ಮಕ್ಕಾ(www.vknews.in): ಮಕ್ಕಾದ ಐತಿಹಾಸಿಕ ಸ್ಥಳವಾದ ಜಬಲುನ್ನೂರ್ ಪರ್ವತದ ‘ಹಿರಾ ಗುಹೆ’ಯ ಸಂದರ್ಶನಕ್ಕೆ ಶೀಘ್ರದಲ್ಲೇ ಕೇಬಲ್ ಕಾರ್ ಸೌಲಭ್ಯವು ಲಭ್ಯವಾಗಲಿದೆ. ಸಮುದ್ರ ಮಟ್ಟದಿಂದ ಸಾವಿರಾರು ಮೀಟರ್ ಎತ್ತರದಲ್ಲಿರುವ ಹಿರಾ ಗುಹೆ ಸಂದರ್ಶಿಸಲು ಇಚ್ಚಿಸುವ ಯಾತ್ರಾರ್ಥಿಗಳಿಗೆ ಈ ಕೇಬಲ್ ಕಾರ್ ವರದಾನವಾಗಲಿದೆ.
ಈ ಕುರಿತು ಮಾಹಿತಿ ನೀಡಿದ ಸೌದಿ ಹಜ್ ಹಾಗೂ ಉಮ್ರಾ ಸಚಿವಾಲಯದ ಅಧಿಕಾರಿಗಳು, ಕೇಬಲ್ ಕಾರ್ ನಿರ್ವಹಣಾ ಕಾರ್ಯವು ಪ್ರಗತಿಯಲ್ಲಿದ್ದು, ಜಬಲುನ್ನೂರ್ ಪರ್ವತದ ಶೇಖಡಾ 75ರಷ್ಟು ದೂರವನ್ನು ಈ ಕಾರ್ ಗಳು ಕ್ರಮಿಸಲಿದೆ ಹಾಗೂ ನಂತರ ಸಂದರ್ಶಕರಿಗೆ ವಿರಮಿಸಲು ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ. ಉಳಿದ ದೂರವನ್ನು ಸಂದರ್ಶಕರು ಕಾಲ್ನಡಿಗೆಯಲ್ಲೇ ಕ್ರಮಿಸಬೇಕಾಗುತ್ತದೆ ಎಂದು ತಿಳಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.