ಕಾಸರಗೋಡಿನಿಂದ ದ.ಕ ಪ್ರಯಾಣ ಮಾಡುವವರಿಗೆ ಬೇಕಾದ ಪಾಸ್ ವ್ಯವಸ್ಥೆಯನ್ನು ಹಿಂಪಡೆಯಲಾಗಿದೆ: ಜಿಲ್ಲಾಧಿಕಾರಿ ಡಾ.ಡಿ ಸಜಿತ್ ಬಾಬು

ಕಾಸರಗೋಡು(ವಿಶ್ವಕನ್ನಡಿಗ ನ್ಯೂಸ್): ಕೇರಳದ ಕಾಸರಗೋಡು ಬಾಗದಿಂದ ಕರ್ನಾಟಕದ ದ.ಕ ಪ್ರಯಾಣಿಸಲು ಬೇಕಾದ ಪಾಸ್ ವ್ಯವಸ್ಥೆಯನ್ನು ಹಿಂಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ ಸಜಿತ್ ಬಾಬು ತಿಳಿಸಿದ್ದಾರೆ.

ಕೊರೋನ ವೈರಸ್ ಹಿನ್ನಲೆ ರಾಜ್ಯದ ಗಡಿ ಪ್ರದೇಶಗಳನ್ನು ಬಂದ್ ಮಾಡಲಾಗಿತ್ತು. ಇದೀಗ ಕೆಲಸ ಹಾಗೂ ಇನ್ನಿತರ ಕಾರ್ಯಗಳಿಗೆ ಗಡಿ ಪ್ರದೇಶಗಳಲ್ಲಿ ತೆರಳಲು ಅನುಮತಿ ನೀಡಲಾಗುವುದು ಎಂದಿದ್ದಾರೆ.

ಈ ಕುರಿತು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಸಲ್ಲಿಸಿದ್ದರು. ರಿಟ್ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಬುಧವಾರ ಮಹತ್ವದ ಆದೇಶ ನೀಡಿದೆ.

ಚೆಕ್ ಪೋಸ್ಟ್ಗಳಲ್ಲಿ ಬೇಕಾದ ಎಲ್ಲಾ ತಪಾಸಣೆಗಳನ್ನು ನಡೆಸಿ ಪ್ರಯಾಣ ಮಾಡುವವರ ವಿವರಗಳನ್ನು ದಾಖಲಿಸಾಗುವುದು ಎಂದಿದ್ದಾರೆ.

ಈಗಿರುವ ರಾಷ್ಟ್ರೀಯ ಹೆದ್ದಾರಿ 66 (ತಲಪ್ಪಾಡಿ ಚೆಕ್-ಪೋಸ್ಟ್) ಜೊತೆಗೆ, ಪಾಣತ್ತೂರು, ಮಾಣಿಮೂಲೆ, ಪೆರ್ಲ, ಮತ್ತು ಜಾಲ್ಸೂರು ಮುಖ್ಯ ರಸ್ತೆಗಳ ಮೂಲಕ ಕರ್ನಾಟಕಕ್ಕೆ ಪ್ರಯಾಣಿಸಲು ಅನುಮತಿ ನೀಡಲಾಗುವುದು.

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...