ಉಪ್ಪಿನಂಗಡಿ ನೇತ್ರಾವತಿ ನದಿಯಲ್ಲಿ ಮುಳುಗುವ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ರಕ್ಷಿಸಿದ ಪುತ್ತೂರು ತಹಶೀಲ್ದಾರ್ ನೇತೃತ್ವದ ಗೃಹರಕ್ಷಕದಳದ ಪ್ರವಾಹರಕ್ಷಣಾ ತಂಡ

(www.vknews.in)

ಇಂದು ಮಧ್ಯಾಹ್ನ 11.30 ರ ಸುಮಾರಿಗೆ ಸದಾನಂದ ಶೆಟ್ಟಿ(ಮೂರುಗೊಳಿ ನಿವಾಸಿ)ಎನ್ನುವವರು ದೇವಾಲಯದ ಸುತ್ತ ಮುತ್ತ ತಿರುಗಾಡುತ್ತ ಸ್ನಾನ ಘಟ್ಟದ ಬಳಿ ನೀರಿಗೆ ಇಳಿಯುತ್ತಿರುವುದು ನೋಡಿದ ,ಕರ್ತವ್ಯದಲ್ಲಿದ್ದ ಪ್ರವಾಹ ರಕ್ಷಣಾ ಸಿಬ್ಬಂದಿಗಳು ಮತ್ತು ಈಜುಗಾರರು ಅವರನ್ನು ನೀರಿಗೆ ಇಳಿಯದಂತೆ ಮುನ್ನೆಚ್ಚರಿಕೆ ಕೊಡುತ್ತಿದ್ದಂತೆ ಇವರ ಮಾತನ್ನು ಕೇಳದೇ ಇಳಿದಾಗ ನೀರಿನ ಸೆಳೆತಕ್ಕೆ ಸಿಕ್ಕು ಕೊಂಡು ಮುಳುಗಿದರು.

ಇದನ್ನು ನೋಡಿದ ಪುತ್ತೂರು ತಹಶಿಲ್ದಾರ್ ನೇತೃತ್ವದ ಗೃಹರಕ್ಷಕ ದಳ ಉಪ್ಪಿನಂಗಡಿಯ ಪ್ರವಾಹ ರಕ್ಷಣಾ ತಂಡ ಮತ್ತು ತಾಲೂಕು ಆಡಳಿತದ ಈಜುಗಾರರು ಗೃಹರಕ್ಷಕ ದಳದ ದೋಣಿಯಲ್ಲಿ ಸಾಗಿ ನದಿ ಮದ್ಯದಲ್ಲಿ ಮುಳುಗುತ್ತಿದ್ದ ವ್ಯಕ್ತಿಯನ್ನು ಹುಟ್ಟು ಉಪಯೋಗಿಸಿ ದೋಣಿಯ ಒಳಗೆ ಎಳೆದು ಕುಳ್ಳಿರಿಸಿ ,ನೀರಿನ ಸೆಳೆತ ಹೆಚ್ಚು ಇದ್ದ ಕಾರಣ ಕಡವಿನ ಬಾಗಿಲಿನ ದಡಕ್ಕೆ ತಲುಪಿಸಿದರು.

ಅಲ್ಲಿಂದ ದೋಣಿಗೆ OBM ಯಂತ್ರ  ಅಳವಡಿಸಿ ನಂತರ ದೇವಾಲಯದ ಮುಂಬಾಗದಲ್ಲಿ ತಂದು ಬಿಡಲಾಯಿತು ಈ ರಕ್ಷಣಾ ಕಾರ್ಯದಲ್ಲಿ ಪ್ರಭಾರ ಘಟಕಾಧಿಕಾರಿ ದಿನೇಶ್. ಬಿ,ಗೃಹರಕ್ಷಕರ ವಸಂತ.ಕೆ,ಈಜುಗಾರರಾದ ಸುದರ್ಶನ್, ಚೆನ್ನಪ್ಪ,ವಿಶ್ವನಾಥ್ ಶೆಟ್ಟಿಗಾರ್, ಹಾಜಿ ಇಸ್ಮಾಯಿಲ್ ಭಾಗವಹಿಸಿಜರು ಈವೇಳೆ ಉಪ್ಪಿನಂಗಡಿ ಪೋಲಿಸ್ ಸಿಬ್ಬಂದಿಗಳು ಸಹಕರಿಸಿದರು

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...