮತ್ತು ನೈತಿಕ ಜವಾಬ್ದಾರಿಯನ್ನು ಅರಿತು ಹುದ್ದೆಯ ಅಧಿಕಾರವನ್ನು ಧನಾತ್ಮಕ ನೆಲೆಯಲ್ಲಿ ಬಳಕೆ ಮಾಡಿಕೊಂಡು ಶಾಲೆಯ ಆಂತರಿಕ ಮತ್ತು ಬಾಹ್ಯ ಸೌಂದರ್ಯಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಬೇಕಾಗುತ್ತದೆ ಎಂದರು.

ಈ ಬಡತಿ ಪ್ರಕ್ರಿಯೆಯ ಮೂಲಕ ಪ್ರೌ. ಶಾ. ಸಹ ಶಿಕ್ಷಕರಿಗೆ ಗೆಝೆಟೆಡ್ ಹುದ್ದೆ ಪ್ರಾಪ್ತವಾಗುತ್ತಿದ್ದು, ಆ ಮೂಲಕ ಸರಕಾರಿ ಪ್ರೌಢ ಶಾಲೆಗಳು ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅತಿ ಹೆಚ್ಚು ಸಂಪನ್ಮೂಲಗಳನ್ನು ಹೊಂದುವAತೆ ಮಾಡಿ ಉತ್ಕೃಷ್ಟ ಮಾನವ ಸಂಪನ್ಮೂಲ ಸಿದ್ಧಗೊಳ್ಳುವಲ್ಲಿ ಎಲ್ಲ ಮುಖ್ಯಾಧ್ಯಾಪಕರು ಕ್ರಿಯಾಪ್ರೇರಕ ತೆರೆದುಕೊಳ್ಳಬೇಕು ಎಂದೂ ಮೇಜರ್ ಹಿರೇಮಠ ಹೇಳಿದರು.
ಪ್ರಭಾರಿ ಜಂಟಿ ನಿರ್ದೇಶಕ ಮೃತ್ಯುಂಜಯ ಕುಂದಗೋಳ ಮಾತನಾಡಿ, ಲಭಿಸಿದ ಗೆಝೆಟೆಡ್ ಹುದ್ದೆಯ ಬಡತಿ ಅವಕಾಶವನ್ನು ಸರಕಾರಿ ಪ್ರೌಢ ಶಾಲೆಗಳ ಸರ್ವತೋಮುಖ ಏಳ್ಗೆಗೆ ಶ್ರಮಿಸಲು ಎಲ್ಲ ಮುಖ್ಯ ಶಿಕ್ಷಕರು ಬಳಸಿಕೊಳ್ಳಬೇಕು. ನಮ್ಮ ಆಯುಕ್ತರು ಬಡತಿ ಆದೇಶದೊಂದಿಗೆ ಪ್ರತಿಯೊಬ್ಬರಿಗೂ ನೀಡಿರುವ ಹಸಿರು ಶಾಹಿಯ ಪೆನ್ನು ಎಲ್ಲಿಯೂ ದುರ್ಬಳಕೆಯಾಗದಂತೆ ಎಲ್ಲ ಮುಖ್ಯ ಶಿಕ್ಷಕರೂ ಕಾಳಜಿವಹಿಸಬೇಕು ಎಂದರು.

ಉಪನಿರ್ದೇಶಕ ಆರ್.ಎಸ್. ಮುಳ್ಳೂರ ಮಾತನಾಡಿ, ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರು ಕರ್ನಾಟಕ ಸಿವ್ಹಿಲ್ ಸೇವಾ ನಿಯಮಗಳನ್ನು ಅಧ್ಯಯನ ಮಾಡುವ ಮೂಲಕ ತಮಗೆ ಲಭಿಸಿದ ಪತ್ರಾಂಕಿತ ಹುದ್ದೆಯ ಅಧಿಕಾರವನ್ನು ನಿಯಮಾನುಸಾರ ಬಳಕೆ ಮಾಡಿಕೊಳ್ಳಬೇಕು. ಸರಕಾರದ ಧ್ಯೇಯ-ಧೋರಣೆಗೆಳಿಗೆ ವ್ಯತಿರಿಕ್ತವಾಗಿ ಯಾವುದೂ ನಡೆಯದಂತೆ ಆಡಳಿತದಲ್ಲಿ ಮುನ್ನೆಚ್ಚರಿಕೆ ವಹಿಸಬೇಕು ಎಂದರು.

ಹಿರಿಯ ಸಹಾಯಕ ನಿರ್ದೇಶಕ ಕೇಶವ ಪೆಟ್ಲೂರ, ಸಾರ್ವಜನಿಕ ಸಂಪರ್ಕಾಧಿಕಾರಿ ವಿದ್ಯಾ ನಾಡಿಗೇರ, ಇ-ಆಡಳಿತ ನಿರ್ವಹಣಾಧಿಕಾರಿ ಶಾಂತಾ ಮೀಸಿ, ಕಿರಿಯ ಸಂಶೋಧನಾಧಿಕಾರಿ ಮಹಾದೇವಿ ಮಾಡಲಗೇರಿ, ಸಹಾಯಕ ನಿರ್ದೇಶಕ ಜೆ. ಪ್ರಕಾಶ, ಹಿರಿಯ ಚಿತ್ರಕಲಾ ವಿಷಯ ಪರಿವೀಕ್ಷಕ ಪಿ.ಆರ್. ಬಾರಕೇರ, ಅಧೀಕ್ಷಕ ರಮೇಶ ದಂಡಿಗೆದಾಸರ, ವಿನಯಾ ಗೊಜನೂರ, ಸಾವಿತ್ರಿ ಪಟ್ಟಣಶೆಟ್ಟಿ, ಲಕ್ಷö್ಮಣ ಪಾಟೀಲ, ಪ್ರಮೋದಿನಿದೇವಿ, ಮಂಜುನಾಥ ಕಲಾದಗಿ, ಐ.ಬಿ. ಹರಕುಣಿ ಇದ್ದರು. ಗುರುವಾರ ಕೌನ್ಸೆಲಿಂಗ್‌ಗೆ ಹಾಜರಾದ ೧೩೨ ಶಿಕ್ಷಕರ ಪೈಕಿ ಒಟ್ಟು ೮೬ ಜನರು ಸರ್ಕಾರಿ ಪ್ರೌ.ಶಾ. ಮುಖ್ಯ ಶಿಕ್ಷಕ ಹುದ್ದೆಯ ಬಡತಿ ಆದೇಶಗಳನ್ನು ಪಡೆದುಕೊಂಡರು. ಹೆಚ್ಚುವರಿ ಯಾದಿಯಲ್ಲಿರುವ ಅರ್ಹ ಶಿಕ್ಷಕ-ಶಿಕ್ಷಕಿಯರ ಬಡತಿ ಕೌನ್ಸೆಲಿಂಗ್ ಆಗಷ್ಟ ೨೧ ರಂದು (ಶುಕ್ರವಾರ) ಮುಂಜಾನೆ ೧೧ ಗಂಟೆಗೆ ನಡೆಯಲಿದೆ.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...