ಮಂಜೇಶ್ವರ ಪಂಚಾಯತ್ ಚುನಾವಣೆಯಲ್ಲಿ 15 ವಾರ್ಡ್ ಗಳಲ್ಲಿ ಸ್ಪರ್ಧಿಸಲು ಎಸ್.ಡಿ.ಪಿ.ಐ. ತೀರ್ಮಾನ

ಮಂಜೇಶ್ವರ(ವಿಶ್ವಕನ್ನಡಿಗ ನ್ಯೂಸ್): ಅಕ್ಟೋಬರಲ್ಲಿ ನಡೆಯುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎಸ್.ಡಿ.ಪಿ.ಐ 15 ವಾರ್ಡ್ ಗಲ್ಲಿ ಸ್ಪರ್ಧಿಸಲಿದೆ ಎಂದು ಹೊಸಂಗಡಿಯಲ್ಲಿ ಇಂದು ನಡೆದ ಪಂಚಾಯತ್ ಸಮಿತಿ ತೀರ್ಮಾನಿಸಿದೆ.

ಭ್ರಷ್ಟಾಚಾರ ಆಡಳಿತದ ವಿರುದ್ಧ ಮತ್ತು ಫ್ಯಾಸಿಸ್ಟ್ ಗಳ ವಿರುದ್ಧ ನಡೆಯುವ ಹೋರಾಟದ ಭಾಗವಾಗಿದೆ 15 ವಾರ್ಡ್ ಗಳಲ್ಲಿ ಸ್ಪರ್ಧಿಸಲು ತೀರ್ಮಾನ ಕೈಗೊಂಡಿರುವುದು ಎಂದು ಎಸ್.ಡಿ.ಪಿ.ಐ ಮಂಜೇಶ್ವರ ಪಂಚಾಯತ್ ಸಮಿತಿಯ ಸದಸ್ಯರು ತಿಳಿಸಿದರು.

ಸಭೆಯಲ್ಲಿ ಎಸ್.ಡಿ.ಪಿ.ಐ. ಮಂಜೇಶ್ವರ ಪಂಚಾಯತ್ ಸಮಿತಿ ಅಧ್ಯಕ್ಷರಾದ ಅಶ್ರಫ್ ಬಡಾಜೆ ಅಧ್ಯಕ್ಷತೆ ವಹಿಸಿದ್ದರು. ಫೈಝಲ್ ಮಚ್ಛಂಪಾಡಿ, ಸಿದ್ದೀಕ್ ಹೊಸಂಗಡಿ, ಅಶ್ರಫ್ ಉದ್ಯಾವರ, ರಿಯಾಜ್ ಕುನ್ನಿಲ್, ಬಾಸಿತ್ ಕಡಪ್ಪುರಂ, ಹಸ್ಸನ್ ಮಚ್ಛಮ್ಪಾಡಿ, ಯಾಕೂಬ್ ಹೊಸಂಗಡಿ ಎಂಬಿವರು ಉಪಸ್ಥಿತರಿದ್ದರು.

    Leave Your Comment

    Your email address will not be published.*

    ಚಾಟ್ ಮಾಡಿ
    1
    VK News Official Chat
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...